ಮುಂಬೈ:ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಭಾರಿ ಕೋಲಾಹಲ ಸೃಷ್ಟಿಸಿರುವ ಚಿತ್ರ ‘ದಿ ಕಶ್ಮೀರ್​ ಫೈಲ್ಸ್​’. 1990ರ ಕಾಶ್ಮೀರಿ ಕಣಿವೆಯಲ್ಲಿ ಕಾಶ್ಮೀರಿ ಪಂಡಿತರ ಮೇಲೆ ಆಗಿರುವ ಘೋರ ಅನ್ಯಾಯ, ಹತ್ಯಾಕಾಂಡದ ಸತ್ಯವನ್ನು, ಇಲ್ಲಿಯವರೆಗೆ ಜನರ ಮುಂದೆ ಬಾರದಿದ್ದ ನೈಜ ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಈ ಚಿತ್ರ ಒಂದು ವರ್ಗವನ್ನಂತೂ ಅಕ್ಷರಶಃ ಬೆವರಿಳಿಸಿರುವುದು ನಿಜ. ಈ ಚಿತ್ರದ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದವರಿಗೆ ಕೊನೆಗೂ ಸೋಲುಂಟಾಗಿ ಜನಸಾಮಾನ್ಯರ ಮುಂದೆ ಭಯಾನಕ ಸತ್ಯವನ್ನು ಹೊರಗೆಡವಿದ ಈ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ.
‘ದಿ ಕಶ್ಮೀರ್​ ಫೈಲ್ಸ್​’ ಇಂದಿಗೂ ಕೆಲವರಿಗೆ ಸಹಿಸಿಕೊಳ್ಳಲು ಆಗದ ಚಿತ್ರ. ಹಲವು ರಾಜ್ಯಗಳು ಈ ಚಿತ್ರಕ್ಕೆ ತೆರಿಗೆ ವಿನಾಯತಿ ಘೋಷಣೆ ಮಾಡಿ, ಜನರೂ ನೋಡುವಂತೆ ಮಾಡಿದರು. ಹೀಗಾಗಿ ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಈ ಸಿನಿಮಾ ರಿಲೀಸ್ ಆಗಿ ಹಂಗಾಮಾ ಸೃಷ್ಟಿಸಿದೆ.
ಇದರಲ್ಲಿ ತೋರಿಸಿರುವ ಸತ್ಯವನ್ನು ಅರಗಿಸಿಕೊಳ್ಳಲು ಆಗದ ಒಂದು ವರ್ಗ ಇಂದಿಗೂ ವಿರೋಧ ವ್ಯಕ್ತಪಡಿಸುತ್ತಲೇ ಇದೆ. ಅದೆಷ್ಟರ ಮಟ್ಟಿಗೆ ಎಂದರೆ, ಸಿಂಗಪುರ ಸೇರಿದಂತೆ ಕೆಲ ದೇಶಗಳಲ್ಲಿ ಈ ಸಿನಿಮಾವನ್ನು ತಮ್ಮ ದೇಶದಲ್ಲಿ ರಿಲೀಸ್ ಮಾಡದಂತೆ ನಿರ್ಬಂಧ ಹೇರಿದವು. ಅಲ್ಲದೇ, ವಿವೇಕ್ ಅಗ್ನಿಹೋತ್ರಿ ಅವರ ಭಾಷಣಕ್ಕೂ ಅಡೆತಡೆ ಮಾಡಲಾಯಿತು. ಆದರೆ ಎಲ್ಲಾ ವಿರೋಧ, ವಿರೋಧಿಗಳನ್ನು ಹಿಮ್ಮೆಟ್ಟಿಸಿ ಬಾಕ್ಸ್​ ಆಫೀಸ್​ನಲ್ಲಿಯೇ ಧೂಳೆಬ್ಬಿಸಿರುವ ದಿ ಕಶ್ಮೀರಿ ಫೈಲ್ಸ್​ನ ಭಾಗ ಎರಡು ತೆರೆಯ ಮೇಲೆ ಬರಲಿದೆಯೇ ಎಂಬ ನಿರೀಕ್ಷೆಯಲ್ಲಿ ಹಲವರಿದ್ದಾರೆ. ಸಿನಿಮಾ ರಂಗದಲ್ಲಿನ ಅನೇಕ ದಾಖಲೆಗಳನ್ನು ಮುರಿದು ಭರ್ಜರಿ ಯಶಸ್ಸನ್ನು ಕಂಡ ಈ ಚಿತ್ರದ ಪಾರ್ಟ್​-2 ಯಾವಾಗ ಎಂದು ಜನರು ಪ್ರಶ್ನೆ ಕೇಳುತ್ತಿದ್ದಾರೆ.
