ಕೋಲ್ಕತ:ಲವ್ ಸೆಕ್ಸ್ ಧೋಕಾ, ‘ಡರ್ಟಿ ಪಿಕ್ಚರ್’ ಸೇರಿದಂತೆ ಅನೇಕ ಬಾಲಿವುಡ್​ ಚಿತ್ರಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದ ಪ್ರಸಿದ್ಧ ಬೆಂಗಾಲಿ ನಟಿ ಆರ್ಯ ಬ್ಯಾನರ್ಜಿ ಕೊಲ್ಕತ್ತಾದ ತಮ್ಮ ಮನೆಯಲ್ಲಿ ನಿನ್ನೆ ಶವವಾಗಿ ಪತ್ತೆಯಾಗಿದ್ದರು. ನಿಗೂಢವಾಗಿ ಅಸಹಜ ಎನ್ನುವ ಸ್ಥಿತಿಯಲ್ಲಿ ಇವರ ಶವ ಪತ್ತೆಯಾಗಿರುವುದಾಗಿ ವರದಿಯಾಗಿತ್ತು.
ಅಪಾರ್ಟ್​ಮೆಂಟ್​ನಲ್ಲಿರುವ ತಮ್ಮ ಫ್ಲ್ಯಾಟ್​ನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ 35 ವರ್ಷದ ಈ ನಟಿ, ಮೂರನೇ ಮಹಡಿಯಲ್ಲಿರುವ ಬೆಡ್​ರೂಮಿನಲ್ಲಿ ಮೃತಪಟ್ಟಿದ್ದರು. ಮನೆಯ ಬಾಗಿಲನ್ನು ಆರ್ಯಾ ಶುಕ್ರವಾರ ಬೆಳಗ್ಗೆ ತೆರೆಯದೇ ಇದ್ದುದನ್ನು ಕಂಡ ಮನೆಗೆಲಸದ ಮಹಿಳೆ ನೆರೆಮನೆಯವರ ಬಳಿ ಹೇಳಿದಾಗ, ಸಂದೇಹಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇವರ ಸಾವಿನ ಬಗ್ಗೆ ಅನೇಕ ಊಹಾಪೋಹಗಳು ಎದ್ದಿದ್ದವು.
ಸಾಕುನಾಯಿಯೊಂದಿಗೆ ಫ್ಲ್ಯಾಟ್​ನಲ್ಲಿ ವಾಸಿಸುತ್ತಿದ್ದ ಆರ್ಯ ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ. ಆಕೆಯ ಮನೆಯವರೂ ಅಲ್ಲಿಗೆ ಭೇಟಿ ನೀಡುತ್ತಿರಲಿಲ್ಲ. ಆನ್​ಲೈನ್​ನಲ್ಲೇ ಊಟ-ತಿಂಡಿ ಆರ್ಡರ್ ಮಾಡಿಕೊಂಡು ತಿನ್ನುತ್ತಿದ್ದರು. ಆದ್ದರಿಂದ ಸಾವು ಇನ್ನಷ್ಟು ನಿಗೂಢ ಎನ್ನಲಾಗಿದೆ.

ಶವವಾಗಿ ಆರ್ಯ ಪತ್ತೆಯಾಗಿದ್ದ ಸಂದರ್ಭದಲ್ಲಿ ಮೂಗಿನಲ್ಲಿ ರಕ್ತಸ್ರಾವ ಕಂಡುಬಂದಿತ್ತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿತ್ತು. ಇದೀಗ ಆರ್ಯ ಅವರ ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು, ಅದರಲ್ಲಿ ಇದು ಕೊಲೆ ಅಥವಾ ಆತ್ಮಹತ್ಯೆಯಲ್ಲ ಎಂದು ವರದಿ ಬಹಿರಂಗಪಡಿಸಿದೆ.
ಇದು ಆತ್ಮಹತ್ಯೆ ಅಥವಾ ಕೊಲೆಯಲ್ಲ. ಇವರು ಯಕೃತ್ತಿನ ಸಿರೋಸಿಸ್​ನಿಂದ ಬಳಲುತ್ತಿದ್ದರು. ಅವರ ಹೊಟ್ಟೆಯಲ್ಲಿ ಆಲ್ಕೋಹಾಲ್​ ಕಂಡುಬಂದಿದೆ. ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ವಿಪರೀತವಾಗಿ ಆಲ್ಕೋಹಾಲ್​ ಸೇವನೆ ಮಾಡಿದ್ದರಿಂದ ಸಾವು ಸಂಭವಿಸಿದೆ ಎಂದು ಕೋಲ್ಕತಾ ಪೊಲೀಸ್ ಜಂಟಿ ಆಯುಕ್ತ (ಅಪರಾಧ) ಮುರಳೀಧರ್ ಶರ್ಮಾ ತಿಳಿಸಿದ್ದಾರೆ.
ಇದಕ್ಕೆ ಪೂರಕ ಎಂಬಂತೆ ಅವರ ರೂಮಿನಲ್ಲಿ ಮದ್ಯದ ಖಾಲಿಯಾಗಿದ್ದ ಬಾಟಲಿಗಳು ಪತ್ತೆಯಾಗಿವೆ. ಇವರು ಖಿನ್ನತೆಯಿಂದ ಕೂಡ ಬಳಲುತ್ತಿದ್ದರು ಎನ್ನಲಾಗಿದೆ.

