ನವದೆಹಲಿ:ದೆಹಲಿಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಸನ್ನಿಹಿತವಾಗುತ್ತಿದೆ. ಪಂಜಾಬ್​ನಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಆಮ್​ ಆದ್ಮಿ ಪಕ್ಷ, ದೆಹಲಿಯಲ್ಲಿಯೂ ಗೆಲ್ಲಲು ಬಹಳ ಕಸರತ್ತು ನಡೆಸುತ್ತಿದೆ. ಇದೇ ಕಾರಣಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಅವರು ಬಹಳ ಹುಮ್ಮಸ್ಸಿನಿಂದ ಇದ್ದಾರೆ.
ಇದೀಗ ಅವರು ಬಿಜೆಪಿಗೆ ಒಂದು ಸವಾಲು ಹಾಕಿದ್ದಾರೆ. ಅದೇನೆಂದರೆ, ಒಂದು ವೇಳೆ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಆಮ್ ಆದ್ಮಿ ಪಾರ್ಟಿ ರಾಜಕೀಯದಿಂದ ದೂರ ಸರಿಯಲಿದೆ ಎಂದು ಸವಾಲು ಹಾಕಿದ್ದಾರೆ. ಈ ಚುನಾವಣೆಗಳನ್ನು ಸರಿಯಾಗಿ ನಡೆಸಿ, ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ನಮ್ಮ ಪಕ್ಷ ರಾಜಕೀಯದಿಂದ ಹೊರಹೋಗಲಿದೆ ಎಂದಿದ್ದಾರೆ.
ಚುನಾವಣೆಯನ್ನು ಬಿಜೆಪಿ ಮುಂದೂಡುತ್ತಿರುವುದಕ್ಕೆ ಭಾರಿ ಆಕ್ರೋಶ ವ್ಯಕ್ತಪಡಿಸಿದ ಅವರು, ಬಿಜೆಪಿಯವರು ಸೋಲಿನ ಭಯದಿಂದ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯನ್ನು ಮುಂದೂಡುತ್ತಿದ್ದಾರೆ. ನಾಳೆ ಅವರು ರಾಜ್ಯಗಳು ಮತ್ತು ದೇಶದ ಚುನಾವಣೆಗಳನ್ನು ಕೂಡ ಮುಂದೂಡುತ್ತಾರೆ ಎಂದು ಅವರು ಹೇಳಿದರು.
ಬಿಜೆಪಿ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ ಎಂದು ಹೇಳುತ್ತದೆ. ಆದರೆ ಸಣ್ಣ ಪಕ್ಷವಾದ ಆಪ್ ಮತ್ತು ಸಣ್ಣ ಚುನಾವಣೆಗೆ ಅದು ಹೆದರುತ್ತಿದೆ ಎಂದು ಕೇಜ್ರಿವಾಲ್ ಟೀಕಿಸಿದರು.
"मैं BJP को चुनौती देता हूँ!
MCD के चुनाव समय पर कराओ और जीतकर दिखाओ। अगर हम हार गये तो राजनीति छोड़ देंगे।"
– CM@ArvindKejriwalpic.twitter.com/okEMkGUjNh
— AAP (@AamAadmiParty)March 23, 2022

VIDEO: ದಿನದಲ್ಲಿ 30 ಗಂಟೆ ಕೆಲಸ ಮಾಡಿ: ಸಿಎಂ ಕೇಜ್ರಿವಾಲ್‌ ಕೊಟ್ಟ ಟಾಸ್ಕ್‌ಗೆ ಪಂಜಾಬ್‌ ಸಚಿವರು ಸುಸ್ತು!

ಅನಿಲ್​ ಕಪೂರ್​ನಂತೆ ಚರಂಡಿಗೆ ಧುಮುಕಿದ ಆಪ್​ ಮುಖಂಡನಿಗೆ ಹಾಲಿನ ಅಭಿಷೇಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 1 =
Remember me