ಅಂಥವರಿಗೆ ಇದೀಗ ಉತ್ತರಿಸಿದ್ದಾರೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ. ಪಾರ್ಟ್​-2 ಬರಲಿದೆಯಾ ಎಂದ ಪ್ರಶ್ನೆಗೆ ಉತ್ತರಿಸಿರುವ ಅವರು, ಸದ್ಯ ದಿ ಡೆಲ್ಲಿ ಫೈಲ್ಸ್ ಸಿನಿಮಾ ಮಾಡುತ್ತಿದ್ದೇನೆ. ಇದರಲ್ಲಿಯೂ ಹತ್ಯಾಕಾಂಡವೇ ಪ್ರಧಾನ ಕಥೆಯಾಗಿ ಮೂಡಿ ಬರಲಿದೆ. ಇದೊಂದು ರೀತಿಯಲ್ಲಿ ದಿ ಕಶ್ಮೀರ್ ಫೈಲ್ಸ್​ನ ಮುಂದುವರೆದಿರುವ ಭಾಗವೇ ಅಂದುಕೊಳ್ಳಬಹುದು ಎಂದಿದ್ದಾರೆ.
ಇದರಿಂದಾಗಿ ಈ ಚಿತ್ರದಲ್ಲಿ ಏನಿರಬಹುದು ಎಂಬ ಕುತೂಹಲ ಹಲವರಲ್ಲಿ ಮನೆ ಮಾಡಿದ್ದರೆ, ಇದಕ್ಕಿನ್ನೆಷ್ಟು ಮಂದಿ ವಿರೋಧ ವ್ಯಕ್ತಪಡಿಸಬಹುದು ಎಂಬುದು ಕುತೂಹಲದ ವಿಷಯವೇ ಆಗಿದೆ.
ಅಂದಹಾಗೆ , ದಿಲ್ಲಿ ಫೈಲ್ಸ್ 1984 ರ ಕರಾಳ ದಿನಗಳನ್ನು ತೋರಿಸುತ್ತದೆ. ಇದು ಭಾರತದ ಇತಿಹಾಸದಲ್ಲಿ ಕರಾಳ ಅಧ್ಯಾಯವಾಗಿದೆ. ಪಂಜಾಬ್‌ನಾದ್ಯಂತ ಉಗ್ರಗಾಮಿ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಅಮಾನವೀಯವಾಗಿದ್ದು ಅದನ್ನು ಇದರಲ್ಲಿ ಚಿತ್ರಿಸಲಾಗುತ್ತಿದೆ. ಪಂಜಾಬ್​ನಲ್ಲಿ ಕಾಂಗ್ರೆಸ್​ ವೋಟ್​​ಬ್ಯಾಂಕ್​ಗಾಗಿ ಹೇಗೆ ಭಯೋತ್ಪಾದನೆಯನ್ನು ಪ್ರೋತ್ಸಾಹಿಸಿತು, ಭಯೋತ್ಪಾದನೆಯನ್ನು ಹುಟ್ಟಿಸಿ ನಂತರ ನಿರ್ನಾಮ ಮಾಡಿದ್ದು ಹೇಗೆ? ಇದಾದ ನಂತರ ಅನೇಕ ಅಮಾಯಕರನ್ನು ಕೊಂದು ಸತ್ಯಾಂಶವನ್ನು ಹೇಗೆ ಮುಚ್ಚಿಡಲಾಯಿತು. ಇಲ್ಲಿಯವರೆಗೂ ನ್ಯಾಯ ಸಿಗದೇ ಪರದಾಡುತ್ತಿರುವವರ ಸ್ಥಿತಿ ಎಂಥದ್ದು ಎಂಬ ಬಗ್ಗೆ ಈ ಚಿತ್ರದಲ್ಲಿ ತೋರಿಸಲಾಗುತ್ತದೆ ಎಂದು ವಿವೇಕ್​ ಅವರು ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು.
ವೈದ್ಯಕೀಯ ಲೋಕದಲ್ಲೊಂದು ಅದ್ಭುತ ಸಂಶೋಧನೆ: ಆರು ತಿಂಗಳಿನಲ್ಲಿ ಸಂಪೂರ್ಣ ಮಾಯವಾಯ್ತು ಕ್ಯಾನ್ಸರ್!

‘ಈ ತಲೆಗಳ ಕಡಿದರೆ 20 ಲಕ್ಷ ರೂ.. ಖಾತೆಗೆ ಕೂಡಲೇ ಜಮಾʼ: ಮುತಾಲಿಕ್​, ಯಶ್​ಪಾಲ್​ ಪ್ರತಿಕ್ರಿಯೆ ಹೀಗಿದೆ…

ಗಂಡ-ಹೆಂಡ್ತಿ ಮಧ್ಯೆ ಜಗಳ ತಂದಿಟ್ಟ ಮ್ಯಾಗಿ! ಬಳ್ಳಾರಿ ಯುವಕನ ಕಷ್ಟ ನೋಡಲಾಗದೇ ಡಿವೋರ್ಸ್​ ಕೊಟ್ಟ ಕೋರ್ಟ್​

ವಯಾಗ್ರ ತಂದ ಆಪತ್ತು- ಅತಿಯಾಗಿ ಸೇವಿಸಿ ಜೀವನಪೂರ್ತಿ ಪೇಚಿಗೆ ಸಿಲುಕಿದ ನವವಿವಾಹಿತ: ವೈದ್ಯರ ಎಚ್ಚರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 7 =
Remember me
