ಲಖನೌ:ಉತ್ತರ ಪ್ರದೇಶದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಬಂದ ಮೇಲೆ ಒತ್ತಾಯದಿಂದ ಮತಾಂತರ ಮಾಡಿರುವವರನ್ನು ಹಿಡಿದು ಜೈಲಿಗೆ ಅಟ್ಟಲಾಗುತ್ತಿದೆ. ಆಮಿಷ ಒಡ್ಡುವ ಮೂಲಕ, ಒತ್ತಾಯದಿಂದ, ಬೆದರಿಕೆ ಹಾಕುವ ಮೂಲಕ ಮತಾಂತರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂಥದ್ದೊಂದು ಕಠಿಣ ಕಾನೂನನ್ನು ಅಲ್ಲಿಯ ಸರ್ಕಾರ ಜಾರಿಗೆ ತಂದಿದೆ.
ಅದೇ ರೀತಿ ರಶೀದ್ ಅಲಿ ಎಂಬ ಯುವಕನನ್ನೂ ಬಲವಂತದ ಮತಾಂತರಕ್ಕೆ ಸಂಬಂಧಿಸಿದಂತೆ ಬಂಧಿಸಿ ಜೈಲಿನಲ್ಲಿ ಇಡಲಾಗಿದೆ. ಯುವತಿಯ ಪಾಲಕರು ತಮ್ಮ ಮಗಳನ್ನು ಬಲವಂತದಿಂದ ಮತಾಂತರ ಮಾಡಿರುವುದಾಗಿ ದೂರು ದಾಖಲಿಸಿದ್ದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ.
ಈತ ಆತನ ಪತ್ನಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ತನ್ನ ಪತಿಯನ್ನು ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದಾಳೆ. ಪಿಂಕಿ ಎಂಬ 21 ವರ್ಷದ ಯುವತಿಯೀಗ ಕೋರ್ಟ್​ ಮೊರೆ ಹೋಗಿದ್ದಾಳೆ.
ಇದನ್ನೂ ಓದಿ:ಮತಾಂತರವೆಂಬ ಭಯಾನಕ ನರಕ ಅನುಭವಿಸಿದ್ದೆ- ಗಾಯಕ ವಾಜಿದ್‌ ಖಾನ್​ ಪತ್ನಿ ಬಿಚ್ಚಿಟ್ಟಿದ್ದಾರೆ ಕರಾಳ ಅನುಭವ…
ಈಕೆಯನ್ನು ಬಲವಂತದಿಂದ ಮತಾಂತರ ಮಾಡಿದ್ದೂ ಅಲ್ಲದೇ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದಂತೆ ಮದುವೆಯಾಗಿರುವ ಆರೋಪ ಈಕೆಯ ಪತಿ ರಶೀದ್​ ಮೇಲಿದೆ. ಆದರೆ ಈಗ ಯುವತಿ ತಾನು ಮತಾಂತರ ಆಗಿಯಾಗಿದೆ. ಐದು ತಿಂಗಳ ಹಿಂದೆ ಮದುವೆಯಾಗಿದೆ, ಈಗ ನಾನು ಮೂರು ತಿಂಗಳ ಗರ್ಭಿಣಿ. ಆದ್ದರಿಂದ ಪತಿಯನ್ನು ಬಿಡುಗಡೆ ಮಾಡಲು ಪೊಲೀಸರಿಗೆ ಆದೇಶಿಸಿ ಎಂದು ಕೋರ್ಟ್​ ಅನ್ನು ಕೋರಿದ್ದಾಳೆ.
