
ಪ್ರಶ್ನೆ: ವಯಸ್ಸು 56. ನನ್ನ ಪತ್ನಿಗೆ 48 ವರ್ಷ. ಮದುವೆಯಾಗಿ 28 ವರ್ಷಗಳಾಗಿವೆ. ಮೊದಲು ನನ್ನ ಹೆಂಡತಿ ನನ್ನೊಡನೆ ಟೂ ಪೀಸ್ ಡ್ರೆಸ್ ನಲ್ಲಿ ಮಲಗಿಕೊಂಡು ಸುಖ ಪಡುತ್ತಿದ್ದಳು. ಆದರೆ ಇತ್ತೀಚೆಗೆ ಅವಳು ನನ್ನೊಂದಿಗೆ ಮಲಗಲು ಬರುತ್ತಿಲ್ಲ. ಇದರಿಂದಾಗಿ ನಾನು ಲೈಂಗಿಕವಾಗಿ ಹತಾಶನಾಗಿದ್ದೇನೆ.ನಾನೇ ಸ್ತ್ರೀಯರು ತೊಡುವ ಟೂ ಪೀಸ್ ಡ್ರೆಸ್ ಹಾಕಿಕೊಂಡು ಸುಖಪಡುತ್ತಿದ್ದೇನೆ. ಕಳೆದ ಸಾಕಷ್ಟು ವರ್ಷಗಳಿಂದ ಹೀಗೆ ಮಾಡುತ್ತಿದ್ದೇನೆ. ಇದೀಗ ನನ್ನ ಹೆಂಡತಿಗೆ ಇದು ಗೊತ್ತಾಗಿ, `ನೀನು ಹಿಜಡಾ ಇದ್ದೀಯ. ಹೀಗೆ ಮಾಡಿದರೆ ನಿನ್ನನ್ನು ಬಿಟ್ಟು ಹೋಗುತ್ತೇನೆ’ ಎಂದು ಹೇಳುತ್ತಿದ್ದಾಳೆ. ಟೂ ಪೀಸ್ ಹಾಕಿಕೊಂಡ ಜಾಹೀರಾತುಗಳು ನನ್ನನ್ನು ಪ್ರೇರಣೆ ಮಾಡುತ್ತಿವೆ. ಹೇಳಿ, ನಾನು ಮಾಡುವುದು ತಪ್ಪಾ? ದಯವಿಟ್ಟು ಇದಕ್ಕೆ ಪರಿಹಾರ ಸೂಚಿಸಿ.
ಉತ್ತರ: ನಿಮ್ಮ ಮದುವೆಯಾಗಿ 28 ವರ್ಷವಾಗಿದೆ. ಇಷ್ಟು ವರ್ಷಗಳ ಕಾಲ ಪತ್ನಿ ನಿಮ್ಮ ಇಚ್ಛೆಯಂತೆ ನಡೆದುಕೊಂಡು ಸುಖ ನೀಡಿದ್ದಾಳಲ್ಲವೆ? ಈಗ ಅವರಿಗೆ 48 ವರ್ಷ, ಅಂದರೆ ಋತುಬಂಧದ ವಯಸ್ಸು. ಈ ಸಮಯ ಕೆಲವರಲ್ಲಿ ಲೈಂಗಿಕತೆಯ ಬಗ್ಗೆ ಆಸಕ್ತಿ ಕಡಿಮೆಯಾಗುತ್ತದೆ.
ಹಾಗಾಗಿ ಟೂ ಪೀಸ್ ಉಡುಪಿನ ಬಗ್ಗೆ ಅಸಹ್ಯ ಬಂದಿರಬಹುದು. ಆಕೆಗದು ಇಷ್ಟವಾಗದಿರಬಹುದು. ಆದರೆ ನಿಮಗೆ ಟೂ ಪೀಸ್ ಹಾಕಿಕೊಂಡರೆ ಲೈಂಗಿಕ ಪ್ರಚೋದನೆ ದೊರೆಯುತ್ತದೆ ಎನಿಸುತ್ತದೆ. ನೀವು ಮಾನಸಿಕವಾಗಿ ಟೂ ಪೀಸ್ ಬಗ್ಗೆ ಗೀಳು ಬೆಳೆಸಿಕೊಂಡಿದ್ದೀರಿ. ನೀವು ಒಮ್ಮೆ ಮನೋವೈದ್ಯರ ಬಳಿ ಸಲಹೆ, ಚಿಕಿತ್ಸೆ ಪಡೆಯಿರಿ.
