ಇಂಗ್ಲೆಂಡ್‌:ಕರೊನಾವೈರಸ್‌ ಹಾಗೂ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಕುಳಿತು, ದೇಹಕ್ಕೆ ವ್ಯಾಯಾಮ ಇಲ್ಲದ ಹಿನ್ನೆಲೆಯಲ್ಲಿ ಹಲವರು ತಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಂಡಿರುವುದು ಹೊಸ ವಿಷಯವಲ್ಲ.
ಪಾರ್ಕ್‌, ಜಿಮ್‌, ಈಜುಕೊಳ ಎಲ್ಲವೂ ಬಂದ್‌ ಆಗಿದ್ದ ಹಿನ್ನೆಲೆಯಲ್ಲಿ ಅಲ್ಲಿಗೆ ಹೋಗದೇ ಮನೆಯಲ್ಲಿಯೇ ಇದ್ದ ಕಾರಣ, ಬೊಜ್ಜು ಬೆಳೆಸಿಕೊಂಡಿರುವವರು ಹಲವರು. ಇದೀಗ ಲಾಕ್‌ಡೌನ್‌ ಮುಗಿದು ತಿಂಗಳಾದರೂ, ಕರೊನಾವೈರಸ್‌ ಇರುವ ಕಾರಣ, ಹೊರಗಡೆ ಹೋಗಲು ಜನರು ಹೆದರುತ್ತಿದ್ದಾರೆ.
ಆದರೆ ಈ ಸಮಸ್ಯೆ ಮನುಷ್ಯರಿಗೆ ಮಾತ್ರವಲ್ಲದೇ ಪ್ರಾಣಿಗಳಿಗೂ ಉಂಟಾಗಿದೆ. ಅದರಲ್ಲಿಯೂ ಮೃಗಾಲಯದಲ್ಲಿ ಇರುವ ಪ್ರಾಣಿಗಳಿಗೆ ಬೊಜ್ಜಿನ ಸಮಸ್ಯೆ ಉಂಟಾಗಿದ್ದು, ಅದೀಗ ಲಂಡನ್‌ನ ಮೃಗಾಲಯವೊಂದರ ಸಿಬ್ಬಂದಿಯ ತಲೆಕೆಡಿಸಿದೆ.
ದ್ವಿತೀಯ ವಿಶ್ವ ಮಹಾಯುದ್ಧದ ಬಳಿಕ ಅತ್ಯಂತ ಸುದೀರ್ಘಾವಧಿಗೆ ಮುಚ್ಚಲ್ಪಟ್ಟಿರುವ ಲಂಡನ್ ಮೃಗಾಲಯವು 200 ವರ್ಷದಷ್ಟು ಹಳೆಯದಾಗಿದೆ. ಈ ಲಾಕ್ ‌ಡೌನ್ ಅವಧಿಯಲ್ಲಿ ಏನೆಲ್ಲಾ ಬದಲಾವಣೆಗಳು ಆಗಿವೆ ಎಂದು ತಿಳಿಯಲು 19 ಸಾವಿರ ಪ್ರಾಣಿಗಳ ತೂಕ ಮಾಡುವ ನಿರ್ಧಾರಕ್ಕೆ ಮೃಗಾಲಯ ಬಂದಿದ್ದು, ಒಂದೊಂದೇ ಪ್ರಾಣಿಗಳ ಆರೋಗ್ಯ ತಪಾಸಣೆ ಶುರು ಮಾಡಿದೆ.
ಇದಾಗಲೇ ತಪಾಸಣೆ ಮಾಡಿರುವ ಪ್ರಾಣಿಗಳ ಪೈಕಿ ಹೆಚ್ಚಿನವು ದೈಹಿಕ ಚಟುವಟಿಕೆ ಇಲ್ಲದೇ, ಬೊಜ್ಜು ಬೆಳೆಸಿಕೊಂಡಿರುವುದು ಸಿಬ್ಬಂದಿಗೆ ಕಂಡುಬಂದಿದೆ. ಮೂರು ತಿಂಗಳ ಲಾಕ್ ‌ಡೌನ್ ಬಳಿಕ, ಜೂನ್‌ 15ರಿಂದ ಸೀಮಿತ ಮಟ್ಟದಲ್ಲಿ ಮೃಗಾಲಯವನ್ನು ವೀಕ್ಷಕರಿಗೆ ಮತ್ತೆ ಮುಕ್ತವಾಗಿಸಲಾಗಿದೆ. ಆದಾಯದ ಕೊರತೆಯ ಕಾರಣ ಲಂಡನ್ ಮೃಗಾಲಯವು ಗಂಭೀರವಾದ ಆರ್ಥಿಕ ಮುಗ್ಗಟ್ಟಿನಲ್ಲಿದೆ. ಮೃಗಾಲಯದ ಉಳಿವಿಗೆ ಸಾರ್ವಜನಿಕ ದೇಣಿಗೆಯನ್ನು ಪದಾಧಿಕಾರಿಗಳು ಕೋರಿದ್ದಾರೆ.
ಇದನ್ನೂ ಓದಿ:ಬೆಳ್ಳಂಬೆಳಗ್ಗೆಯೇ ಮೂವರು ಉಗ್ರರನ್ನು ಹೊಡೆದುರುಳಿಸಿದ ಯೋಧರು: ಓರ್ವ ಹುತಾತ್ಮ
ಇದು ಒಂದೆಡೆಯಾದರೆ ಕರೊನಾ ವೈರಸ್‌ ಭೀತಿಯಿಂದ ಪ್ರಾಣಿಗಳಿಗೆ ಯಾವುದೇ ದೈಹಿಕ ಚಟುವಟಿಕೆಗಳನ್ನು ಮಾಡಿಸುತ್ತಿರಲಿಲ್ಲ. ಹಲವು ಪ್ರಾಣಿಗಳನ್ನು ಪಂಜರದಿಂದ ಕೂಡ ಹೊರಕ್ಕೆ ಬಿಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ಇದ್ದಲ್ಲಿಯೇ ತಿಂದು, ಪ್ರಾಣಿಗಳು ಕೊಬ್ಬಿ ಹೋಗಿರುವುದಾಗಿ ಮೃಗಾಲಯ ಸಿಬ್ಬಂದಿ ಹೇಳಿದ್ದು. ಈ ನಿಟ್ಟಿನಲ್ಲಿ ಏನು ಕ್ರಮ ತೆಗೆದುಕೊಳ್ಳಬೇಕು ಎಂಬ ಚಿಂತೆಯಲ್ಲಿದ್ದಾರೆ.
ವಿಶ್ವದ ಹಿರಿಯ ಜೀವಿತ ವಿವಾಹಿತರಿವರು- ಗುಟ್ಟಾಗಿ ಮದುವೆಯಾಗಿದ್ದ ಇವರ ಹೆಸರೀಗ ವಿಶ್ವದಾಖಲೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:15 + 4 =
Remember me
