ಆನೇಕಲ್ (ಬೆಂಗಳೂರು ಗ್ರಾಮಾಂತರ):ಕಾಳಿಯಮ್ಮ ರಥೋತ್ಸವದ ವೇಳೆ ರಥದ ಚಕ್ರ ತುಂಡಾಗಿ ಭಕ್ತರ ಮೇಲೆ ಬಿದ್ದು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಮಿಳುನಾಡು ಗಡಿಭಾಗದ ಮಾದೇನಹಳ್ಳಿಯಲ್ಲಿ ನಡೆದಿದೆ.
ಮೃತರು ಮಾದೇನಹಳ್ಳಿ ಮನೋಹರಂ ಮತ್ತು ಶರವಣನ್. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾಳಿಯಮ್ಮ ದೇವಾಲಯದ ರಥೋತ್ಸವದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಪ್ರತಿವರ್ಷದಂತೆ ಈ ವರ್ಷವೂ ಕಾಳಿಯಮ್ಮ ರಥೋತ್ಸವವನ್ನು ಅದ್ದೂರಿಯಾಗಿ ಮಾಡಲಾಗಿತ್ತು. ರಥವನ್ನು ನೂರಾರು ಭಕ್ತರು ಎಳೆದುಕೊಂಡು ಹೋಗುವ ವೇಳೆ ರಥದ ಚಕ್ರ ತುಂಡಾಗಿ ಭಕ್ತರ ಮೇಲೆ ಬಿದ್ದಿದೆ.
ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಜಾತ್ರೆಯಲ್ಲಿ ಸುಮಾರು 18 ಹಳ್ಳಿಯ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ ಪಾಪರಪಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ವಿಡಿಯೋ ಇಲ್ಲಿದೆ ನೋಡಿ:
ಕಾಳಿಯಮ್ಮ ರಥೋತ್ಸವದ ವೇಳೆ ರಥದ ಚಕ್ರ ತುಂಡಾಗಿ ಭಕ್ತರ ಮೇಲೆ ಬಿದ್ದು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಮಿಳುನಾಡು ಗಡಿಭಾಗದ ಮಾದೇನಹಳ್ಳಿಯಲ್ಲಿ ನಡೆದಿದೆ.pic.twitter.com/xXuOGkRHOV
— Vijayavani (@VVani4U)June 14, 2022

ದೇವ್ರೆ… ಪ್ಲೀಸ್​ ನನ್​ ಹೆಂಡ್ತಿಯನ್ನು ವಾಪಸ್​ ಕರೆಸಿಕೊಂಡು ಬಿಡು: ಅರಳಿಮರಕ್ಕೆ ಪೂಜೆ ಸಲ್ಲಿಸಿದ ಪತಿಯಂದಿರು!

ಚಾಮರಾಜನಗರದ ದರ್ಗಾದಲ್ಲಿ ನಡೆದ ಕೊಲೆ ಹಿಂದಿರೋದು ಮಹಿಳೆ! ರಹಸ್ಯ ಭೇದಿಸಿದ ಪೊಲೀಸರು

Sign in to your account
Please enter an answer in digits:1 × three =
Remember me
