ಮುಂಬೈ:ಮಕ್ಕಳಿಗೆ ಮದುವೆಯಾದರೂ ಸದಾ ಯುವಕನಂತೆಯೇ ಗೆಟಪ್​ನಲ್ಲಿ ಹಾಗೂ ಚುರುಕಾಗಿರುವ ನಟರ ಪೈಕಿ ಬಾಲಿವುಡ್ ನಟ ಅನಿಲ್ ಕಪೂರ್ ಕೂಡ ಒಬ್ಬರು. ಕೂಲೆಸ್ಟ್ ಡ್ಯಾಡಿ ಎಂದೇ ಪ್ರಸಿದ್ಧರಾಗಿರುವ ಅವರು ಈಚೆಗೆ ಮಗಳು ರಿಯಾ ಮದುವೆ ಮಾಡಿದ್ದಾರೆ.
ಮದುವೆಯ ಸಂದರ್ಭದಲ್ಲಿ ನಡೆದ ಆರತಕ್ಷತೆಯ ಸಮಾರಂಭದಲ್ಲಿ ಅನಿಲ್​ ಕಪೂರ್ ಮಗಳ ಜತೆ ಡಾನ್ಸ್​ಗೆ ಹೆಜ್ಜೆ ಹಾಕಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ. ‘ಅಭಿ ತೋ ಪಾರ್ಟಿ ಶುರು ಹುಯಿ ಹೈ” ಹಿಟ್​ ಹಾಡಿಗೆ ಇವರು ಸ್ಟೆಪ್​ ಹಾಕಿದ್ದು, ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಈ ಸಮಾರಂಭದಲ್ಲಿ ನೃತ್ಯ ನಿರ್ದೇಶಕಿ ಫರ್ಹಾಖಾನ್ ಉಪಸ್ಥಿತರಿದ್ದರು,. ಇದರ ವಿಡಿಯೋ ಅನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಅವರು ಹಂಚಿಕೊಂಡಿದ್ದು, ಅದೀಗ ವೈರಲ್​ ಆಗಿದೆ. ‘ಈ ವ್ಯಕ್ತಿಯನ್ನು ನಾನು ತುಂಬಾ ಪ್ರೀತಿಸುತ್ತೇನೆ. ಬೆಸ್ಟ್ ತಂದೆ ಅನಿಲ್ ಕಪೂರ್ ಹಾಗೂ ಮಗಳು ರಿಯಾ ಕಪೂರ್ ನೃತ್ಯ. ಇಂತಹ ಸಮಾರಂಭಕ್ಕೆ ಆಹ್ವಾನಿಸಿದ್ದಕ್ಕೆ ಧನ್ಯವಾದ’ ಎಂದು ಫರ್ಹಾಖಾನ್ ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.
ಅಂದಹಾಗೆ ರಿಯಾ ಕಪೂರ್ ಹಾಗೂ ಕರಣ್ ಬುಲಾನಿ ಆಗಸ್ಟ್ 14 ರಂದು ಅನಿಲ್ ಕಪೂರ್ ಅವರ ಜುಹು ನಿವಾಸದಲ್ಲಿ ನಡೆದಿತ್ತು. 16ರಂದು ಆರತಕ್ಷತೆ ನಡೆದಿದೆ. ಸೋನಮ್ ಕಪೂರ್, ಆನಂದ್ ಅಹುಜಾ, ಅರ್ಜುನ್ ಕಪೂರ್, ಖುಷಿ ಕಪೂರ್, ಜಾನ್ವಿ ಕಪೂರ್, ಫರಾ ಖಾನ್, ಅಂಶುಲಾ ಕಪೂರ್, ಶನಾಯಾ ಕಪೂರ್, ಸಂಜಯ್ ಕಪೂರ್ ಮತ್ತು ಮಹೀಪ್ ಕಪೂರ್ ಮತ್ತಿತರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಇಲ್ಲಿದೆ ನೋಡಿ ಅನಿಲ್​ಕಪೂರ್​ ಡಾನ್ಸ್​ ಮಾಡಿರುವ ವಿಡಿಯೋ:


A post shared by Farah Khan Kunder (@farahkhankunder)

ನನ್ನ ನಗ್ನ, ಕಾಮಪ್ರಚೋದಕ ವಿಡಿಯೋ ನೋಡಿ ಶಿಲ್ಪಾ ಖುಷಿ ಪಟ್ಟಿದ್ರು: ತನಿಖೆಯಲ್ಲಿ ನಟಿಯ ಸ್ಫೋಟಕ ಹೇಳಿಕೆ

ಬಿಗ್​ ಬಿ ಕುಟುಂಬಕ್ಕೂ ಎದುರಾಯ್ತಾ ಆರ್ಥಿಕ ಸಂಕಷ್ಟ? ಐಷಾರಾಮಿ ಬಂಗಲೆ ಮಾರಿದ ಅಭಿಷೇಕ್​ ಬಚ್ಚನ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 13 =
Remember me
