ಮುಂಬೈ:ಅಪರಿಚಿತರು ಕರೆ ಮಾಡಿದರೆ, ತುಂಬಾ ಕೇರ್​ಫುಲ್​ ಆಗಿರಿ, ಬ್ಯಾಂಕ್​ ಡಿಟೇಲ್ಸ್​, ವೈಯಕ್ತಿಕ ಮಾಹಿತಿ ಯಾವುದೂ ಕೊಡಬೇಡಿ ಎಂದು ಎಷ್ಟೇ ಸುದ್ದಿಗಳು ಬರುತ್ತಿದ್ದರೂ ಜನರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ.
ಅಂಥದ್ದೇ ಒಂದು ಎಡವಟ್ಟು ಮಾಡಿರುವ ವ್ಯಕ್ತಿಯೊಬ್ಬರು ಇದೀಗ 9 ಲಕ್ಷ ರೂಪಾಯಿ ಕಳೆದುಕೊಂಡು ಪೊಲೀಸ್​ ಠಾಣೆ ಅಲೆಯಬೇಕಾದ ಪ್ರಸಂಗ ಬಂದಿದೆ.
ಇದನ್ನೂ ಓದಿ:35 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಬ್ಯಾಂಕ್ ಲಾಕರ್​ನಿಂದಲೇ ನಾಪತ್ತೆ!
ಅಷ್ಟಕ್ಕೂ ಆಗಿದ್ದೇನೆಂದರೆ, ಅಶೋಕ್ ಮನ್ವಾಟೆ ಎನ್ನುವ ಮಹಾರಾಷ್ಟ್ರದ ನಾಗ್ಪುರದ ವ್ಯಕ್ತಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದಾನೆ. ಆ ಸಂದರ್ಭದಲ್ಲಿ ಅಶೋಕ್​ ಅವರ 15 ವರ್ಷದ ಮಗ ಕರೆ ಸ್ವೀಕರಿಸಿದ್ದಾನೆ. ಅಲ್ಲಿಂದ ಕರೆ ಮಾಡಿದಾತ ತಾನು ಡಿಜಿಟಲ್ ಹಣ ಪಾವತಿ ಕಂಪನಿಯ ಗ್ರಾಹಕ ಆರೈಕೆಯ ಕಾರ್ಯನಿರ್ವಾಹಕ ಎಂದು ಹೇಳಿಕೊಂಡು, ನಿಮ್ಮ ಮೊಬೈಲ್ ನಲ್ಲಿ ಆ್ಯಪ್ ಡೌನ್​ಲೋಡ್ ಮಾಡಿ ಅದಕ್ಕೆಬ್ಯಾಂಕ್ ಅಕೌಂಟ್ ಲಿಂಕ್ ಮಾಡುವಂತೆಯೂ ಹೇಳಿದ್ದಾನೆ. ಅಲ್ಲದೆ ಕ್ರೆಡಿಟ್ ಮಿತಿ ಹೆಚ್ಚಿಸುವುದಾಗಿ ತಿಳಿಸಿದ್ದಾನೆ.
ಇದನ್ನು ಬಾಲಕ ನಂಬಿಬಿಟ್ಟಿದ್ದಾನೆ. ಹಿಂದೆ ಮುಂದೆ ನೋಡದೇ ತಂದೆಯ ಮೊಬೈಲ್ ನಲ್ಲಿ ಆ್ಯಪ್ ಇನ್​ಸ್ಟಾಲ್ ಮಾಡಿದ್ದಾನೆ. ಅಷ್ಟೇ. ಆ್ಯಪ್​ ಇನ್​ಸ್ಟಾಲ್​ ಆಗುತ್ತಿದ್ದಂತೆಯೇ ಅಶೋಕ್​ ಅವರ ಬ್ಯಾಂಕ್​ ಖಾತೆಯಲ್ಲಿದ್ದ 8.95 ಲಕ್ಷ ರೂಪಾಯಿ ವಿತ್​ಡ್ರಾ ಆಗಿಬಿಟ್ಟಿದೆ.ಈ ವಿಷಯ ತಿಳಿಯುತ್ತಲೇ ಇದೀಗ ಅಶೋಕ್​ ಅವರು ಸೈಬರ್​ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾರೆ. ತನಿಖೆ ನಡೆಯುತ್ತಿದೆ.
ಚೆಲುವೆ ಕರೆದಳೆಂದು ಮನೆಗೆ ಹೋದೆ… ಅಲ್ಲಿ ಇನ್ನೂ ನಾಲ್ವರು ಸುಂದರಿಯರು ಇದ್ದರು… ಮುಂದೆ…

ಮುಂದಿನ ಮಗುವಾದ್ರೂ ಹೆಣ್ಣಾಗಲೆಂದು ಈ ದಂಪತಿ ಹೀಗೆಲ್ಲಾ ಮಾಡೋದಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
