ಬೆಂಗಳೂರು:ಅಪರಾಧಿಗಳ ಮನಸ್ಸಿನಲ್ಲಿ ಭಯದ ಬೀಜ ಬಿತ್ತಿದ್ದ ಖಡಕ್ ಐಪಿಎಸ್ ಅಧಿಕಾರಿ ಕರ್ನಾಟಕದ ಸಿಂಗಂ ಎಂದೇ ಪರಿಚಿತರಾಗಿರುವ ಅಣ್ಣಾಮಲೈ ಅವರ ಹೆಸರು ಕೇಳದವರೇ ಇಲ್ಲವೇನೋ…
ನನ್ನ ಪ್ರಕಾರ ಪೊಲೀಸ್ ಕೆಲಸ ದೇವರಿಗೆ ಬಹಳ ಹತ್ತಿರವಾದ ಹಾಗೂ ಹೆಚ್ಚು ಜವಾಬ್ದಾರಿಯ ಕೆಲಸ. ಈ ಕೆಲಸದಲ್ಲಿ ನಾನು ಸಾಕಷ್ಟು ಜನರ ಪ್ರೀತಿ ಗಳಿಸಿದ್ದೇನೆ. ಆದರೆ ಕುಟುಂಬದ ಜತೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ ಎನ್ನುವ ಕಾರಣ ನೀಡಿ, ಕೆಲಸಕ್ಕೆ 2019ರಲ್ಲಿ ರಾಜೀನಾಮೆ ನೀಡಿರುವವರು ಅಣ್ಣಾಮಲೈ. ನಂತರ ಬಿಜೆಪಿಯಿಂದ ಪ್ರಭಾವಿತರಾಗಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಇವರ ಸುದೀರ್ಘ ವೃತ್ತಿ ಜೀವನದಲ್ಲಿ ಕಂಡು- ಕೇಳಿದ ತಮ್ಮ ಅನುಭವದ ಬುತ್ತಿಯನ್ನು ‘ಸ್ಟೆಪ್ಪಿಂಗ್​ ಬಿಯಾಂಡ್​ ಖಾಕಿ’ ಎಂಬ ಪುಸ್ತಕದಲ್ಲಿ ಅಣ್ಣಾಮಲೈ ತೆರೆದಿಟ್ಟಾರೆ. ಪೊಲೀಸ್​ ಹುದ್ದೆಯ ಪಯಣದಲ್ಲಿ ನೆನಪಿನ ಬುತ್ತಿಯನ್ನು ಈ ಪುಸ್ತಕದಲ್ಲಿ ಬಿಚ್ಚಿಟ್ಟಿದ್ದಾರೆ.
ಬಾಲಕಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಹೇಗೆ ಮಾನವೀಯ ನೆಲೆಗಟ್ಟಿನಲ್ಲಿ ಅವರನ್ನು ತಂದುನಿಲ್ಲಿಸಿತು? ಕೆಲವೇ ವರ್ಷಗಳಲ್ಲಿ ತಾವು ಹೇಗೆ ‘ಕರ್ನಾಟಕದ ಸಿಂಗಂ’ ಆಗಿರುವುದು ಎಂಬ ಮಾಹಿತಿ ಈ ಪುಸ್ತಕದಲ್ಲಿ ಇದೆ ಎನ್ನಲಾಗಿದೆ.
ನಾಚಿಕೆ, ಸರಳ ಹಳ್ಳಿಯ ಹುಡುಗ ಸಾರ್ವಜನಿಕ ಸೇವೆಗೆ ಅರ್ಪಿಸಿಕೊಂಡದ್ದು ಹೇಗೆ? ಕರ್ನಾಟಕದಲ್ಲಿನ ಒಂದು ದಶಕದ ವೃತ್ತಿ ಜೀವನದಲ್ಲಿ ಅವರು ಇಷ್ಟೆಲ್ಲಾ ಗೌರವ ಗಳಿಸಲು ಹೇಗೆ ಸಾಧ್ಯವಾಯಿತು? ಅವರ ವೃತ್ತಿ ಜೀವನದಲ್ಲಿ ಎದುರಾದ ಪ್ರಶ್ನೆಗಳು ಏನು ಎಂಬುದರ ಜತೆಗೆ, ರಾಜಕಾರಣಿಗಳು ಕೆಟ್ಟವರೇ? ಮತ್ತು ಉತ್ತಮ ನಡತೆಯುಳ್ಳ ಜನರು ರಾಜಕೀಯ ಪ್ರವೇಶ ಮಾಡಲು ಭಯಪಡುವಂಥ ಸ್ಥಳವಾಗಿದೆಯೆ ಎಂಬಿತ್ಯಾದಿಯ ಬಗ್ಗೆ ಈ ಪುಸ್ತಕದಲ್ಲಿ ವಿವರಣೆ ನೀಡಲಾಗಿದೆ. ಈ ಪುಸ್ತಕ ಇದೇ 18ರಂದು ಬಿಡುಗಡೆಯಾಗಲಿದೆ.
70 ವರ್ಷಗಳ ನಂತರ ಮಹಿಳೆಗೆ ಗಲ್ಲುಶಿಕ್ಷೆ- ಅಮೆರಿಕದಲ್ಲಿ ಹೀಗೊಂದು ಪ್ರಕರಣ…

ಫೇಸ್​ಬುಕ್​ ಗೆಳತಿಗಾಗಿ 2ಸಾವಿರ ಕಿ.ಮೀ ಹೋದ ಬೆಂಗಳೂರು ಯುವಕ ರಾತ್ರಿ ಕಳೆದದ್ದು ಎಲ್ಲಿ ಗೊತ್ತಾ?

ಪತ್ನಿ ಈಗೀಗ ಮುಟ್ಟಲೂ ಬಿಡುತ್ತಿಲ್ಲ- ಬದುಕೇ ನರಕವಾಗಿದೆ: ಇದು ಮಾನಸಿಕ ಸಮಸ್ಯೆಯೆ?

ಜಿಮ್​ನಲ್ಲಿ ಗಂಟೆಗಟ್ಟಲೆ ಕಳೆದರೂ ಸಣ್ಣ ಆಗುತ್ತಿಲ್ಲವಾ.. ? ನೀವು ಮಾಡುತ್ತಿರೋ ತಪ್ಪೇನು ಗೊತ್ತಾ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 7 =
Remember me
