ಹೈದರಾಬಾದ್​:ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್​) ಸರ್ಕಾರ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ವಿರೋಧಿಸಿ ಆಂಧ್ರಪ್ರದೇಶ ಸಿಎಂ ವೈ.ಎಸ್​.ಜಗನ್​ ರೆಡ್ಡಿ ಸಹೋದರಿ,ಯುವಜನ ಶ್ರಮಿಕ ರೈತು ತೆಲಂಗಾಣ ಪಾರ್ಟಿ ಮುಖ್ಯಸ್ಥೆ ವೈ.ಎಸ್​.ಶರ್ಮಿಳಾ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಜೇನ್ನೊಣಗಳು ದಾಳಿ ಇಟ್ಟಿರುವ ಘಟನೆ ನಡೆದಿದೆ.
ತೆಲಂಗಾಣ ರಾಜ್ಯಾದ್ಯಂತ ಪ್ರಜಾ ಪ್ರಸ್ಥಾನಂ ಪಾದಯಾತ್ರೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಕಾರ್ಯಕರ್ತರೆಲ್ಲಾ ದಿಕ್ಕಾಪಾಲಾಗಿ ಓಡಿದ ಘಟನೆ ನಡೆದಿದೆ.
ಟಿಆರ್​ಎಸ್​ ಸರ್ಕಾರ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದೆ. ಅಭಿವೃದ್ಧಿಯ ಯಾವುದೇ ಭರವಸೆಗಳನ್ನೂ ಈಡೇರಿಸಿಲ್ಲ, ಜನವಿರೋಧಿ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಈ ಪಾದಯಾತ್ರೆ ನಡೆಯುತ್ತಿದೆ. ದುರ್ಶಗಾನಿಪಲ್ಲಿ ಗ್ರಾಮದಲ್ಲಿ ಮರದ ಕೆಳಗೆ ಜನರೊಂದಿಗೆ ಅವರು ಮಾತುಕತೆ ನಡೆಸುತ್ತಿದ್ದರು. ಆಗ ಅದೇ ಮರಕ್ಕೆ ಗೂಡುಕಟ್ಟಿದ್ದ ಜೇನು ನೊಣಗಳು ಶರ್ಮಿಳಾ ಮತ್ತು ಉಳಿದವರ ಮೇಲೆ ದಾಳಿ ನಡೆಸಿವೆ.
ಶರ್ಮಿಳಾರ ಜತೆಗಿದ್ದ, ಪಕ್ಷದ ಹಲವು ಕಾರ್ಯಕರ್ತರಿಗೆ ಜೇನುನೊಣಗಳು ಕಚ್ಚಿವೆ. ಶರ್ಮಿಳಾರನ್ನು ರಕ್ಷಿಸಲು ಅಲ್ಲಿದ್ದವರೆಲ್ಲ ಟವೆಲ್​ಗಳನ್ನು ಬೀಸಿ, ಜೇನುನೊಣಗಳನ್ನು ದೂರ ಓಡಿಸಲು ಪ್ರಯತ್ನಿಸಿದ್ದಾರೆ. ಅದಾದ ನಂತರ ಮತ್ತೆ ಪಾದಯಾತ್ರೆ ಮುಂದುವರಿದಿದೆ.
ಕೆಲ ದಿನಗಳಿಂದ ಈ ಪಾದಯಾತ್ರೆ ನಡೆಯುತ್ತಿದ್ದು, ಇದಾಗಲೇ 400 ಕಿಮೀ ಪೂರೈಸಲಾಗಿದೆ.
‘ಸಾರಿ… ನಿಮ್​ ಮದ್ವೆಯಾಗಿದೆ ಅಂತ ಗೊತ್ತಾಗ್ಲಿಲ್ಲ… ನೀವು ಮುಸ್ಲಿಂ ಮಹಿಳೆಯಾಗಿರೋದ್ರಿಂದ ಹೀಗೆ…’

ಹಿಜಾಬ್​ ವಿಚಾರಣೆಗೆ ಮತ್ತೆ ಹಿನ್ನಡೆ: ಪರೀಕ್ಷೆಗೂ ಇದಕ್ಕೂ ಸಂಬಂಧವಿಲ್ಲ, ಸಮಸ್ಯೆ ಸೂಕ್ಷ್ಮಮಾಡ್ಬೇಡಿ ಎಂದ ‘ಸುಪ್ರೀಂ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 7 =
Remember me