ನಾನು ವಯಸ್ಕಳಾಗಿದ್ದೇನೆ. ಈಗ ಮತಾಂತರವಾಗಿ ಹಿಂದೂಳಿಂದ ಮುಸ್ಲಿಂ ಆಗಿಹೋಗಿದ್ದೇನೆ ಎಂದು ಗೋಗರೆದಿರುವ ಯುವತಿ, ತಾನೀಗ ಗರ್ಭಿಣಿಯಾಗಿದ್ದು, ಮದುವೆ ತನ್ನ ಇಚ್ಛೆಯಂತೆ ಆಗಿದೆ ಎಂದು ಹೇಳಿಕೆ ನೀಡಿದ್ದಾಳೆ.
ಪಿಂಕಿಯನ್ನು ರಶೀದ್​ ಹಾಗೂ ಆತನ ಕುಟುಂಬಸ್ಥರು ಬಲವಂತದಿಂದ ಮತಾಂತರ ಮಾಡಿರುವುದಾಗಿ ಆರೋಪಿಸಿ ಭಜರಂಗದಳದ ಕಾರ್ಯಕರ್ತರು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಇದನ್ನು ಕೋರ್ಟ್​ಗೆ ತಿಳಿಸಿರುವ ಪಿಂಕಿ, ಇದೀಗ ತಾನು ಇಚ್ಛೆಪಟ್ಟು ಮದುವೆಯಾಗಿರುವುದಾಗಿ ಹೇಳಿದ್ದಾಳೆ.
ಈ ಬಗ್ಗೆ ತನಿಖೆ ನಡೆಸಿ ಸತ್ಯಾಸತ್ಯಗೆ ಪರಿಶೀಲಿಸುವಂತೆ ಕೋರ್ಟ್​ ಹೇಳಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಭಾಕರ್ ಚೌಧರಿ ತಿಳಿಸಿದ್ದಾರೆ.
ಇದನ್ನೂ ಓದಿ:ಯುವತಿಯನ್ನು ಅಪಹರಿಸಿ ಮತಾಂತರಕ್ಕೆ ಯತ್ನ: ಲವ್​ ಜಿಹಾದ್​ ಕಾಯ್ದೆಯಡಿ ಏಳು ಮಂದಿ ಅರೆಸ್ಟ್​
ಮತಾಂತರ ನಿಷೇಧ ಕಾಯ್ದೆ ಜಾರಿಗೆ ಬಂದ ನಂತರ ಉತ್ತರ ಪ್ರದೇಶದಲ್ಲಿ ಈವರೆಗೆ ಏಳು ಮಂದಿಯನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶ ಮಾತ್ರವಲ್ಲದೇ ಬಿಜೆಪಿ ಆಡಳಿತ ಇರುವ ಹರಿಯಾಣ ಮತ್ತು ಮಧ್ಯಪ್ರದೇಶಗಳಲ್ಲಿಯೂ ಮತಾಂತರ ನಿಷೇಧ ಕಾಯ್ದೆ ಜಾರಿ ಪ್ರಕ್ರಿಯೆಯಲ್ಲಿದೆ.
ಗುಪ್ತಾಂಗದಲ್ಲಿ ತುರಿಕೆ, ಮೂತ್ರ ವಿಸರ್ಜನೆಯಲ್ಲಿ ಉರಿ- ಸಮಸ್ಯೆಯಾದರೆ ಹೀಗೆ ಮಾಡಿ…

ಡಾನ್ಸ್​ ಮಾಡಲು ವಧುವನ್ನು ಎಳೆದ ವರನ ಸ್ನೇಹಿತರು- ಮುಂದೆ ಆಗಬಾರದ್ದೆಲ್ಲಾ ಆಗೋಯ್ತು!

ಉಲ್ಟಾ ಹೋದ ಮದುಮಗನ ಕುರ್ತಾ ಎಳೆದ ವಧು- ಫನ್ನಿ ವಿಡಿಯೋ ವೈರಲ್​

ಕ್ಷಮಿಸು ಭಾರತ್​ಮಾತಾ- ಸೈನ್ಯದ ಸಮವಸ್ತ್ರ ಧರಿಸಿ, ಬಾವುಟ ಹಿಡಿಯುವ ಆಸೆ ಈಡೇರಿಸದೇ ಸಾಯುತ್ತಿರುವೆ…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five + 20 =
Remember me
