ನವದೆಹಲಿ:ಪರಿಸರ ಪ್ರೇಮದ ಕುರಿತಂತೆ ಆಗಾಗ್ಗೆ ನಟಿ ಅನುಷ್ಕಾ ಶರ್ಮಾ ಕೆಲವೊಂದು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ಪತಿ, ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಜತೆ ಇಂಗ್ಲೆಂಡ್ ಪ್ರವಾಸದಲ್ಲಿರುವ ಅನುಷ್ಕಾ ಈಗ ಇನ್ನೊಂದು ಹೊಸ ಟ್ರೆಂಡ್‌ ಶುರು ಮಾಡಿದ್ದಾರೆ.
ಅದೇನೆಂದರೆ ‘ಸರ್ಕ್ಯೂಲರ್‌-ಫ್ಯಾಷನ್’ ಎಂಬ ಟ್ರೆಂಡ್‌ ಇದು. ಬಳಸಿದ ಬಟ್ಟೆಗಳನ್ನು ಮರಳಿ ಬಳಸುವ ಸರ್ಕ್ಯೂಲರ್‌-ಫ್ಯಾಷನ್ ಎಂಬ ಟ್ರೆಂಡ್‌ ಇದು ಎಂದಿರುವ ನಟಿ, ಇದನ್ನು ಪ್ರಮೋಟ್‌ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಈ ಮೂಲಕ ಫ್ಯಾಷನ್‌ ಲೋಕದಿಂದ ಹೊಸದೊಂದು ಸೃಷ್ಟಿ ಮಾಡಲಿರುವುದಾಗಿ ಹೇಳಿದ್ದಾರೆ.
ಇದರ ಮೊದಲ ಹೆಜ್ಜೆಯಾಗಿ ತಮ್ಮ ಬಾಣಂತನದ ಅವಧಿಯಲ್ಲಿ ಧರಿಸಿದ್ದ ಬಟ್ಟೆಗಳನ್ನು ಆನ್‌ಲೈನ್‌ ಮೂಲಕ ಹರಾಜು ಹಾಕಿದ್ದಾರೆ. ಸ್ನೇಹ ಪ್ರತಿಷ್ಠಾನದ ಮೂಲಕ ಹರಾಜು ಪ್ರಕ್ರಿಯೆ ನಡೆಸಿರುವ ನಟಿ ಇದರಿಂದಾಗಿ ತಮ್ಮಿಂದ 2.5 ಲಕ್ಷ ಲೀಟರ್‌ ನೀರು ಉಳಿತಾಯವಾಗಿದೆ ಎಂದು ಹೇಳಿಕೊಂಡಿದ್ದಾರೆ. ಇದರಿಂದ ಬಟ್ಟೆ ತಯಾರಿಕೆಗೆ ಬಳಸುವ ನೀರನ್ನು ಉಳಿತಾಯ ಮಾಡಬಹುದು ಎನ್ನುವುದು ಅವರ ಮಾತು.
‘ದೇಶದಲ್ಲಿರುವ ಗರ್ಭಿಣಿಯರ ಪೈಕಿ ಶೇ. 1ರಷ್ಟು ಮಹಿಳೆಯರು ಮಾತ್ರ ಮರುಬಳಸಬಲ್ಲ ಬಾಣಂತನದ ಬಟ್ಟೆ ಖರೀದಿ ಮಾಡಿದರೆ, ನಾವೆಲ್ಲಾ ಸೇರಿಕೊಂಡು ವ್ಯಕ್ತಿಯೊಬ್ಬ 200 ವರ್ಷ ಬದುಕಿದರೆ ಆತನಿಗೆ ಬೇಕಾಗುವಷ್ಟು ನೀರನ್ನು ಉಳಿತಾಯ ಮಾಡಬಹುದಾಗಿದೆ. ಇಂಥ ಸಣ್ಣ ಪುಟ್ಟ ಕ್ರಿಯೆಗಳಿಂದ ದೊಡ್ಡ ಬದಲಾವಣೆ ತರಬಹುದಾಗಿದೆ’ ಎಂದು ತಮ್ಮ ಈ ಹೊಸ ಟ್ರೆಂಡ್‌ಗೆ ಸ್ಪಷ್ಟನೆ ನೀಡಿದ್ದಾರೆ.
ಅಂದಹಾಗೆ ಈ ದಂಪತಿಗೆ ಇದೇ ಜನವರಿಯಲ್ಲಿ ಹೆಣ್ಣುಮಗು ಜನಿಸಿದೆ. ಅದಕ್ಕೆ ವಮಿಕಾ ಎಂದು ನಾಮಕರಣ ಮಾಡಿದ್ದಾರೆ.
ನೋಡಬಾರದ್ದನ್ನು ಅಮ್ಮ ನೋಡಿದಳು- ಅದಕ್ಕಾಗಿ ವಿಚ್ಛೇದನ ಕೊಟ್ಟೆ: ಬಹು ವರ್ಷಗಳ ಸತ್ಯ ಬಿಚ್ಚಿಟ್ಟ ಶಿಲ್ಪಾ ಶೆಟ್ಟಿ ಪತಿ ಕುಂದ್ರಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
