ಪ್ರಶ್ನೆ: ನಾನು ಸರ್ಕಾರಿ ನೌಕರ. ವಯಸ್ಸು 34. ಮದುವೆ ಆಗಿದೆ. ಇಬ್ಬರು ಮಕ್ಕಳು. ನಾನು ದೈಹಿಕವಾಗಿ ಆರೋಗ್ಯವಾಗಿಯೇ ಇದ್ದೇನೆ. ಮಾನಸಿಕವಾಗಿ ನರಳುತ್ತಿದ್ದೇನೆ. ಮನೋವೈದ್ಯರನ್ನು ಸಂಪರ್ಕಿಸಿ ಮಾತ್ರೆಗಳನ್ನು ತೆಗೆದುಕೊಂಡಿದ್ದಾಗಿದೆ.
ಎಲ್ಲಿ ಹೋದರೂ ನನ್ನ ಮನಸ್ಸಿಗೆ ಶಾಂತಿ, ನೆಮ್ಮದಿ ಇಲ್ಲ. ನನ್ನ ಪತ್ನಿ ನನ್ನನ್ನು ತುಂಬ ಪ್ರೀತಿಸುತ್ತಾಳೆ. ನಾನೂ ಅವಳನ್ನು ತುಂಬ ಪ್ರೀತಿಸುತ್ತೇನೆ. ಆದರೆ, ನನ್ನ ಮಾನಸಿಕ ವೇದನೆ ಏನೆಂದರೆ, ನನ್ನ ಪತ್ನಿ ನನ್ನನ್ನು ಬಿಟ್ಟು ಬೇರೆ ಪುರುಷರ ಜತೆಗೆ ಹೆಚ್ಚು ಮಾತನಾಡಿದರೆ, ಮನಸ್ಸಿನಲ್ಲಿ ಒಂದು ರೀತಿಯ ಚಿತ್ರಹಿಂಸೆ, ವೇದನೆ ಶುರುವಾಗುತ್ತದೆ.
ಎಷ್ಟೇ ಪ್ರಯತ್ನಪಟ್ಟರೂ ಅದರಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ. ಅದೊಂದು ಮನೋರೋಗದ ಲಕ್ಷಣ ಎಂದು ನನಗೆ ಗೊತ್ತು. ಹೆಂಡತಿಯನ್ನು ಇದೇ ಕಾರಣಕ್ಕೆ ಸ್ವತಂತ್ರವಾಗಿ ಇರುವುದಕ್ಕೆ ಬಿಡಲು ಆಗುತ್ತಿಲ್ಲ. ನಾನು ಪತ್ನಿಯನ್ನು ದ್ವೇಷಿಸುವುದಿಲ್ಲ. ಇದು ಅನುಮಾನದ ರೋಗ. ಆದರೆ, ಇದರಿಂದ ನನ್ನ ಜೀವನ ನರಕವಾಗಿದೆ. ಪತ್ನಿಯನ್ನು ಬಿಟ್ಟು ಬದುಕುವ ಶಕ್ತಿ ನನಗಿಲ್ಲ. ಅವಳನ್ನು ವಿನಾಕಾರಣ ಅನುಮಾನಿಸುತ್ತ ಚಿತ್ರಹಿಂಸೆ ಪಡುವುದರಿಂದ ಹೊರಗೆ ಬರಬೇಕಾಗಿದೆ. ದಯವಿಟ್ಟು ಇದಕ್ಕೆ ಪರಿಹಾರ ಸೂಚಿಸಿ.
ಉತ್ತರ:ನೀವು ಪತ್ನಿಯ ಮೇಲೆ ವಿನಾಕಾರಣ ಸಂಶಯ ಪಡುತ್ತಿರುವಿರಿ. ಮನೋವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಮುಂದುವರೆಸಿ.
ಬ್ರಾಹ್ಮಿ ವಟಿಯನ್ನು ದಿನಕ್ಕೆರಡು ಬಾರಿ ಎರಡು ಮಾತ್ರೆಯನ್ನು ಊಟದ ನಂತರ ಸೇವಿಸಿ. ಬ್ರಾಹ್ಮಿಘೃತವನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಒಂದು ಚಮಚೆಯಷ್ಟು ಬಿಸಿನೀರು ಇಲ್ಲವೇ ಬಿಸಿಹಾಲಿನಲ್ಲಿ ಬೆರೆಸಿ ಸೇವಿಸಿ. ಶಿರೋಧಾರ ಚಿಕಿತ್ಸೆಯನ್ನು ತೆಗೆದುಕೊಳ್ಳಿ. ಮೆದುಳಿನಲ್ಲಿ ಡೋಪಮಿನ್ ಸ್ರವಿಸುವಿಕೆಯಲ್ಲಿ ಆಗುವ ವ್ಯತ್ಯಾಸದಿಂದಾಗಿ ಈ ರೀತಿಯ ಸಂಶಯಪಡುವ ಪ್ರವೃತ್ತಿ ಹೆಚ್ಚುತ್ತದೆ.
ಮನಸ್ಸಿಗೆ ಸಮಾಧಾನ ಇಲ್ಲವಾಗುತ್ತದೆ. ದಾಂಪತ್ಯಜೀವನ ಪರಸ್ಪರರ ನಂಬುಗೆಯ ಮೇಲೆ ಸ್ಥಾಪಿತವಾಗಬೇಕಾದ್ದು. ದೈಹಿಕ, ಮಾನಸಿಕ ಸಾಮರಸ್ಯ ಬಲುಮುಖ್ಯ.
ಆಯುರ್ವೇದಕ್ಕೆ ಸಂಬಂಧಿಸಿದಂತೆ ಡಾ.ವಸುಂಧರಾ ಭೂಪತಿ ಅವರು ಬರೆದಿರುವ ಅಂಕಣಕ್ಕಾಗಿhttps://www.vijayavani.net/ಕ್ಲಿಕ್ಕಿಸಿಆರೋಗ್ಯವಿಭಾಗ ನೋಡಿ…
ಪುರುಷತ್ವ ಹೆಚ್ಚಿಸಲು ಆಯುರ್ವೇದ ಪರಿಹಾರವೇನು? ವೈದ್ಯರು ಕೊಟ್ಟ ಮಾಹಿತಿ ಇಲ್ಲಿದೆ…

7 ವರ್ಷ ಬಳಸಿಕೊಂಡು ಬೇರೆ ಮದ್ವೆಯಾಗಿದ್ದಾನೆ- ಸತ್ತುಹೋಗೋಣ ಎನಿಸುತ್ತಿದೆ, ಪ್ಲೀಸ್ ಏನಾದ್ರೂ ಪರಿಹಾರ ಹೇಳಿ…

ವೀರ್ಯ ಕೌಂಟ್​ ಕಡಿಮೆ ಇದ್ದು ಮಕ್ಕಳಾಗದಿದ್ದರೆ ದಿಢೀರ್​ ನಿರ್ಧಾರಕ್ಕೆ ಬರಬೇಡಿ…

ಮಧುಮೇಹದಿಂದ ಉಂಟಾಗುವ ಕಾಲುಗಳ ಉರಿಯೂತಕ್ಕೆ ಇಲ್ಲಿದೆ ಆಯುರ್ವೇದದ ಮದ್ದು…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:15 + eleven =
Remember me
