ಕೋಲ್ಕತಾ:ಈಗ ಎಲ್ಲೆಡೆ ಮತಾಂತರದ ಮಾತು ಜೋರಾಗಿ ಕೇಳಿಬರುತ್ತಿದೆ. ಉತ್ತರಪ್ರದೇಶ ಸೇರಿದಂತೆ ಕೆಲವೊಂದು ಬಿಜೆಪಿ ಸರ್ಕಾರಗಳು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದ ಬೆನ್ನಲ್ಲೇ ಹಲವಾರು ಮಂದಿ ತಮಗಾಗಿರುವ ಮತಾಂತರ ಭಯಾನಕ ಕಥೆಗಳನ್ನು ಹೇಳಿಕೊಂಡು ಮುಂದೆ ಬರುತ್ತಿದ್ದಾರೆ.
ಇದರ ಬೆನ್ನಲ್ಲೇ ಕೋರ್ಟ್​ಗಳಿಗೂ ಮತಾಂತರದ ಕೇಸ್​ಗಳು ದಾಖಲಾಗುತ್ತಿವೆ. ಇದರ ನಡುವೆ ಕೋಲ್ಕತಾ ಹೈಕೋರ್ಟ್​ ಇಂದು ಒಂದು ತೀರ್ಪು ನೀಡಿದೆ. ಅದೇನೆಂದರೆ, ಹೆಣ್ಣು ವಯಸ್ಕಳಾಗಿದ್ದರೆ, ತನ್ನ ಆಯ್ಕೆಯ ಮೇರೆಗೆ ಮದುವೆಯಾಗಿದ್ದು, ಧರ್ಮವನ್ನು ಬದಲಾಯಿಸಿದ್ದರೆ ಅದು ಮತಾಂತರ ಎನ್ನಲಾಗದು ಎಂದಿದೆ. ಈ ಹಿಂದೆ ಕೆಲ ಕೋರ್ಟ್​ಗಳು ಕೂಡ ಇದೇ ರೀತಿಯ ತೀರ್ಪುಗಳನ್ನು ಹೊರಡಿಸಿವೆ.
ಆದರೆ ಇದೀಗ ಕೋಲ್ಕತಾ ಹೈಕೋರ್ಟ್​, ಇನ್ನೂ ಒಂದು ಅಂಶವನ್ನು ತಿಳಿಸಿದ್ದು, ಅದೇನೆಂದರೆ, ಒಂದು ವೇಳೆ ಮದುವೆಯಾಗಿ ಮತಾಂತರಗೊಂಡ ಮೇಲೆ ತವರಿಗೆ ಬರಲಿಲ್ಲ, ಅಪ್ಪನನ್ನು ಕಾಣಲು ಬರಲಿಲ್ಲ ಎಂದೆಲ್ಲಾ ಹೇಳಿ ಅವರ ವೈವಾಹಿಕ ಜೀವನದ ಮಧ್ಯೆ ಪ್ರವೇಶ ಮಾಡುವುದು ಸರಿಯಲ್ಲ ಎಂದು ತೀರ್ಪು ನೀಡಿದೆ.
ತಮ್ಮ ಮಗಳು ನಾಪತ್ತೆಯಾಗಿದ್ದಳು. ನಂತರ ಮತಾಂತರಗೊಂಡಿರುವುದು ತಿಳಿದುಬಂದಿದೆ. ಮದುವೆಯಾದಂದಿನಿಂದಲೂ ಆಕೆ ತವರಿಗೆ ಬಂದಿಲ್ಲ ಎಂದು ಆತಂಕಗೊಂಡ ತಂದೆಯೊಬ್ಬರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಸಂಜೀಬ್ ಬ್ಯಾನರ್ಜಿ ಮತ್ತು ಅರಿಜಿತ್ ಬ್ಯಾನರ್ಜಿ ಅವರನ್ನು ಒಳಗೊಂಡಿರುವ ಪೀಠ ಈ ಮಾತನ್ನು ಹೇಳಿದೆ.
ತಮ್ಮ 19 ವರ್ಷದ ಮಗಳು ಪಲ್ಲವಿ ಓಡಿ ಹೋಗಿ ಅಸುಲ್ ಶೇಖ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ಮದುವೆಯಾಗಿ ಧರ್ಮ ಬದಲಿಸಿರುವುದು ನಮಗೆ ನಂತರ ತಿಳಿದುಬಂತು. ಗಂಡನ ಮನೆಯವರಿಗೆ ಹೆದರಿ ಆಕೆ ತಾನು ಸ್ವಇಚ್ಛೆಯಿಂದ ಧರ್ಮ ಬದಲಾಯಿಸಿರುವುದಾಗಿ ಹೇಳುತ್ತಿದ್ದಾಳೆ ಎಂಬ ಆತಂಕ, ನೋವು ಈ ತಂದೆಯಲ್ಲಿತ್ತು.
ಆದರೆ ಇದನ್ನು ಕೋರ್ಟ್​ ಮಾನ್ಯ ಮಾಡಲಿಲ್ಲ. ತನ್ನ ಸ್ವ ಇಚ್ಛೆಯಿಂದ ಧರ್ಮ ಬದಲಾಯಿಸುವ ಹಕ್ಕು ಪ್ರಾಪ್ತ ವಯಸ್ಕಳಿಗೆ ಇದೆ., ತನ್ನ ಸ್ವಇಚ್ಛೆಯಿಂದ ಆತನೊಂದಿಗೆ ವಾಸಿಸುತ್ತಿರುವುದಾಗಿ ಹೇಳಿಕೆ ನೀಡಿದ್ದಾಳೆ. ತನ್ನ ಹೆಸರನ್ನು ಆಯೇಷಾ ಖತೂನ್​ ಎಂದು ಬದಲಾಯಿಸಿಕೊಂಡಿದ್ದಾಳೆ. ಇವೆಲ್ಲಾ ಸ್ವ ಇಚ್ಛೆಯಿಂದ ಆಗಿರುವ ಕಾರಣ, ಪಾಲಕರು ಮಧ್ಯೆ ಪ್ರವೇಶ ಮಾಡಬಾರದು ಎಂದಿದೆ ಪೀಠ.
ಬಸ್ ಒಳಗೆ ಆಡುತ್ತಿದ್ದ ಬಾಲಕಿಯ ರೇಪ್​ ಮಾಡಿ ಗೋಣಿ ಚೀಲದಲ್ಲಿ ತುಂಬಿಟ್ಟ ಚಾಲಕ!

400 ವರ್ಷಗಳ ಬಳಿಕದ ಕೌತುಕದ ಫೋಟೋ ಶೇರ್​ ಮಾಡಿದ ನಾಸಾ: ಶುರುವಾಗಿದೆ ಗುರು-ಶನಿ ಟ್ರೆಂಡ್​

ಕೋರ್ಟ್‍ನಲ್ಲಿವೆ ವಿವಿಧ ಹುದ್ದೆಗಳು: ಎಸ್​ಎಸ್​ಎಲ್​ಸಿ ಪಾಸ್​ ಆದವರಿಗೂ ಇವೆ ಅವಕಾಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + twelve =
Remember me
