ಅಮರಾವತಿ:ಶಾಲೆಗಳನ್ನು ಆರಂಭಿಸಬೇಕೆ, ಬೇಡವೇ ಎಂಬ ಬಗ್ಗೆ ಎಲ್ಲಾ ರಾಜ್ಯ ಸರ್ಕಾರಗಳಿಗೂ ಸವಾಲಾಗಿಯೇ ಉಳಿದಿದೆ. ಈ ನಡುವೆಯೇ ಆಂಧ್ರಪ್ರದೇಶದಲ್ಲಿ ಶಾಲೆಗಳನ್ನು ತೆರೆಯಲಾಗಿದೆ.
ಆದರೆ ಆಘಾತಕಾರಿ ಸಂಗತಿ ಎಂದರೆ, ಶಾಲೆ ತೆರೆದ ಮೂರು ದಿನಗಳಲ್ಲಿ 160 ಶಿಕ್ಷಕರು ಮತ್ತು 262 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಶಿಕ್ಷಣ ಇಲಾಖೆ ಹೇಳಿದೆ.
ನ.2 ರಿಂದ 9 ಮತ್ತು 10 ನೇ ತರಗತಿಯ ಮಕ್ಕಳಿಗೆ ಶಾಲೆಗಳು ಪುನರಾರಂಭಿಸಲಾಗಿದೆ. ಹಲವರು ಪೋಷಕರು ಇದಕ್ಕೆ ಸಮ್ಮತಿ ನೀಡದಿದ್ದರೂ, ಮಕ್ಕಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಶಾಲೆಯನ್ನು ಆರಂಭ ಮಾಡಲಾಗಿತ್ತು. ಇದೀಗ ಈ ವರದಿ ಬಹಿರಂಗಗೊಂಡಿದೆ.
ಆದರೆ ಇದರಿಂದ ಆತಂಕಪಡುವ ಅಗತ್ಯವಿಲ್ಲ ಎಂದು ಶಿಕ್ಷಣ ಇಲಾಖೆ ಆಯುಕ್ತ ವಿ ಚಿನ್ನ ವೀರಭದ್ರುಡು ಪ್ರತಿಕ್ರಿಯಿಸಿದ್ದಾರೆ. ರಾಜ್ಯಾದ್ಯಂತ ಸುಮಾರು 4 ಲಕ್ಷ ವಿದ್ಯಾರ್ಥಿಗಳು ಮತ್ತು 99 ಸಾವಿರ ಮಂದಿ ಶಿಕ್ಷಕರು ಶಾಲೆಗೆ ಹಾಜರಾಗಿದ್ದಾರೆ. ಈ ಸಂಖ್ಯೆಗೆ ಹೋಲಿಸಿಕೊಂಡರೆ ಕರೊನಾ ವೈರಸ್‌ಗೆ ತುತ್ತಾಗಿರುವವರು ಅತ್ಯಂತ ಕಡಿಮೆ ಮಂದಿ ಎಂದಿದ್ದಾರೆ.
ಇದನ್ನೂ ಓದಿ:ನೀಳವೇಣಿ ನೀಲಾಂಶಿ​, ಕೇಶದಿಂದಲೇ ಗಿನ್ನೆಸ್ ರೆಕಾರ್ಡ್!; ಈಕೆಯ ತಲೆಕೂದಲ ಉದ್ದವೆಷ್ಟು ಗೊತ್ತೇ?
ಒಟ್ಟೂ ಮಕ್ಕಳ ಸಂಖ್ಯೆಗೆ ಹೋಲಿಸಿದರೆ ಶೇ 0.1ರಷ್ಟು ಮಕ್ಕಳಿಗೆ ಸೋಂಕು ತಗುಲಿದೆ. ಶಾಲೆ ತೆರೆದಿದ್ದರಿಂದಲೇ ಸೋಂಕು ತಗುಲಿದೆ ಎಂದು ಹೇಳಲಾಗುವುದಿಲ್ಲ ಎಂದೂ ಅವರು ವಿವರಣೆ ನೀಡಿದ್ದಾರೆ. ಪ್ರತಿ ಶಾಲೆಯಲ್ಲೂ ಕೋವಿಡ್‌ 19 ಮಾರ್ಗಸೂಚಿ ಅನುಸರಿಸಲಾಗುತ್ತಿದೆ. ಪ್ರತಿ ಕೊಠಡಿಯಲ್ಲಿ ಕುಳಿತುಕೊಳ್ಳಲು 15 ಅಥವಾ 16 ವಿದ್ಯಾರ್ಥಿಗಳಿಗಷ್ಟೇ ಅವಕಾಶ ನೀಡಲಾಗುತ್ತಿದೆ.
ಆದ್ದರಿಂದ ಶಾಲೆ ತೆರೆಯುವುದಕ್ಕೂ, ಕೋವಿಡ್‌ ಬಂದಿದೆ ಎನ್ನುವುದಕ್ಕೂ ಸಂಬಂಧ ಇದೆ ಎಂದು ಕಲ್ಪಿಸಲು ಆಗದು ಎಂದಿದ್ದಾರೆ.
‘9 ಮತ್ತು 10ನೇ ತರಗತಿಯ 9.75 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಸಿದ್ದು, 3.93 ಲಕ್ಷ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿದ್ದಾರೆ. 1.1 ಲಕ್ಷ ಶಿಕ್ಷಕರಲ್ಲಿ, 99 ಸಾವಿರ ಶಿಕ್ಷಕರು ಕೆಲಸಕ್ಕೆ ಹಾಜರಾಗಿದ್ದಾರೆ. ‘1.1 ಲಕ್ಷ ಶಿಕ್ಷಕರಲ್ಲಿ 160 ಶಿಕ್ಷಕರಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ’ ಎಂದು ಅವರು ಅಂಕಿಅಂಶ ನೀಡಿದರು.
ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೂ, ಕೊರೊನಾ ಸೋಂಕಿನ ಬಗ್ಗೆ ಹೆದರಿಕೆ ಇರುವುದರಿಂದ, ಶಾಲೆಯಲ್ಲಿ ಮಕ್ಕಳ ಹಾಜರಾತಿ ಶೇ 40ರಷ್ಟಿದೆ ಎಂದರು.
ಅತ್ತೆಗೆ ಅಕ್ರಮವಾಗಿ ಹುಟ್ಟಿದ್ದಾನೆ ನನ್ನ ಗಂಡ- ಪೊಲೀಸ್‌ಠಾಣೆ ಮೆಟ್ಟಿಲೇರಿದ ಪತ್ನಿ!

ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದರೂ ಆರು ತಿಂಗಳು ಕಾಯಲೇಬೇಕಾ? ಕಾನೂನು ಇಲ್ಲಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 14 =
Remember me
