ಭುವನೇಶ್ವರ (ಒಡಿಶಾ):ಇತ್ತೀಚಿನ ದಿನಗಳಲ್ಲಿ ಹನಿಟ್ರ್ಯಾಪ್‌ ಬಲೆಗೆ ಬೀಳುತ್ತಿರುವ ದೊಡ್ಡ ದೊಡ್ಡ ಮುಖಂಡರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಸಿರಿವಂತ ಪುರುಷರನ್ನು ಪರಿಚಯ ಮಾಡಿಕೊಂಡು ನಂತರ ಅವರ ಜತೆ ಸಲುಗೆ ಬೆಳೆಸಿ ಅವರ ಜತೆ ಲೈಂಗಿಕ ಕ್ರಿಯೆ ನಡೆಸಿ ನಂತರ ಬ್ಲ್ಯಾಕ್‌ಮೇಲ್ ಮಾಡುವ ಯುವತಿಯರ ಪ್ರಮಾಣ ಹೆಚ್ಚಾಗುತ್ತಿದೆ.
ಇಂಥದ್ದೇ ಒಂದು ಘಟನೆ ಒಡಿಶಾದಲ್ಲಿ ನಡೆದಿದ್ದು, ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯಾಧಿಕಾರಿಯನ್ನೇ ಯುವತಿಯೊಬ್ಬಳು ಹನಿಟ್ರ್ಯಾಪ್‌ ಬಲೆಗೆ ಬೀಳಿಸಿದ್ದಾರೆ.
ಎರಡು ವರ್ಷದ ಹಿಂದೆ ಅಧಿಕಾರಿಯನ್ನು ಒಡಿಶಾದಲ್ಲಿ ವರ್ಗ ಮಾಡಲಾಗಿತ್ತು. ಇವರು ಬೇಸ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಮೇಲೆ ಕಣ್ಣುಹಾಕಿದ ಉತ್ತರ ಪ್ರದೇಶದ ಕಾನ್ಪುರದ ಯುವತಿ ಇನ್‌ಸ್ಟಾಗ್ರಾಮ್‌ ಮೂಲಕ ಪರಿಚಯ ಮಾಡಿಕೊಂಡಿದ್ದಾಳೆ. ಈಕೆ ಬಣ್ಣಬಣ್ಣದ ಮಾತುಗಳಿಂದ ಸೇನಾಧಿಕಾರಿಯನ್ನು ತನ್ನತ್ತ ಸೆಳೆದುಕೊಂಡಿದ್ದಾಳೆ.
ಇವರಿಬ್ಬರ ಸ್ನೇಹ, ಲೈಂಗಿಕ ಕ್ರಿಯೆ ನಡೆಸುವ ಮಟ್ಟಕ್ಕೂ ಬಂತು. ನಂತರ ಆಕೆ ಗುಟ್ಟಾಗಿ ಈ ಅಧಿಕಾರಿ ಜತೆ ಕೆಲ ರಾತ್ರಿ ಕಳೆದಿದ್ದಾಳೆ. ಈ ವೇಳೆ ಆಕೆ ಗುಟ್ಟಾಗಿ ಈ ಕ್ರಿಯೆಯ ವಿಡಿಯೋ ಮಾಡಿಕೊಂಡರೂ ಅದು ಸೇನಾಧಿಕಾರಿಗೆ ತಿಳಿಯಲೇ ಇಲ್ಲ.
ಕೊನೆಗೆ ಆ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌ ಮಾಡಲು ತೊಡಗಿದ್ದಾಳೆ ಯುವತಿ. ಮರ್ಯಾದೆಗೆ ಅಂಜಿ ಯುವತಿ ಹೇಳಿದ 10 ಲಕ್ಷ ರೂಪಾಯಿಗಳನ್ನು ಕೊಟ್ಟಿದ್ದಾರೆ ಅಧಿಕಾರಿ. ಅಷ್ಟೇ ಆಗಿದ್ದರೆ ಪರವಾಗಿರಲಿಲ್ಲ, ಅವರನ್ನು ಮದುವೆಯಾಗಿದ್ದೇನೆ ಎಂಬ ದಾಖಲೆಯನ್ನೂ ಸೃಷ್ಟಿಸಿರುವ ಯುವತಿ, ಅಧಿಕಾರಿ ಕಾಮದ ನಶೆಯಲ್ಲಿ ಇರುವಾಗ ಅದಕ್ಕೆ ಸಹಿಯನ್ನೂ ಹಾಕಿಸಿಕೊಂಡಿದ್ದಾಳೆ. 10 ಲಕ್ಷ ಕೊಟ್ಟ ನಂತರ ನಿನ್ನ ಆಸ್ತಿಯನ್ನು ಬರೆದುಕೊಡದಿದ್ದರೆ ವಿಡಿಯೋ ಲೀಕ್‌ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ.
ನಂತರ ಈ ವಿಷಯ ಅಧಿಕಾರಿ ಸಹೋದರ ಸಂಬಂಧಿಗೆ ತಿಳಿದು ಅವರು ಪೊಲೀಸರಲ್ಲಿ ದೂರುದಾಖಲು ಮಾಡಿದ್ದಾರೆ. ಯುವತಿ ಸದ್ಯ ಎಸ್ಕೇಪ್‌ ಆಗಿದ್ದು, ಪೊಲೀಸರು ಬಲೆ ಬೀಸಿದ್ದಾರೆ.
VIDEO: ನಟಿ ಪಾಯಲ್‌ ಘೋಷ್‌ ಮೇಲೆ ಆ್ಯಸಿಡ್‌ ದಾಳಿಗೆ ಯತ್ನ: ರಾಡ್‌ನಿಂದ ಹಲ್ಲೆ- ದುಃಖ ತೋಡಿಕೊಂಡ ತಾರೆ

ಪ್ರಯಾಗ್‌ರಾಜ್‌ ಸಂತನ ಸಾವಿಗೆ ಕಾರಣವಾಯ್ತಾ ಯುವತಿ ಜತೆಗಿನ ಫೋಟೋ? ಜಟಿಲವಾಗುತ್ತಲೇ ಸಾಗಿದೆ ಕೇಸ್‌…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