ನೀವು ಮನೋವೈದ್ಯರ ಬಳಿ ಹೋಗುವಾಗ ಪತ್ನಿಯನ್ನೂ ಮರೆಯದೇ ಕರೆದೊಯ್ಯಿರಿ. ದಾಂಪತ್ಯ ಮನೋದೈನಿಕ ಮತ್ತು ಸಾಮಾಜಿಕ ಸಂಬಂಧವಾಗಿ 28 ವರ್ಷಗಳಲ್ಲಿ ದೃಢವಾಗಿರುತ್ತದೆ. ಇಬ್ಬರೂ ಪರಸ್ಪರ ನಕಾರಾತ್ಮಕ ಭಾವನೆಯಿಂದ ದೂರವಾಗಿ ಸಕಾರಾತ್ಮಕವಾಗಿ ಸ್ಪಂದಿಸಬೇಕಾಗುತ್ತದೆ.
ಕೇವಲ ಟೂ ಪೀಸ್ ಸಮಸ್ಯೆಯೊಂದರಿಂದಲೇ ನಿಮ್ಮನ್ನು ಬಿಟ್ಟು ದೂರಹೋಗುತ್ತೇನೆನ್ನುವುದು ಅವರದೂ ತಪ್ಪು. ಯಾರಿಗೂ ತೊಂದರೆಯುಂಟು ಮಾಡದ ಚಿಕ್ಕ ಸಮಸ್ಯೆ ನಿಮ್ಮದು. ನೀವು ಪ್ರಜ್ಞಾಪೂರ್ವಕವಾಗಿ ಅದರ ಬಗ್ಗೆ ಹೆಚ್ಚು ಗಮನ ಕೊಡದಿದ್ದರೆ ದಿನಕಳೆದಂತೆ ತಾನಾಗಿಯೇ ಕಡಿಮೆಯಾಗುತ್ತದೆ. ಮನಸ್ಸಿನ ರಿಮೋಟ್ ನಮ್ಮ ಬಳಿಯೇ ಇರುತ್ತದೆ. ಅದನ್ನು ಯಾವಾಗ, ಎಲ್ಲಿ ಬಳಸಬೇಕು ಎಂಬುದರ ಪರಿಜ್ಞಾನ ನಮಗಿರಬೇಕು.
ಡಾ.ವಸುಂಧರಾ ಭೂಪತಿಯವರ ಇನ್ನೂ ಹೆಚ್ಚಿನ ಸಲಹೆಗೆhttp://vijayavani.netಆರೋಗ್ಯ ಅಂಕಣ ನೋಡಿ
ಸ್ನೇಹಿತೆಯ ದೈಹಿಕ ಸಂಪರ್ಕ ಮಾಡಿದಾಗ ಕೆಲವು ಅನುಮಾನ ಶುರುವಾಗಿದೆ; ಹೇಗೆ ಬಗೆಹರಿಸಿಕೊಳ್ಳಲಿ?

ತುಟಿ ಸದಾ ಒಣಗಿ ಕಪ್ಪು ಕಲೆಯಾಗುತ್ತದೆ- ಮನೆಮದ್ದು ಏನಾದರೂ ಇದೆಯೆ?

ಗರ್ಭ ಧರಿಸಿದಾಗ ಮಗುಬೇಡವೆಂದು ಮಾತ್ರೆ ತೆಗೆದುಕೊಂಡೆ- ಬಿಳಿ ಸೆರಗು ಹೋಗುತ್ತಿದೆ: ಪರಿಹಾರವೇನು?

ಶೀಲಗೆಟ್ಟರೂ ಅಡ್ಡಿಲ್ಲ, ಮಗುಬೇಕೆಂದು ನಿಮ್ಮನ್ನು ಬಳಸಿಕೊಂಡಳಾಕೆ- ನೀವು ಚಿಂತಿಸಿ ಪ್ರಯೋಜನವಿಲ್ಲ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four + 10 =
Remember me
