ನವದೆಹಲಿ:ಬಿಜೆಪಿ ತಮ್ಮ ಪಕ್ಷದ ಶಾಸಕರನ್ನು ತನ್ನತ್ತ ಸೆಳೆಯಲು ಯತ್ನಿಸುತ್ತಿದೆ ಎಂದು ಆರೋಪಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಇಂದು ಸದನದಲ್ಲಿ ಬಹುಮತ ಸಾಬೀತುಪಡಿಸಬೇಕಿದೆ. ಈಗಾಗಲೇ ಸದನದ ಕಲಾಪ ಶುರುವಾಗಿದ್ದು ಆರೋಪ, ಪ್ರತ್ಯಾರೋಪಗಳು  ನಡೆಯುತ್ತಿವೆ.
ಆಮ್​ ಆದ್ಮಿ ಪಕ್ಷದ ಕೆಲ ಶಾಸಕರು ಕಳೆದ ಗುರುವಾರ ಕೇಜ್ರಿವಾಲ್​ ಸಂಪರ್ಕಕ್ಕೂ ಸಿಗದೇ ಇರುವುದು ಎಎಪಿ ಪಕ್ಷದ ತಳಮಳಕ್ಕೆ ಕಾರಣವಾಗಿತ್ತು. ಪಕ್ಷದ ಹಿರಿಯ ನಾಯಕರು ಬಿಜೆಪಿ ಕಡೆ ಬೊಟ್ಟು ಮಾಡಿದ್ದು, ತಮ್ಮ ಶಾಸಕರನ್ನು ಬಿಜೆಪಿ ಸೆಳೆಯುತ್ತಿದೆ ಎಂಬ ಗಂಭೀರ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಸೇರಲು 20 ಕೋಟಿ ಆಫರ್​ ಮತ್ತು ಒಂದು ವೇಳೆ ಸೇರದಿದ್ದರೆ ಇಡಿ ತನಿಖೆ ಬೆದರಿಕೆ ಹಾಕುತ್ತಿದ್ದಾರೆ ಎಂದೂ ಆಪ್​ನ ಶಾಸಕರು ಆರೋಪಿಸುತ್ತಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಆಪ್​ನ ರಾಷ್ಟ್ರೀಯ ವಕ್ತಾರ ಹಾಗೂ ರಾಜ್ಯಸಭೆ ಸಂಸದ ಸಂಜಯ್ ಸಿಂಗ್ ಅವರು, ಶಾಸಕರಾದ ಅಜಯ್ ದತ್, ಸಂಜೀವ್ ಜಾ, ಸೋಮನಾಥ ಭಾರತಿ ಮತ್ತು ಕುಲದೀಪ್ ಕುಮಾರ್ ಅವರನ್ನು ಸಂರ್ಪಸಿರುವ ಬಿಜೆಪಿ ನಾಯಕರು ಕಮಲ ಪಕ್ಷಕ್ಕೆ ಸೇರ್ಪಡೆಗೊಂಡರೆ 20 ಕೋಟಿ ರೂ., ಇತರ ಶಾಸಕರನ್ನು ಕರೆತಂದರೆ 25 ಕೋಟಿ ರೂ. ನೀಡುವುದಾಗಿ ಆಮಿಷ ಒಡ್ಡಿದ್ದಾರೆ. ಪಕ್ಷಾಂತರ ಮಾಡದಿದ್ದರೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ರೀತಿಯಲ್ಲಿ ಸಿಬಿಐ ತನಿಖೆ ಎದುರಿಸಬೇಕಾಗುತ್ತದೆ ಎಂಬ ಬೆದರಿಕೆ ಹಾಕಲಾಗಿದೆ ಎಂದಿದ್ದರು.
ಇದರ ಬೆನ್ನಲ್ಲೇ ಇದೀಗ ಸಿಎಂ ಕೇಜ್ರಿವಾಲ್​ ಸದನದಲ್ಲಿ ಬಹುಮತ ಸಾಬೀತುಪಡಿಸಬೇಕಿದೆ. ಏಕೆಂದರೆ, ಬಿಜೆಪಿ ವಿರುದ್ಧ ಗರಂ ಆಗಿದ್ದ ಕೇಜ್ರಿವಾಲ್, ಬಿಜೆಪಿಯ ‘ಆಪರೇಷನ್ ಕಮಲ ದೆಹಲಿ’ ‘ಆಪರೇಷನ್ ಕಿಚಡ್’ ಆಗಿ ಮಾರ್ಪಟ್ಟಿದೆ ಎಂಬುದನ್ನು ದೆಹಲಿ ಜನತೆಯ ಮುಂದೆ ಸಾಬೀತುಪಡಿಸಲು ನಾನು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯನ್ನು ತರಲು ಬಯಸುತ್ತೇನೆ ಎಂದು ವಿಧಾನಸಭೆಯ ಕಲಾಪದಲ್ಲಿ ಹೇಳಿದ್ದರು. ಅದನ್ನೀಗ ಸಾಬೀತು ಮಾಡುತ್ತಿದ್ದಾರೆ.
ಆಪ್ ಆರೋಪಗಳಿಗೆ ಪ್ರತಿಕ್ರಿಯಿಸಿದ್ದ ಬಿಜೆಪಿ ವಕ್ತಾರ ಶೆಹಬಾದ್ ಪೂನವಾಲಾ, ಕೇಜ್ರಿವಾಲ್ ಪಕ್ಷವು ಟ್ರೇಲರ್​ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಆದರೆ ಚಲನಚಿತ್ರ ಎಂದಿಗೂ ಪರದೆ ಮೇಲೆ ಮೂಡುವುದಿಲ್ಲ ಎಂದಿದ್ದರು.
70 ಸದಸ್ಯರ ದೆಹಲಿ ವಿಧಾನಸಭೆಯಲ್ಲಿ ಆಪ್​ನ 62 ಶಾಸಕರಿದ್ದು, ಬಿಜೆಪಿಯ 8 ಶಾಸಕರು ಇದ್ದಾರೆ. ಆದ್ದರಿಂದ ಎಲ್ಲರ ಚಿತ್ತ ದೆಹಲಿಯತ್ತ ನೆಟ್ಟಿದೆ(ಏಜೆನ್ಸೀಸ್​)
ಶಾಲಾ ಕಾಲೇಜುಗಳಲ್ಲಿ ಹಿಜಾಬ್​ ಬ್ಯಾನ್​- ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ನೋಟಿಸ್​, ಕೋರ್ಟ್​ ಹೇಳಿದ್ದೇನು?

ಪತ್ನಿಯನ್ನು ಕಾಪಾಡಲು ಹೋದ ಬಳ್ಳಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಇನ್ನಿಲ್ಲ: ಸಾವಲ್ಲೂ ಒಂದಾದ ದಂಪತಿ!

VIDEO: ಪಾಕ್​ನಲ್ಲಿ ಮಳೆಯ ರುದ್ರ ನರ್ತನ: ಸಾವಿನ ಸಂಖ್ಯೆ 1033ಕ್ಕೆ ಏರಿಕೆ- ಪ್ರವಾಹದ ಭೀಕರ ವಿಡಿಯೋಗಳು ಇಲ್ಲಿವೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 15 =
Remember me
