ಲಖನೌ:ಪ್ರಸಿದ್ಧ ಗಾಯಕಿ, ನೃತ್ಯಗಾತಿ ಹಾಗೂ ಬಿಗ್​ಬಾಸ್​ ಹಿಂದಿಯ 11ನೇ ಸೀಸನ್​ನ ಸ್ಪರ್ಧಿ ಸಪ್ನಾ ಚೌಧರಿ ವಿರುದ್ಧ ಬಂಧನ ವಾರೆಂಟ್​ ಜಾರಿಯಾಗಿದೆ. ಅವರನ್ನು ಬಂಧಿಸಲು ಲಖನೌ ಪೊಲೀಸರು ಹರಿಯಾಣಕ್ಕೆ ತೆರಳಿದ್ದಾರೆ.
ಇವರ ವಿರುದ್ಧ ಇರುವ ಆರೋಪಕ್ಕೆ ಸಂಬಂಧಿಸಿದಂತೆ ಕೋರ್ಟ್​ ಆದೇಶದ ಹೊರತಾಗಿಯೂ ಹಾಜರು ಆಗದ ಹಿನ್ನೆಲೆಯಲ್ಲಿ ವಾರೆಂಟ್​ ಜಾರಿ ಮಾಡಲಾಗಿದೆ.
ಆಗಿದ್ದೇನೆಂದರೆ, ಸಪ್ನಾ ಚೌಧರಿ ಅವರು 2018 ರಲ್ಲಿ ಕಾರ್ಯಕ್ರಮವೊಂದರಲ್ಲಿ ಪ್ರದರ್ಶನ ನೀಡುವುದಾಗಿ ಹೇಳಿದ್ದರು. ಇದಕ್ಕಾಗಿ ಸಂಘಟಕರು ಮುಂಗಡವಾಗಿ ಪಾವತಿಸಿದ್ದರು. ಆದರೆ ಸಪ್ನಾ ಹೇಳದೇ ಕೇಳದೇ ಕಾರ್ಯಕ್ರಮ ರದ್ದು ಮಾಡಿದ್ದರು. ಆದರೆ ತಮಗೆ ನೀಡಿದ್ದ ಮುಂಗಡ ಹಣವನ್ನು ಅವರು ವಾಪಸ್​ ನೀಡಿರಲಿಲ್ಲ.
ಈ ಹಿನ್ನೆಲೆಯಲ್ಲಿ ಸಂಘಟಕರು ಸಪ್ನಾ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಖುದ್ದು ಹಾಜರಿಗೆ ಲಖನೌ ಕೋರ್ಟ್​ ಹಲವು ಬಾರಿ ನಿರ್ದೇಶಿಸಿತ್ತು. ಇದರ ಹೊರತಾಗಿಯೂ ಸಪ್ನಾ ಹಾಜರು ಆಗಿರಲಿಲ್ಲ. ಅಷ್ಟೇ ಅಲ್ಲದೇ ತಮ್ಮ ಪರವಾಗಿ ಯಾವುದೇ ಮನವಿಯನ್ನೂ ಅವರು ಕೋರ್ಟ್​ಗೆ ಸಲ್ಲಿಸಲಿಲ್ಲ. ಈ ಹಿನ್ನೆಲೆಯಲ್ಲಿ ಈಗ ಬಂಧನ ವಾರೆಂಟ್​ ಹೊರಡಿಸಿದೆ.
ಇದೊಂದು ಪ್ರಕರಣ ಅಲ್ಲದೇ ಸಪ್ನಾ ವಿರುದ್ಧ ಇನ್ನೂ ಕೆಲವು ಕೇಸ್​ಗಳು ಇವೆ. 2021ರ ಫೆಬ್ರವರಿಯಲ್ಲಿ ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗವು ಸಪ್ನಾ ಚೌಧರಿ ವಿರುದ್ಧ ವಂಚನೆ ಮತ್ತು ನಂಬಿಕೆಯ ಉಲ್ಲಂಘನೆಯ ಆರೋಪದ ಮೇಲೆ ಪ್ರಕರಣವನ್ನು ದಾಖಲಿಸಿತ್ತು. ಸಪ್ನಾರನ್ನು ನಿರ್ವಹಿಸುವ ಸೆಲೆಬ್ರಿಟಿ ಮ್ಯಾನೇಜ್‌ಮೆಂಟ್ ಕಂಪೆನಿ ಕೂಡ ಸಪ್ನಾ ಸೇರಿದಂತೆ ಅವರ ತಾಯಿ, ಸಹೋದರರ ವಿರುದ್ಧ ವಂಚನೆ ಕೇಸ್​ ದಾಖಲು ಮಾಡಿದೆ.(ಏಜೆನ್ಸೀಸ್​)
ನನ್ನ ಚಿತ್ರಕ್ಕೆ ನೀವೇ ಹೀರೋಯಿನ್​: ಖ್ಯಾತ ನಟಿಗೆ ‘777 ಚಾರ್ಲಿ’ ನಿರ್ದೇಶಕನ ಹೆಸರಲ್ಲಿ ಕಾಲ್​! ಮುಂದಾಗಿದ್ದೇ ಬೇರೆ…

ಚಿರು ಸರ್ಜಾ ಸಾವಿನ ನಂತರ 2ನೇ ಮದುವೆ ಆಗ್ತಿದ್ದಾರಾ ನಟಿ ಮೇಘನಾ ರಾಜ್? ಸಂದರ್ಶನದಲ್ಲಿ ಅವರು ಹೇಳಿದ್ದೇನು ಕೇಳಿ…​

ಪುನಃ ವಿದೇಶಕ್ಕೆ ಹಾರಲಿದೆ ಸೋನಿಯಾ ಕುಟುಂಬ! ಚುನಾವಣೆ ನಿರ್ಧಾರದ ಬೆನ್ನಲ್ಲೇ ಕುತೂಹಲ ಮೂಡಿಸಿದ ನಡೆ

ಮೇಕೆ ತಂದಿಟ್ಟ ಸಂಕಷ್ಟ: ರಾತ್ರಿ ಸುಂದರ ಕನಸು ಕಂಡ, ಬೆಳಗ್ಗೆ ಮರ್ಮಾಂಗವೇ ಕಟ್​- ಆಗಿದ್ದೇನು ನೋಡಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + seven =
Remember me
