ಚಿತ್ತೂರು (ಆಂಧ್ರಪ್ರದೇಶ): ಪತಿಯ ಹಿಂಸೆ ತಾಳದೇ ಪತ್ನಿಯೊಬ್ಬಳು ಗಂಡನ ರುಂಡವನ್ನು ಕಡಿದು ಅದನ್ನು ಚೀಲದೊಳಕ್ಕೆ ಹಾಕಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ ಭಯಾನಕ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ರೇಣಿಗುಂಟದಲ್ಲಿ ನಡೆದಿದೆ.
ಇಂಥದ್ದೊಂದು ಕೃತ್ಯ ಎಸಗಿದವಳನ್ನು ವಸುಂಧರಾ ಎಂದು ತಿಳಿದುಬಂದಿದೆ. ಕೊಲೆಯಾದ ಪತಿ ರವಿಚಂದ್ರನ್ (53).ಈ ದಂಪತಿಗೆ 20 ವರ್ಷದ ಮಗನಿದ್ದಾನೆ.
ಮೊದಲಿನಿಂದಲೂ ಗಂಡ ಜಗಳವಾಡುತ್ತಿದ್ದ. ಆತನ ಹಿಂಸೆ ತಾಳಿಕೊಂಡು ಸಾಕಾಗಿಹೋಗಿತ್ತು. 20 ವರ್ಷಕ್ಕೂ ಹೆಚ್ಚು ಕಾಲ ಹೇಗೋ ಸಂಸಾರ ಮಾಡಿದೆ. ಆದರೆ ಇನ್ನು ಆತನ ಹಿಂಸೆಯನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಆಗಿದ್ದು ಆಗಲಿ ಎಂದು ರುಂಡ ಕಡಿದು ಹಾಕಿದ್ದೇನೆ. ಪೊಲೀಸರಿಗೆ ಶರಣಾಗಿದ್ದೇನೆ. ಏನು ಶಿಕ್ಷೆ ಕೊಟ್ಟರೂ ಎದುರಿಸಲು ಸಿದ್ಧ ಎಂದಿದ್ದಾಳೆ ವಸುಂಧರಾ!
ಬೆಳಗ್ಗೆ ದಂಪತಿ ನಡುವೆ ಸಣ್ಣಪುಟ್ಟ ಜಗಳ ನಡೆದಿದೆ. ಈ ಹಿನ್ನೆಲೆ ಕುಪಿತಳಾದ ವಸುಂಧರಾ, ಚಾಕುವಿನಿಂದ ತನ್ನ ಪತಿ ಮೇಲೆ ಬರ್ಬರವಾಗಿ ಹಲ್ಲೆ ಮಾಡಿ ತಲೆ ಕತ್ತರಿಸಿದ್ದಾಳೆ. ನಂತರ ರುಂಡವನ್ನು ಚೀಲದಲ್ಲಿ ತುಂಬಿಕೊಂಡು ಬಂದು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ರಕ್ತ ಸೋರುತ್ತಿದ್ದ ಚೀಲ ನೋಡಿ ಬೆಚ್ಚಿಬಿದ್ದಿದ್ದಾರೆ ಪೊಲೀಸರು. ನಂತರ ಆಕೆಯಿಂದ ವಿಷಯ ತಿಳಿದು ಘಟನಾ ಸ್ಥಳಕ್ಕೆ ಹೋಗಿ ಮೃತದೇಹವನ್ನು ತಿರುಪತಿ ಎಸ್‌ವಿ ವೈದ್ಯಕೀಯ ಕಾಲೇಜಿಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
VIDEO: ಆನ್‌ಲೈನ್‌ ಮದ್ವೆ ಹಳೆಯದಾಯ್ತು- ಈಗ ಬಂತು ಮೆಟಾವರ್ಸ್: ಭಾರತದ ಪ್ರಪ್ರಥಮ ವಿವಾಹ ಇಲ್ಲಿದೆ ನೋಡಿ…

ಸೂರ್ಯ, ಚಂದ್ರನ ಬಳಿಕ ಕೃತಕ ‘ಮಿನಿ ಮೂನ್‌’ ಸೃಷ್ಟಿಸಿ ಬೆರಗುಗೊಳಿಸಿದ ಚೀನಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 11 =
Remember me
