ಆಜಂ​ಗಢ (ಉತ್ತರ ಪ್ರದೇಶ):ಕಳೆದ ತಿಂಗಳು ನಡೆದಿದ್ದ ಮೂರು ಲೋಕಸಭೆ ಮತ್ತು ಏಳು ವಿಧಾನಸಭಾ ಚುನಾವಣೆಗಳ ಫಲಿತಾಂಶ ಇಂದು ಪ್ರಕಟವಾಗುತ್ತಿದೆ.
ಈ ಪೈಕಿ ಇದಾಗಲೇ ಮುಸ್ಲಿಂ ಪ್ರಾಬಲ್ಯವುಳ್ಳ ಉತ್ತರ ಪ್ರದೇಶದ ರಾಂಪುರ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಇದೀಗ ಸಮಾಜವಾದ ಪಕ್ಷದ ಇನ್ನೊಂದು ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಆಜಂಗಢವನ್ನು ಕೂಡ ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ಬಿಜೆಪಿಯ ದಿನೇಶ್​ ಲಾಲ್​ ಯಾದವ್​ ನಿರಾಹುವಾ ಅವರು ಸಮಾಜವಾದಿ ಪಕ್ಷದ ಧರ್ಮೇಂದ್ರ ಯಾದವ್​ ಅವರನ್ನು ಸೋಲಿಸಿದ್ದಾರೆ.
ಅಖಿಲೇಶ್ ಅವರು 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಅಜಂಗಢ ಲೋಕ ಸಭಾ ಕ್ಷೇತ್ರದಿಂದ ಗೆದ್ದಿದ್ದರು. ನಂತರ ಅಖಿಲೇಶ್ ಮೈನ್‌ಪುರಿ ಜಿಲ್ಲೆಯ ಕರ್ಹಾಲ್ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದರು. ಕರ್ಹಾಲ್‌ನಿಂದ ಶಾಸಕರಾಗಿ ಮುಂದುವರಿಯಲು ಅಜಂಗಢದ ಲೋಕಸಭಾ ಸಂಸದರಾಗಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ರಾಜೀನಾಮೆ ನೀಡಿದ್ದರು. ಇದರಿಂದ ತೆರವಾಗಿದ್ದ ಅಜಂಗಢ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು.
ಎಲ್ಲಿಲ್ಲಿ ನಡೆದಿವೆ ಉಪ ಚುನಾವಣೆಗಳು?ಉತ್ತರ ಪ್ರದೇಶದ ರಾಂಪುರ, ಅಜಂಗಢ ಮತ್ತು ಪಂಜಾಬ್​ನ ಸಂಗ್ರೂರು ಲೋಕಸಭಾ ಕ್ಷೇತ್ರಗಳಾದರೆ, ದೆಹಲಿಯ ರಾಜಿಂದರ್​ ನಗರ, ಜಾರ್ಖಂಡ್​ನ ಮಂದಾರ್​, ಆಂಧ್ರ ಪ್ರದೇಶದ ಆತ್ಮಾಕೂರ್​, ತ್ರಿಪುರದ ಅಗರ್ತಾಲ್​, ಬೋರ್ಡೋವಾಲಿ, ಸುರ್ಮಾ, ಜಬರ್​ನಗರ ಇವುಗಳು ವಿಧಾನಸಭಾ ಕ್ಷೇತ್ರಗಳು.
ಮುಸ್ಲಿಂ ಪ್ರಾಬಲ್ಯದ ರಾಂಪುರದಲ್ಲಿ ಬಿಜೆಪಿ ಜಯಭೇರಿ: ಸಮಾಜವಾದಿ ಪಕ್ಷದ ಭದ್ರಕೋಟೆಗೆ ಕಮಲದ ಲಗ್ಗೆ

ಪಂಜಾಬ್ ಉಪ ಚುನಾವಣೆ:​ ಸಿಎಂ ಮಾನ್ ಭದ್ರಕೋಟೆ ಭೇದಿಸಿದ ಶಿರೋಮಣಿ: ಆಪ್​ಗೆ ಭಾರಿ ಮುಖಭಂಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
