ಅಮೃತಸರ:ಪಂಜಾಬ್​ನಲ್ಲಿ ಆಮ್​ ಆದ್ಮಿ ಪಕ್ಷ ಇತಿಹಾಸ ಸೃಷ್ಟಿಸಿದೆ. ಭರ್ಜರಿ ಗೆಲುವಿನ ಬಳಿಕ ಭಗವಂತ್​ ಮಾನ್​ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ತಮ್ಮ ಸೋಲಿನಿಂದ ತೀವ್ರವಾಗಿ ಮುಖಭಂಗ ಅನುಭವಿಸಿದರೂ ಪಂಜಾಬ್ ಕಾಂಗ್ರೆಸ್​ ಅಧ್ಯಕ್ಷರಾಗಿದ್ದ ನವಜೋತ್​ ಸಿಂಗ್ ಸಿಧು ಮಾನ್​ ಅವರನ್ನು ಶ್ಲಾಘಿಸಿದ್ದರು. ಇದೀಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಅದರ ಬೆನ್ನಲ್ಲೇ ಟ್ವೀಟ್​ ಮಾಡಿದ್ದಾರೆ.
ಸಿಧು ಮಾಡಿರುವ ಟ್ವೀಟ್​ನಿಂದ ಕಾಂಗ್ರೆಸ್​ ಭಾರಿ ಮುಜುಗರಕ್ಕೆ ಒಳಗಾಗಿದೆ. ಏಕೆಂದರೆ ಸಿಧು ಮಾಡಿರುವ ಟ್ವೀಟ್​ನಲ್ಲಿ ‘ಯಾರಿಂದಲೂ ಏನನ್ನೂ ನಿರೀಕ್ಷಿಸದ ವ್ಯಕ್ತಿ ಅತ್ಯಂತ ಸಂತೋಷವಾಗಿರುತ್ತಾನೆ. ಇದೀಗ ಮುಖ್ಯಮಂತ್ರಿಯಾಗಿರುವ ಭಗವಂತ್ ಮಾನ್​ ಅವರು ಪಂಜಾಬ್​​ನಲ್ಲಿ ಮಾಫಿಯಾ-ವಿರೋಧಿ ಯುಗದ ಅನಾವರಣ ಮಾಡುವ ಭರವಸೆ ನೀಡಿದ್ದಾರೆ. ಈ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ. ಈ ನಿರೀಕ್ಷೆಗಳನ್ನು ಅವರು ಈಡೇರಿಸುತ್ತಾರೆ ಎಂಬ ನಂಬಿಕೆ ನನಗೆ ಇದೆ. ಜನಪರ ನೀತಿಗಳೊಂದಿಗೆ ಪಂಜಾಬ್ ಅನ್ನು ಪುನರುಜ್ಜೀವನದ ಹಾದಿಗೆ ವಾಪಸ್​ ತರುತ್ತಾರೆ ಎಂಬ ನಂಬಿಕೆಯಿದೆ’ ಎಂದು ಸಿಧು ಹೇಳಿದ್ದಾರೆ.
ಇದರ ಅರ್ಥ ಕಾಂಗ್ರೆಸ್​ನ ಸುದೀರ್ಘ ಇತಿಹಾಸವುಳ್ಳ ಪಂಜಾಬ್​ನಲ್ಲಿ ಇಲ್ಲಿಯವರೆಗೆ ಮಾಫಿಯಾ ತಾಂಡವಾಡುತ್ತಿತ್ತು ಎಂಬ ಬಗ್ಗೆ ಸಿಧು ಪರೋಕ್ಷವಾಗಿ ಹೇಳಿದ್ದು, ಇದು ಕಾಂಗ್ರೆಸ್​ ಮುಖಂಡರ ತಲೆ ತಗ್ಗಿಸುವಂತೆ ಮಾಡಿದೆ.
The happiest man is the one from whom no one expects … Bhagwant Mann unfurls a new anti – Mafia era in Punjab with a mountain of expectations …hope he rises to the occasion , brings back Punjab on the revival path with pro – people policies … best always
— Navjot Singh Sidhu (@sherryontopp)March 17, 2022

ಅದೇ ಇನ್ನೊಂದೆಡೆ, ಟ್ವೀಟ್ ಮಾಡಿರುವ ಮಾನ್​, ಶೀಘ್ರದಲ್ಲೇ ಅತ್ಯಂತ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಲಿದ್ದೇನೆ. ಇಂಥ ಘೋಷಣೆಯನ್ನು ಪಂಜಾಬ್​ ಇತಿಹಾಸದಲ್ಲಿಯೇ ಯಾರೂ ಮಾಡಿಲ್ಲ ಎಂದು ಹೇಳಿದ್ದಾರೆ. ಪಂಜಾಬ್​ ಜನರ ಹಿತದೃಷ್ಟಿಯಿಂದ ಇಂದು ಒಂದು ಬಹುದೊಡ್ಡ, ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗುವುದು. ಇಂಥ ನಿರ್ಧಾರವನ್ನು ಪಂಜಾಬ್​ ಇತಿಹಾಸದಲ್ಲಿಯೇ ಯಾರೂ ಮಾಡಿರಲಿಲ್ಲ. ಅದೇನೆಂದು ಶೀಘ್ರದಲ್ಲಿಯೇ ಹೇಳುತ್ತೇನೆ ಎಂದು ತಿಳಿಸಿದ್ದು, ಇದು ಮತದಾರರಿಗೆ ಭಾರಿ ಕುತೂಹಲ ಕೆರಳಿಸಿದೆ.
ಪಂಜಾಬ್​​ ವಿಧಾನಸಭೆ ಚುನಾವಣೆಯಲ್ಲಿ ಆಮ್​ ಆದ್ಮಿ ಪಕ್ಷ 92 ಕ್ಷೇತ್ರಗಳನ್ನು ಗೆದ್ದು, ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿದೆ.

पंजाब की जनता के हित में आज एक बहुत बड़ा फ़ैसला लिया जाएगा। पंजाब के इतिहास में आज तक किसी ने ऐसा फैसला नहीं लिया होगा।
कुछ ही देर में एलान करूँगा…।
— Bhagwant Mann (@BhagwantMann)March 17, 2022

ನೂತನ ಸಿಎಂ ಪ್ರಮಾಣ ವಚನದ ದಿನ ಅಚ್ಚರಿಯ ಘಟನೆ: 7 ವರ್ಷಗಳಿಂದ ಕಾಣೆಯಾಗಿದ್ದ ಮಗ ಪಾಲಕರಿಗೆ ಸಿಕ್ಕ!

ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆದ ‘ದಿ ಕಾಶ್ಮೀರ್ ಫೈಲ್ಸ್​’: ಏಳೇ ದಿನಗಳಲ್ಲಿ 100 ಕೋಟಿ ರೂ.ನತ್ತ ದಾಪುಗಾಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 6 =
Remember me
