ಬೆಂಗಳೂರು:ನಟ ಪುನೀತ್‌ ಅವರು ಎಲ್ಲರನ್ನೂ ಅಗಲಿ ಇಂದು 11ನೇ ದಿನ. ಇಂಥ ನೋವಿನ ನಡುವೆಯೂ ಅಪ್ಪು ಅವರ ಪತ್ನಿ ಅಶ್ವಿನಿ ಅವರು, ಪೊಲೀಸ್‌ ಇಲಾಖೆಗೆ ಪತ್ರ ಬರೆದು ಧನ್ಯವಾದ ಸಲ್ಲಿಸಿದ್ದಾರೆ.ನಮ್ಮ ನೋವನ್ನು ಅಡಗಿಸಿಟ್ಟುಕೊಂಡು ಅವರನ್ನು ಸಕಲ ಗೌರವಗಳೊಂದಿಗೆ ಕಳುಹಿಸಿಕೊಡಬೇಕಿತ್ತು. ಅಂತಿಮ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಮಾಡಿ, ಮೆರವಣಿಗೆ ಹಾಗೂ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಸಾಕಷ್ಟು ಪೊಲೀಸ್ ನಿಯೋಜಿಸಿ, ಕಾನೂನು ಸುವ್ಯವಸ್ಥೆಗೆ ಎಲ್ಲಿಯೂ ಧಕ್ಕೆ ಆಗದಂತೆ ನೋಡಿಕೊಂಡಿದ್ದೀರಿ. ನಮ್ಮ ಇಡೀ ಕುಟುಂಬ ಹಾಗೂ ಎಲ್ಲ ಅಭಿಮಾನಿಗಳ ಪರವಾಗಿ ನಿಮಗೆ ಮತ್ತು ಎಲ್ಲ ಸಿಬ್ಬಂದಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಪತ್ರದಲ್ಲಿ ಅವರು ಹೇಳಿದ್ದಾರೆ.ಈ ಪತ್ರವನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಕಳುಹಿಸಿದ್ದಾರೆ. ಪುನೀತ್‌ ಅವರ ನಿಧನದಿಂದ ಕೋಟ್ಯಂತರ ಅಭಿಮಾನಿಗಳು ಕಂಗೆಟ್ಟು ಹೋಗಿದ್ದರು. ಲಕ್ಷಗಟ್ಟಲೆ ಅಭಿಮಾನಿಗಳು ಕಂಠೀರವ ಸ್ಟುಡಿಯೋದತ್ತ ಧಾವಿಸಿದ್ದರು. ಇಂಥ ಸಂದರ್ಭದಲ್ಲಿ ಜನರನ್ನು ನಿಯಂತ್ರಿಸುವುದು ಪೊಲೀಸರಿಗೆ ಹರಸಾಹಸದ ಕೆಲಸವೇ ಆಗಿತ್ತು. ಆದರೆ ಪೊಲೀಸ್ ಇಲಾಖೆ ಅದನ್ನು ತುಂಬಾ ಸಮಚಿತ್ತದಿಂದ ನಿಭಾಯಿಸಿ ಭಾರಿ ಶ್ಲಾಘನೆ ಗಳಿಸಿದೆ. ಅದರ ಬೆನ್ನಲ್ಲೇ ಇದೀಗ ಅಶ್ವಿನಿ ಅವರು ಕೂಡ ಇಲಾಖೆಗೆ ಪತ್ರದ ಮುಖೇನ ಧನ್ಯವಾದ ಸಲ್ಲಿಸಿದ್ದಾರೆ.ಈ ನಡುವೆಯೇ, 11ನೇ ದಿನದ ಕಾರ್ಯಕ್ಕೆ ಕುಟುಂಬಸ್ಥರು ಸಕಲ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ. ಬೆಳಗ್ಗೆ 9.45ರ ಗಂಟೆ ಸುಮಾರಿಗೆ ಸದಾಶಿವನಗರದ ನಿವಾಸದಿಂದ ಕಂಠೀರವ ಸ್ಟುಡಿಯೋಗೆ ಪುನೀತ್‌ ಅವರ ಕುಟುಂಬಸ್ಥರು ತೆರಳಲಿದ್ದಾರೆ. ಅಪ್ಪುಗೆ ಇಷ್ಟವಾದ ಊಟವನ್ನ ಸಮಾಧಿ ಮುಂದೆ ಇಟ್ಟು ಪೂಜೆ ಮಾಡಲಿದ್ದಾರೆ. ನಾಳೆ (ಮಂಗಳವಾರ) 12 ಗಂಟೆಗೆ ಅನ್ನ ಸಂತರ್ಪಣೆ ಇರಲಿದೆ.

ಪುನೀತ್‌ ಹೆಸರಲ್ಲಿ ಫಿಲ್ಮ್‌ ಛೇಂಬರ್‌ನಿಂದ ಹಣ ವಸೂಲಿ ಕಾರ್ಯ? ಖಾಸಗಿ ಅಕೌಂಟ್‌ಗೆ ಹಣ ವರ್ಗ? ಗಂಭೀರ ಆರೋಪ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − one =
Remember me
