ಬೆಂಗಳೂರು:ಇತ್ತೀಚೆಗೆ ನಿಧನರಾದ ಪುನೀತ್‌ ರಾಜ್‌ಕುಮಾರ್‌ ಅವರ ಆತ್ಮದ ಜತೆಗೆ ತಾವು ಮಾತನಾಡಿರುವುದಾಗಿ ಸ್ಟೀವ್‌ ಹಫ್‌ ಹೇಳಿಕೊಂಡಿದ್ದಾರೆ. ಇದರ ವಿಡಿಯೋ ಕೂಡ ಅವರು ಬಿಡುಗಡೆ ಮಾಡಿದ್ದಾರೆ. ಈ ಹಿಂದೆ ನಟ ಸುಶಾಂತ್‌ ಸಿಂಗ‌ ರಜಪೂತ್‌, ಚಿರಂಜೀವಿ ಸರ್ಜಾ ಸೇರಿದಂತೆ ಹಲವು ಸೆಲೆಬ್ರಿಟಿಗಳ ಆತ್ಮಗಳ ಜತೆ ತಾವು ಮಾತನಾಡಿರುವುದಾಗಿ ಹೇಳಿಕೊಂಡು ಅದರ ವಿಡಿಯೋ ಬಿಡುಗಡೆ ಮಾಡುತ್ತಿರುವ ಸ್ಟೀವ್‌, ಇದೀಗ ಪುನೀತ್‌ ಅವರ ಆತ್ಮದ ಜತೆಗಿನ ಮಾತುಕತೆಯ ಬಗ್ಗೆಯೂ ವಿಡಿಯೋ ಶೇರ್‌ ಮಾಡಿದ್ದಾರೆ.
ಆದರೆ ಇದಾಗಲೇ ಹಲವಾರು ಪವಾಡಗಳನ್ನು ಬಯಲು ಮಾಡುವಲ್ಲಿ ನಿಸ್ಸೀಮರಾಗಿರುವ ಖ್ಯಾತಿಹೊತ್ತ ಹುಲೀಕಲ್‌ ನಟರಾಜ್‌ ಅವರು ಈ ವೈರಲ್‌ ವಿಡಿಯೋದ ಬಗ್ಗೆ ಮಾತನಾಡಿದ್ದಾರೆ. ಇವೆಲ್ಲವೂ ಶುದ್ಧ ಸುಳ್ಳು, ಆತ್ಮದ ಜತೆ ಮಾತುಕತೆ ಸಾಧ್ಯವಿಲ್ಲ. ಇವೆಲ್ಲ ಕಣ್ಣುಕಟ್ಟು ವಿದ್ಯೆ ಎಂದು ಅವರು ಹೇಳಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುವ ನಿಟ್ಟಿನಲ್ಲಿ ಖ್ಯಾತ ಚಿತ್ರನಟರ ಹೆಸರನ್ನು ಬಳಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಇಂಥವರು ಎಂದು ಹುಲೀಕಲ್‌ ಆರೋಪಿಸಿದ್ದಾರೆ.
ಸೆಲೆಬ್ರಿಟಿ  ಅವರ ಆತ್ಮದ ಜತೆ ಮಾತನಾಡಿದ್ದೇನೆ ಎಂದು ಭಾರತೀಯರನ್ನು ಮಾತ್ರವಲ್ಲದೇ ಇಂಥ ವಿಡಿಯೋ ವಿದೇಶಕ್ಕೂ ಕಳುಹಿಸಿ ಅಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದೊಂದು ರೀತಿಯಲ್ಲಿ ವಿಕೃತ ಮನಸ್ಸು. ಧ್ವನಿ ಬದಲಾವಣೆಯ ಸಾಧನ ಬಳಸಿಕೊಂಡು ಒಬ್ಬೊಬ್ಬ ಸೆಲೆಬ್ರಿಟಿಯ ಒಂದೊಂದು ದನಿ ಅದರಿಂದ ಪಡೆದು ಜನರನ್ನು ಮೋಸ ಮಾಡುತ್ತಿದ್ದಾರೆ. ಪುನೀತ್‌ ಅವರ ವಿಷಯದಲ್ಲಿಯೂ ಇದೇ ರೀತಿ ಆಗಿದೆ. ಯಾವುದೇ ಆತ್ಮ ಮಾತನಾಡಲಿಲ್ಲ. ಇಂಥ ಸುಳ್ಳು ವಿಡಿಯೋಗಳನ್ನು ಜನರು ನಂಬಬಾರದು ಎಂದು ಅವರು ಹೇಳಿದ್ದಾರೆ.
ಏನಿದು ಆತ್ಮದ ಜತೆ ಮಾತುಕತೆ? ಪುನೀತ್‌ ಅವರ ಆತ್ಮದ ಜತೆ ನಡೆದಿದೆ ಎನ್ನಲಾದ ವಿಡಿಯೋ ಇಲ್ಲಿದೆ ನೋಡಿ…
VIDEO: ಅಪ್ಪುವಿನ ಆತ್ಮದ ಜತೆಗೆ ಮಾತನಾಡಿದ ಅಮೆರಿಕದ ತಜ್ಞ? ವಿಡಿಯೋ ಇಲ್ಲಿದೆ ನೋಡಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × two =
Remember me
