
ಪ್ರಶ್ನೆ: ನನ್ನ ವಯಸ್ಸು 21. ನನಗೆ ನೆನಪಿನ ಶಕ್ತಿ ತುಂಬ ಕಡಿಮೆಯಾಗಿದೆ. ಓದಿರುವುದು ಯಾವುದೂ ನೆನಪಿನಲ್ಲಿ ಉಳಿಯುತ್ತಿಲ್ಲ. ರಾತ್ರಿ ನಿದ್ದೆ ಬರುತ್ತಿಲ್ಲ. ನಾನು ಪ್ರೀತಿಸಿದ ಹುಡುಗ 7 ವರ್ಷದಿಂದ ನನ್ನ ದೇಹ ಸಂಪರ್ಕ ಹೊಂದಿದ್ದ. ಈಗ ಅವನು ಬೇರೆ ಮದುವೆಯಾಗಿ ಸುಖವಾಗಿದ್ದಾನೆ. ಇದರಿಂದ ನನಗೆ ತುಂಬ ನೋವಾಗುತ್ತಿದೆ.
ನಾನು ಹುಚ್ಚಿ ಆಗುತ್ತೀನಾ ಎಂದೆನಿಸುತ್ತಿದೆ ಮೇಡಂ. ಏನಾದರೂ ಮಾಡಿಕೊಂಡು ಈ ಪ್ರಪಂಚದಿಂದಲೇ ದೂರ ಹೋಗೋಣ ಎಂದೂ ಅನಿಸುತ್ತದೆ. ಇದರಿಂದಲೇ ನನ್ನ ಓದಿಗೂ ತೊಂದರೆಯಾಗುತ್ತಿದೆ. ಈ ನೋವಿನಲ್ಲೇ ಊಟ-ತಿಂಡಿಯನ್ನೂ ಸರಿಯಾಗಿ ಮಾಡುತ್ತಿಲ್ಲ. ತುಂಬ ಸುಸ್ತೆನಿಸುತ್ತಿದೆ. ತಲೆಯ ಕೂದಲು ಉದುರಿ ತುಂಬ ತೆಳ್ಳಗಾಗಿದೆ.
ಮುಖದ ಮೇಲೆ ಮೊಡವೆ ಮತ್ತು ಕಲೆಗಳು, ಬ್ಲಾಕ್‍ಹೆಡ್ಸ್, ವೈಟ್ ಹೆಡ್ಸ್ ಕೂಡ ಹೆಚ್ಚಾಗಿವೆ. ಬಣ್ಣವೂ ಮಾಸಿ ಹೋಗುತ್ತಿದೆ. ಇಷ್ಟಲ್ಲದೆ ಬಿಳಿಸೆರಗು ಜಾಸ್ತಿ ಹೋಗುತ್ತದೆ. ದಯವಿಟ್ಟು ಇದಕ್ಕೆಲ್ಲ ಪರಿಹಾರ ತಿಳಿಸಿ ಮೇಡಂ.
ಉತ್ತರ:ನಿಮಗಿನ್ನೂ 21 ವರ್ಷ. ಈಗಲೇ ಎಲ್ಲ ಕಳೆದುಕೊಂಡವರಂತೆ ಚಿಂತಿಸುತ್ತಿರುವಿರಲ್ಲ. ಏಳು ವರ್ಷಗಳವರೆಗೂ ಅವನು ದೈಹಿಕ ಸಂಪರ್ಕದಲ್ಲಿರುವಾಗ ನಿಮಗೆ ಎಚ್ಚರ ಇರಲಿಲ್ಲವೇ? ಆಗ ಮದುವೆಯ ಬಗ್ಗೆ ಪ್ರಶ್ನಿಸಲಿಲ್ಲವೇ?
ಅವನು ನಿಮ್ಮನ್ನು ಪ್ರೀತಿಸಿಲ್ಲ, ಕಾಮಿಸಿದ್ದಾನೆ. ಇರಲಿ. ಈಗ ಕೊರಗುವುದರಿಂದ ಯಾವ ಪ್ರಯೋಜನವೂ ಇಲ್ಲ. ಅವನು ಹೇಗೆ ನಿಮ್ಮನ್ನು ಮರೆತು ಮತ್ತೊಂದು ಮದುವೆಯಾಗಿ ಸಂತೋಷವಾಗಿದ್ದಾನೋ ನೀವು ಕೂಡ ಆಗಿದ್ದೆಲ್ಲವನ್ನೂ ಕೆಟ್ಟ ಕನಸು ಎಂದು ಮರೆತುಬಿಡಿ.
ನೀವು ಓದಿನತ್ತ ಗಮನಕೊಡಿ. ಸಮಯಕ್ಕೆ ಸರಿಯಾಗಿ ಊಟ-ತಿಂಡಿ ಮಾಡಿ. ಊಟ-ತಿಂಡಿಯನ್ನು ಸರಿಯಾಗಿ ಮಾಡದಿರುವುದು ಮತ್ತು ಚಿಂತೆಯಿಂದ ಸುಸ್ತು, ತಲೆಗೂದಲು ಉದುರುವುದು, ಬಿಳಿಸೆರಗು ಇವೆಲ್ಲವೂ ಕಾಣಿಸಿಕೊಂಡಿವೆ. ದಿನಕ್ಕೆ ಮೂರು ಲೀ. ನೀರು ಕುಡಿಯಿರಿ.ಸೊಪ್ಪು, ತರಕಾರಿ, ಹಣ್ಣುಗಳನ್ನು ಸೇವಿಸಿ. ಮುಖವನ್ನು ದಿನಕ್ಕೆ 3-4 ಬಾರಿ ಬಿಸಿನೀರಿನಿಂದ ಮುಖ ತೊಳೆಯಿರಿ. ಬೇವಿನಪುಡಿ, ಮೆಂತ್ಯಪುಡಿ, ನೆಲ್ಲಿಕಾಯಿ ಪುಡಿಯನ್ನು ಸಮಭಾಗ ತೆಗೆದುಕೊಂಡು ಗುಲಾಬಿ ಜಲದಲ್ಲಿ ಬೆರೆಸಿ ಲೇಪಿಸಿಕೊಳ್ಳಿ. ಒಂದು ಗಂಟೆಯ ನಂತರ ಮುಖ ತೊಳೆದಲ್ಲಿ ಮೊಡವೆ ಕಲೆಗಳು ಮಾಯವಾಗುತ್ತವೆ.
ಆಯುರ್ವೇದಕ್ಕೆ ಸಂಬಂಧಿಸಿದಂತೆ ಡಾ.ವಸುಂಧರಾ ಭೂಪತಿ ಅವರು ಬರೆದಿರುವ ಅಂಕಣಕ್ಕಾಗಿ https://www.vijayavani.net/ ಕ್ಲಿಕ್ಕಿಸಿ ಆರೋಗ್ಯ ವಿಭಾಗ ನೋಡಿ…
ಪುರುಷತ್ವ ಹೆಚ್ಚಿಸಲು ಆಯುರ್ವೇದ ಪರಿಹಾರವೇನು? ವೈದ್ಯರು ಕೊಟ್ಟ ಮಾಹಿತಿ ಇಲ್ಲಿದೆ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen + seven =
Remember me
