ಮುಂಬೈ:ಟಿ.ವಿಯ ಟಿಆರ್​ಪಿಯನ್ನು ತಿರುಚಿರುವ ಆರೋಪಕ್ಕೆ ಸಂಬಂಧಿಸಿದಂತೆ ಇದಾಗಲೇ ಭಾರಿ ಸಂಕಷ್ಟದಲ್ಲಿ ಇರುವ ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಅವರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.
ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸ್ನೇಹಿತ ಹಾಗೂ ಚಿತ್ರ ನಿರ್ಮಾಪಕ ಸಂದೀಪ್ ಸಿಂಗ್ ಅರ್ನಬ್​ ವಿರುದ್ಧ ಸಮರ ಸಾರಿದ್ದಾರೆ. 200 ಕೋಟಿ ರೂಪಾಯಿ ಮಾನನಷ್ಟ ನೀಡುವಂತೆ ಲೀಗಲ್​ ನೋಟಿಸ್​ ಜಾರಿಗೊಳಿಸಿದ್ದಾರೆ.
ಸುಶಾಂತ್​ ಅವರ ಕೊಲೆಗಾರ ತಾವೇ ಎಂಬುದಾಗಿ ಬಿಂಬಿಸಿ ಟ್ವೀಟ್​ಗಳನ್ನು ಮಾಡಿ, ಸುದ್ದಿ ಮಾಡಿರುವ ಅರ್ನಬ್​, ತಮ್ಮಿಂದ ಹಣ ವಸೂಲಿಗೆ ಮುಂದಾಗಿದ್ದರು. ಈ ಮೂಲಕ ತಮಗೆ ಮಾನಸಿಕವಾಗಿ ಕಿರುಕುಳ ನೀಡಿದ್ದರು ಎಂದು ಸಂದೀಪ್​ ಸಿಂಗ್​ ದೂರಿದ್ದಾರೆ.
ಇದನ್ನೂ ಓದಿ:ಕೇರಳ ಚಿನ್ನದ ಸ್ಮಗ್ಲಿಂಗ್​ ಕೇಸ್​ಗೆ ದಾವೂದ್​ ನಂಟು!​ ಕೋರ್ಟ್​ಗೆ ಎನ್​ಐಎ ಮಾಹಿತಿ…
ತಮ್ಮ ವಿರುದ್ಧ ದುರದ್ದೇಶಪೂರಿತ ಟ್ವೀಟ್‍ಗಳನ್ನು ಪ್ರಸಾರ ಮಾಡಿ, ತಮ್ಮಿಂದ ಹಣ ವಸೂಲಿ ಮಾಡುವ ಹಾಗೂ ಟಿಆರ್​ಪಿ ಹೆಚ್ಚಿಸುವ ಉದ್ದೇಶದಿಂದ ತಮಗೆ ಕಳಂಕ ತರುವ ಯತ್ನವನ್ನು ರಿಪಬ್ಲಿಕ್ ಟಿವಿ ಮಾಡಿದೆ. ಅರ್ನಬ್ ಅವರ ಸಹೋದ್ಯೋಗಿಗಳು ತಮ್ಮಿಂದ ಹಣ ವಸೂಲಿ ಮಾಡಲು ಮುಂದಾಗಿದ್ದರು ಎಂದು ನೋಟಿಸ್​ನಲ್ಲಿ ತಿಳಿಸಲಾಗಿದೆ.
ಈ ಕುರಿತು ನೋಟಿಸ್​ ನೀಡಿರುವ ಅವರು, ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಇದನ್ನು ಶೇರ್ ಮಾಡಿಕೊಂಡಿದ್ದಾರೆ.
ರಿಪಬ್ಲಿಕ್ ಟಿವಿ ಉದ್ಯೋಗಿಗಳು ತಮ್ಮ ನಿವಾಸ ಪ್ರವೇಶಿಸಲು ಯತ್ನಿಸಿ ಭದ್ರತಾ ಸಿಬ್ಬಂದಿಗೆ ಹಾಗೂ ಮನೆಯ ಸಹಾಯಕರಿಗೆ ಆಗಸ್ಟ್ 22 ಹಾಗೂ 24ರ ನಡುವೆ ಕಿರುಕುಳ ನೀಡಿದ್ದರು ಎಂದು ಅವರು ಆರೋಪಿಸಿದ್ದಾರೆ.
ವಕೀಲ ರಾಜೇಶ್ ಕುಮಾರ್ ಮೂಲಕ ಸಲ್ಲಿಸಲಾದ ಈ ನೋಟಿಸ್‍ನಲ್ಲಿ ಅರ್ನಬ್ ಅವರು 15 ದಿನಗಳೊಳಗೆ ರೂ. 200 ಕೋಟಿ ಪರಿಹಾರ ಹಾಗೂ ಬೇಷರತ್ ಕ್ಷಮೆ ಯಾಚಿಸಬೇಕು. ಇಲ್ಲದೇ ಹೋದರೆ ಕ್ರಿಮಿನಲ್​ ಪ್ರಕರಣ ದಾಖಲಿಸಲಾಗುವುದು ಎಚ್ಚರಿಸಿದ್ದಾರೆ.
ರಾತ್ರಿಯಿಡೀ ಫ್ರೀಜರ್​ನಲ್ಲಿದ್ದ ‘ಮೃತ’ ವೃದ್ಧ ಬೆಳಗಾದಾಗ ಅಲುಗಾಡಿದ!

ಅಪ್ಪ-ಅಮ್ಮನ ಜತೆ ಜಗಳವಾಡಿ ಮನೆಬಿಟ್ಟ ಬಾಲಕಿಯ ಕೂಡಿಹಾಕಿ 22 ದಿನ ಗ್ಯಾಂಗ್​ರೇಪ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + nine =
Remember me
