ಚೆನ್ನೈ:ಮಾಜಿ ಐಪಿಎಸ್​ ಅಧಿಕಾರಿ ಅಣ್ಣಾಮಲೈ ಸದ್ಯ ರಾಜಕೀಯದಲ್ಲಿ ಬಿಜಿಯಾಗಿದ್ದಾರೆ. ನಾಡು ಬಿಜೆಪಿ ಘಟಕದ ಉಪಾಧ್ಯಕರಾಗಿರುವ ಅವರು ಸದ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಅವರ ಜೀವಕ್ಕೆ ಬೆದರಿಕೆ ಇರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ಸಿಕ್ಕಿದೆ. ಕರ್ನಾಟಕದಲ್ಲಿ ದಿಟ್ಟ ಪೊಲೀಸ್​ ಅಧಿಕಾರಿ ಎಂದು ಹೆಸರು ಪಡೆದು ಕರ್ನಾಟಕದ ಸಿಂಹ ಎಂದೇ ಖ್ಯಾತಿ ಪಡೆದಿರುವ ಅಣ್ಣಾಮಲೈ ಅವರು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಂತೆಯೇ ಅವರ ಜೀವಕ್ಕೆ ಬೆದರಿಕೆ ಇರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಅವರಿಗೆ ಸಾಕಷ್ಟು ಕರೆಗಳು ಬಂದ ಕಾರಣ ಭದ್ರತೆ ಹೆಚ್ಚಿಸಲಾಗಿದ್ದು, ಇದೀಗ ವೈ ಪ್ಲಸ್​ ಭದ್ರತೆ ನೀಡಲಾಗಿದೆ. ಕೆಲವು ತಿಂಗಳಿನಿಂದ ನನಗೆ ಬೆದರಿಕೆ ಕರೆಗಳು ಬರುತ್ತಿದೆ. ಈ ಹಿನ್ನಲೆ ಭದ್ರತೆಯನ್ನು ಪೊಲೀಸರು ನೀಡಿದ್ದಾರೆ ಅಣ್ಣಾ ಮಲೈ ತಿಳಿಸಿದ್ದಾರೆ.
ಕೆಲ ಮಾವೋವಾದಿ ಮತ್ತು ಪಿಎಫ್​ಐ ಗುಂಪುಗಳಿಂದ ಬೆದರಿಕೆ ಬರುತ್ತಿರುವುದಾಗಿ ತಿಳಿದುಬಂದಿದೆ. ವೈ ಪ್ಲಸ್​ ಭದ್ರತೆ ಹಿನ್ನೆಲೆಯಲ್ಲಿ ಸದ್ಯ ಅವರ ಭದ್ರತೆಗೆ 11 ಜನ ಕಮಾಂಡೋಗಳು ಮತ್ತು ಇಬ್ಬರು ಗನ್​ ಮ್ಯಾನ್​ ಇರಲಿದ್ದು, ಅವರ ನಿವಾಸಕ್ಕೆ ಒಬ್ಬರು ಭದ್ರತೆಯನ್ನು ನಿಯೋಜಿಸಲಾಗಿದೆ.
10 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಬಳಿಕ ಅವರು ಮೇ 2019ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಪ್ರೇಮಿಗಳ ದಿನ ಅದೃಷ್ಟಶಾಲಿ ಜೋಡಿಗೆ ಉಚಿತ ಡಿವೋರ್ಸ್​- ಹೊರಟಿದೆ ಸುತ್ತೋಲೆ…

ನಾನು ಮಾನಸಿಕ ರೋಗಿ ಎಂದು ಸುಳ್ಳು ಹೇಳಿ ಪತಿ ವಿಚ್ಛೇದನ ಪಡೆಯುತ್ತಿದ್ದಾರೆ, ಪ್ಲೀಸ್​ ದಾರಿ ತೋರಿ..

ದಾರಿ ಕಾಣದೇ ಡಿಕ್ಕಿ ಹೊಡೆದುಕೊಂಡ ಬೆಂಗಾವಲು ವಾಹನಗಳು: ಗ್ಲಾಸ್​ ಒರೆಸಿದ ಪ್ರಿಯಾಂಕಾ ಗಾಂಧಿ

ವೈದ್ಯ ಪದವೀಧರರಿಗೆ ತಿಂಗಳೊಳಗೆ ಉದ್ಯೋಗ: ಗುಡ್​ ನ್ಯೂಸ್​ ಕೊಟ್ಟ ಆರೋಗ್ಯ ಸಚಿವರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − six =
Remember me