ಪ್ರಸಿದ್ಧ ಸಿತಾರ್ ವಾದಕ ದಿವಂಗತ ಪಂಡಿತ್ ನಿಖಿಲ್ ಬಂಡೋಪಾಧ್ಯಾಯರ ಪುತ್ರಿ ಆರ್ಯಾ ಬ್ಯಾನರ್ಜಿ. ಇವರ ನಿಜವಾದ ಹೆಸರು ದೇವದತ್ತ ಬ್ಯಾನರ್ಜಿ. ಅವರು ಮುಂಬೈನಲ್ಲಿ ಕೆಲ ಕಾಲ ಮಾಡೆಲಿಂಗ್ ಮಾಡಿದ್ದರು. 2010ರಲ್ಲಿ ಅವರುಯ ಎಲ್​​ಎಸ್​ಡಿ- ಲವ್ ಸೆಕ್ಸ್ ಧೋಖಾ, 2011ರಲ್ಲಿ ದ ಡರ್ಟಿ ಪಿಕ್ಚರ್ ನಲ್ಲಿ ಅಭಿನಯಿಸಿ ಗಮನಸೆಳೆದಿದ್ದರು. ಇದಲ್ಲದೆ ಹಲವು ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ.
ಕೋಲ್ಕತಾ ಪೊಲೀಸರ ನರಹತ್ಯೆ ವಿಭಾಗ ಮತ್ತು ವಿಧಿವಿಜ್ಞಾನ ವಿಭಾಗದ ಅಧಿಕಾರಿಗಳು ಬ್ಯಾನರ್ಜಿಯ ಮನೆಗೆ ಭೇಟಿ ನೀಡಿ ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
7 ವರ್ಷ ಬಳಸಿಕೊಂಡು ಬೇರೆ ಮದ್ವೆಯಾಗಿದ್ದಾನೆ- ಸತ್ತುಹೋಗೋಣ ಎನಿಸುತ್ತಿದೆ, ಪ್ಲೀಸ್ ಏನಾದ್ರೂ ಪರಿಹಾರ ಹೇಳಿ…

ಪುರುಷತ್ವ ಹೆಚ್ಚಿಸಲು ಆಯುರ್ವೇದ ಪರಿಹಾರವೇನು? ವೈದ್ಯರು ಕೊಟ್ಟ ಮಾಹಿತಿ ಇಲ್ಲಿದೆ…

ಸರ್ಕಾರಿ ನೌಕರರಾಗಬೇಕೆಂದು ಮುಷ್ಕರಕ್ಕೆ ಹೋದವರಿಗೆ ಬಿಎಂಟಿಸಿಯಿಂದ ಬಿಗ್​ ಶಾಕ್​!

ಪತ್ನಿಯದ್ದೇ ತಪ್ಪಿದ್ದರೂ ಡಿವೋರ್ಸ್​ ಕೊಟ್ಟರೆ ಲಕ್ಷಾಂತರ ರೂಪಾಯಿ ಜೀವನಾಂಶ ಕೊಡಬೇಕೇ?

ಈ ಕುರಿ ಮಾರಾಟವಾದ ಬೆಲೆ ಕೇಳಿದ್ರೆ ಹೌಹಾರ್ತೀರಾ! ಮೋದಿ ಅಭಿಮಾನಿಯಾದ ಮಾಲೀಕ ಅವರದ್ದೇ ಹೆಸರಿಟ್ಟ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
