ಟೊರಾಂಟೊ:ಗಲಭೆಕೋರರೆಂದು ತಿಳಿದು ಸಾರ್ವಜನಿಕರನ್ನೂ ಬಂಧಿಸಿದ್ದ ಹಿನ್ನೆಲೆಯಲ್ಲಿ, ಅವರಿಗೆ ಪರಿಹಾರದ ರೂಪವಾಗಿ 94 ಕೋಟಿ ರೂಪಾಯಿಗಳನ್ನು ನೀಡಿರುವ ಘಟನೆ ನಡೆದಿದೆ.
ಅಷ್ಟಕ್ಕೂ ಇಂಥದ್ದೊಂದು ಘಟನೆ ನಡೆದಿರುವುದು ಕೆನಡಾದ ಟೊರಾಂಟೊದಲ್ಲಿ.
2010ರಲ್ಲಿ ನಡೆದಿದಿದ್ದ  ಜಿ-20 ಶೃಂಗ ಸಭೆ ವೇಳೆ ಪ್ರತಿಭಟನೆಕಾರರನ್ನು ಬಂಧಿಸುವಾಗ ನಿರಪರಾಧಿಗಳನ್ನೂ ಪೊಲೀಸರು ತಪ್ಪಾಗಿ ವಶಕ್ಕೆ ಪಡೆದಿದ್ದರು. ಇದೀಗ ಅವರು ನಿರಪರಾಧಿಗಳು ಎಂದು ತಿಳಿದುಬಂದ ಹಿನ್ನೆಲೆಯಲ್ಲಿ ಇಷ್ಟೊಂದು ಬೃಹತ್‌ ಪ್ರಮಾಣದ ಪರಿಹಾರವನ್ನು ನೀಡಲಾಗಿದೆ.
ಅಂದು ಜಿ-20 ಶೃಂಗ ಸಭೆ ನಡೆಯುತ್ತಿದ್ದ ವೇಳೆ, ಇದಕ್ಕೆ ಹಲವಾರು ಮಂದಿ ಪ್ರತಿರೋಧ ವ್ಯಕ್ತಪಡಿಸಿದ್ದರು. ಈ ವೇಳೆ ಗುಂಪಿನಲ್ಲಿ ಕೆಲವು ಕಿಡಿಗೇಡಿಗಳು ಶಾಮೀಲಾಗಿ ಹಿಂಸಾಚಾರ ಮತ್ತು ಗಲಭೆಗೆ ಪ್ರಚೋದನೆ ನೀಡಿದ್ದರು. ಇದು ಸ್ಥಳದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಹಲವಾರು ವಾಹನಗಳು ಬೆಂಕಿಗಾಹುತಿಯಾಗಿದ್ದವು.
ಪ್ರತಿಭಟನೆಯ ಮಧ್ಯೆ ಪ್ರವೇಶಿಸಿದ್ದ ಪೊಲೀಸರು ಉದ್ರಿಕ್ತಗೊಂಡ ಪ್ರತಿಭಟನಾಕಾರರನ್ನ ಹತೋಟಿಗೆ ತರಲು ನೂರಾರು ಪ್ರತಿಭಟನಾಕಾರರನ್ನು ಬಂಧಿಸಿದ್ದರು. ಈ ವೇಳೆ ಅಲ್ಲೇ ನೆರೆದಿದ್ದ ಸುಮಾರು 1,100 ಸಾರ್ವಜನಿಕರನ್ನು ಸಹ ಗಲಭೆಕೋರರು ಎಂದು ಭಾವಿಸಿ ಪೊಲೀಸರು ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ:ಕರುಣೆ ಬೇಡ, ಶಿಕ್ಷೆ ಎದುರಿಸಲು ಸಿದ್ಧ: ‘ಅಪರಾಧಿ’ ವಕೀಲ ಪ್ರಶಾಂತ್‌ ಭೂಷಣ್‌ ಹೇಳಿಕೆ
ಇದನ್ನು ಖಂಡಿಸಿ ಕೋರ್ಟ್​ ಮೆಟ್ಟೆಲೇರಿದ್ದ ಕೆಲವು ಬಂಧಿತರು ಪೊಲೀಸರಿಂದ ಪರಿಹಾರಕ್ಕಾಗಿ ಆಗ್ರಹಿಸಿದ್ದರು.
ಘಟನೆ ಕುರಿತ ನಡೆಸಲಾದ ತನಿಖೆಯು ಸಹ ಅವರು ನಿರಪರಾಧಿಗಳೆಂದ ವರದಿ ನೀಡಿತ್ತು. ಇದರ ಬೆನ್ನಲ್ಲೇ ಇದೀಗ ಟೊರಾಂಟೊ ಪೊಲೀಸರು ಅವರನ್ನೆಲ್ಲಾ ಬಂಧಿಸಿದ್ದಕ್ಕೆ ಪರಿಹಾರ ನೀಡಲು ಮುಂದಾಗಿದೆ. ನಿರಪರಾಧಿ ಸಾರ್ವಜನಿಕರಿಗೆ 93.9 ಕೋಟಿ ರೂಪಾಯಿಗಳ ಪರಿಹಾರ ನೀಡುವಂತೆ ಕೋರ್ಟ್‌ ಆದೇಶಿಸಿದೆ. ಇದನ್ನು ಲೆಕ್ಕ ಹಾಕಿದರೆ ಪ್ರತಿಯೊಬ್ಬರಿಗೆ 2.84 ಲಕ್ಷದಿಂದ ಹಿಡಿದು 15 ಲಕ್ಷ ರೂಪಾಯಿವರೆಗೂ ಸಿಗಲಿದೆ.
ಮದುವೆ ಉಡುಗೊರೆಯಿಂದ ಸಿಕ್ಕಿಬಿದ್ಲು ಜರ್ಮನ್‌ ಭಯೋತ್ಪಾದಕಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seven + eighteen =
Remember me
