ನವದೆಹಲಿ:ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಷರತ್ತುಬದ್ಧ ಅನುಮತಿ ನೀಡಿ ಹೈಕೋರ್ಟ್​ನ ಧಾರವಾಡ ಪೀಠ ನಿನ್ನೆ (ಮಂಗಳವಾರ) ತಡರಾತ್ರಿ ಆದೇಶ ಹೊರಡಿಸಿತು. ಗಣೇಶನ ಕುಳ್ಳರಿಸಲು ನಿನ್ನೆ ಮಧ್ಯಾಹ್ನ ಕೋರ್ಟ್​ ತೀರ್ಪು ನೀಡಿದ್ದನ್ನು ಪ್ರಶ್ನಿಸಿ ಪುನಃ ಹುಬ್ಬಳ್ಳಿಯ ಅಂಜುಮನ್ ಇಸ್ಲಾಂ ಸಂಸ್ಥೆ ಸಂಜೆಯ ವೇಳೆ ಅರ್ಜಿ ಸಲ್ಲಿಸಿದ್ದರಿಂದ ತಡರಾತ್ರಿಯವರೆಗೂ ಕೋರ್ಟ್​ ವಿಚಾರಣೆ ನಡೆಸಿತ್ತು. ಆದರೆ ತನ್ನ ಆದೇಶವನ್ನು ಹಿಂಪಡೆಯದೇ ಶಾಂತಿಯುತವಾಗಿ ಹಬ್ಬ ಆಚರಿಸುವಂತೆ ಹೇಳಿತ್ತು.
ಅಷ್ಟಕ್ಕೂ ಅಂಜುಮಾನ್​ ಇಸ್ಲಾಂ ಸಂಸ್ಥೆ ಪುನಃ ಹೈಕೋರ್ಟ್​ ಮೆಟ್ಟಿಲೇರಿದ್ದಕ್ಕೆ ಕಾರಣ, ಬೆಂಗಳೂರಿನ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲು ಸುಪ್ರೀಂಕೋರ್ಟ್​ ಅನುಮತಿ ನೀಡದೇ ಇದ್ದುದು. ಇತ್ತ ಹುಬ್ಬಳ್ಳಿ ಈದ್ಗಾ ಮೈದಾನದ ಕೇಸ್​ನ ವಿಚಾರಣೆ ಧಾರವಾಡದ ಪೀಠದಲ್ಲಿ ನಡೆಯುತ್ತಿದ್ದರೆ, ಅತ್ತ ಬೆಂಗಳೂರಿನ ಈದ್ಗಾ ಮೈದಾನದ ಕೇಸ್​ನ ವಿಚಾರಣೆ ಸುಪ್ರೀಂಕೋರ್ಟ್​ನಲ್ಲಿ ನಡೆಯುತ್ತಿತ್ತು.
ಸುಮಾರಾಗಿ ಒಂದೇ ವೇಳೆ ಇತ್ತ ಹುಬ್ಬಳ್ಳಿಯಲ್ಲಿ ಹೈಕೋರ್ಟ್​ ಗಣೇಶೋತ್ಸವಕ್ಕೆ ಅನುಮತಿ ಕೊಟ್ಟರೆ, ಅತ್ತ ಬೆಂಗಳೂರಿನಲ್ಲಿ ಸುಪ್ರೀಂಕೋರ್ಟ್​ ಅನುಮತಿ ನೀಡದೇ ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶಿಸಿತ್ತು. ಆದ್ದರಿಂದ ಹುಬ್ಬಳ್ಳಿಯ ಅಂಜುಮನ್ ಇಸ್ಲಾಂ ಸಂಸ್ಥೆ ನಮಗೂ ಸುಪ್ರೀಂಕೋರ್ಟ್​ ಆದೇಶವನ್ನು ಅನ್ವಯ ಮಾಡಬೇಕು, ಇಲ್ಲಿಯ ಈದ್ಗಾ ಮೈದಾನದಲ್ಲಿಯೂ ಗಣೇಶೋತ್ಸವಕ್ಕೆ ಅನುಮತಿ ನೀಡಬಾರದು ಎಂದು ಮನವಿ ಸಲ್ಲಿಸಿತ್ತು. ತಡರಾತ್ರಿ 11.30ರ ವರೆಗೆ ವಿಚಾರಣೆ ನಡೆಸಿದ್ದ ಕೋರ್ಟ್​, ಅರ್ಜಿಯನ್ನು ಮಾನ್ಯ ಮಾಡದೇ ಗಣೇಶೋತ್ಸವಕ್ಕೆ ಅನುಮತಿ ನೀಡಿತ್ತು.
ಈ ಅನುಮತಿ ಅನ್ವಯ ಬಿಗಿ ಪೊಲೀಸ್​ ಬಂದೋಬಸ್ತ್​ ನಡುವೆ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣಪ್ಪ ಬಂದು ಕುಳಿತಿದ್ದಾನೆ. ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.
ಆದರೆ ಈ ನಡುವೆಯೇ ಅಂಜುಮನ್ ಇಸ್ಲಾಂ ಸಂಸ್ಥೆ ಇಂದು ಸುಪ್ರೀಂಕೋರ್ಟ್​ ಮೊರೆ ಹೋಗಿದೆ. ಬೆಂಗಳೂರಿನ ಈದ್ಗಾ ಮೈದಾನಕ್ಕೆ ನೀಡಿರುವ ಆದೇಶವನ್ನೇ ತಮಗೂ ಅನ್ವಯ ಮಾಡುವಂತೆ ಅದು ಕೋರಿಕೊಂಡಿದೆ. ಆದ್ದರಿಂದ ಸದ್ಯ ಸುಪ್ರೀಂಕೋರ್ಟ್​ ಯಾವ ನಿಲುವು ತಾಳುತ್ತದೆಯೋ ಕಾದು ನೋಡಬೇಕಿದೆ (ಏಜೆನ್ಸೀಸ್​)
ಹುಬ್ಬಳ್ಳಿ ಈದ್ಗಾ ಮೈದಾನ ಗಣೇಶೋತ್ಸವ: ತಡರಾತ್ರಿಯವರೆಗೂ ನಡೆಯಿತು ಪುನಃ ವಿಚಾರಣೆ- ಬದಲಾಗದ ಆದೇಶ

ಬೆಂಗಳೂರಿನ ಈದ್ಗಾ ಮೈದಾನದಲ್ಲಿನ ಗಣೇಶೋತ್ಸವಕ್ಕೆ ಭಾರಿ ಹಿನ್ನಡೆ: ಎರಡೇ ಗಂಟೆಗಳಲ್ಲಿ ಸುಪ್ರೀಂನಿಂದ ಬಂತು ಈ ರೀತಿ ತೀರ್ಪು

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ: ಹಿಂದು ಸಂಘಟನೆಗಳಿಂದ ಹರ್ಷೋದ್ಘಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 3 =
Remember me
