ನವದೆಹಲಿ:ಕಾರ್ಯಕ್ರಮವೊಂದರಲ್ಲಿ ಪಾಕಿಸ್ತಾನದ ವಿರುದ್ಧ ಅವಹೇಳನಕಾರಿ ಮಾತನಾಡಿರುವ ಆರೋಪ ಹೊತ್ತ ರಿಪಬ್ಲಿಕ್​​ ಟಿ.ವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರಿಗೆ ಬ್ರಿಟನ್​ ಸರ್ಕಾರ 20 ಸಾವಿರ ಪೌಂಡ್​ (ಸುಮಾರು 10.73 ಲಕ್ಷ ರೂಪಾಯಿ) ದಂಡ ವಿಧಿಸಿದೆ.
ಪೂಚ್ತಾ ಹೈ ಭಾರತ್’ ಎನ್ನುವ ಕಾರ್ಯಕ್ರಮದಲ್ಲಿ ಅರ್ನಬ್​ ಸೇರಿದಂತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅತಿಥಿಗಳು ಪಾಕಿಸ್ತಾನದ ವಿರುದ್ಧ ಅಸಭ್ಯ ಪದ ಬಳಕೆ ಮಾಡಿದ್ದು, ದ್ವೇಷಪೂರಿತ ಹೇಳಿಕೆ ನೀಡಿದ್ದಾರೆ ಎಂದು ಬ್ರಿಟನ್‌ನ ಸಂವಹನ ನಿಯಂತ್ರಕ ಪ್ರಾಧಿಕಾರ ಹೇಳಿದೆ.
ಪಾಕಿಸ್ತಾನವನ್ನು. ‘ಪಾಕಿ’ ಎಂದು ಬಳಸಿರುವುದು ಜನಾಂಗೀಯ ನಿಂದನೆಯಾಗಿದೆ. ಇದನ್ನು ಬ್ರಿಟನ್‌ನ ವೀಕ್ಷಕರು ಒಪ್ಪುವುದಿಲ್ಲ. ಪಾಕಿಸ್ತಾನದ ಜನರ ರಾಷ್ಟ್ರೀಯತೆಯ ಕಾರಣಕ್ಕಾಗಿ ಅವರ ವಿರುದ್ಧ ಅಸಹಿಷ್ಣುತೆಯ ದ್ವೇಷ ವ್ಯಕ್ತಪಡಿಸಿ ಇಂತಹ ಹೇಳಿಕೆಗಳನ್ನು ನೀಡಲಾಗಿದೆ ಎಂದು ಹೇಳುವ ಮೂಲಕ ಭಾರಿ ದಂಡ ವಿಧಿಸಿದೆ.
ಇದರ ಜತೆಗೆ ತನ್ನ ಚಾನೆಲ್​ ಮೂಲಕ ಅವರು ಕ್ಷಮೆ ಕೋರಬೇಕು ಎಂದು ಆದೇಶಿಸಿದೆ. ‘ಭಾರತದ ಚಂದ್ರಯಾನ 2 ಬಾಹ್ಯಾಕಾಶ ಯೋಜನೆಯ ನೌಕೆಯ ಉಡಾವಣೆಗೆ ಸಂಬಂಧಿಸಿದಂತೆ ನಡೆದ ಕಾರ್ಯಕ್ರಮದಲ್ಲಿ, ಭಾರತದ ಬಾಹ್ಯಾಕಾಶ ಸಂಶೋಧನೆಗಳು ಮತ್ತು ತಂತ್ರಜ್ಞಾನ ಕ್ಷೇತ್ರದ ಸಾಧನೆಗಳ ಕುರಿತು ಹೇಳುವಾಗ ಪಾಕಿಸ್ತಾನವು ಭಾರತವನ್ನು ಗುರಿಯನ್ನಾಗಿಸಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ಆರೋಪಿಸಿದೆ. ಇದು ನಿಂದನಾರ್ಹ ಎಂದಿದೆ ಲಂಡನ್​ ಪ್ರಾಧಿಕಾರ.
ಈ ಮೂಲಕ ಪಾಕಿಸ್ತಾನದ ಜನರ ವಿರುದ್ಧ ದ್ವೇಷಪೂರಿತ, ಅವಹೇಳನಾಕಾರಿ ಪದಗಳನ್ನು ಬಳಸಲಾಗಿದೆ ಮತ್ತು ಪಾಕಿಸ್ತಾನದ ಜನರನ್ನು ಕೀಳಾಗಿ ನೋಡಿಕೊಳ್ಳಲಾಗಿದೆ ಎಂದು ಹೇಳಿದೆ.
‘ಪಾಕಿಸ್ತಾನದ ವಿಜ್ಞಾನಿಗಳು, ವೈದ್ಯರು, ಅವರ ನಾಯಕರು, ರಾಜಕಾರಣಿಗಳು ಎಲ್ಲರೂ ಭಯೋತ್ಪಾದಕರು. ಅವರ ಕ್ರೀಡಾಪಟುಗಳು ಕೂಡ. ಅಲ್ಲಿನ ಪ್ರತಿ ಮಗುವೂ ಭಯೋತ್ಪಾದಕನಾಗಿದೆ. ನೀವು ಭಯೋತ್ಪಾದನಾ ಜಾಗದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದೀರಿ’ ಎಂದು ಚರ್ಚೆಯಲ್ಲಿ ಕೆಲವರು ಹೇಳಿದ್ದು, ಇದು ಶಿಕ್ಷಾರ್ಹ ಅಪರಾಧ ಎಂದಿದೆ.
ಶುದ್ಧಗಾಳಿ ಈಗ ಬಾಟಲಿಯಲ್ಲಿ ಲಭ್ಯ, ಆನ್​ಲೈನ್​ ಸೇವೆಯೂ ಇದೆ! ರೇಟ್​ ಎಷ್ಟು ಗೊತ್ತಾ?

ವಿಶೇಷ ಸ್ಥಾನ ರದ್ದತಿ ಪರಿಣಾಮ? ಡಿಡಿಸಿ ಚುನಾವಣೆ- ಬಿಜೆಪಿ ಜಯಭೇರಿ; ಮೈತ್ರಿಕೂಟ ಫಸ್ಟ್​

ಹುಡುಗನೊಬ್ಬ ಕಾಡ್ತಿದ್ದಾನೆ- ರಾತ್ರಿ ಬೇಕು ಅಂತಾನೆ, ಬೆಳಗ್ಗೆ ಬೇಡ ಅಂತಾನೆ; ಏನು ಮಾಡೋದು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 4 =
Remember me
