ಮುಂಬೈ:ಡ್ರಗ್ಸ್‌ ಕೇಸ್‌ನಲ್ಲಿ ಸಿಲುಕಿರುವ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ಗೆ ಜಾಮೀನು ನಿನ್ನೆ ಮಂಜೂರಾಗಿದ್ದರೂ ಇದುವರೆಗೆ ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ. ಜಾಮೀನಿನ ಸಂಪೂರ್ಣ ಪ್ರಕ್ರಿಯೆಗಳು ಮುಗಿಯದ ಹಿನ್ನೆಲೆಯಲ್ಲಿ ಇಂದು ರಾತ್ರಿ ಜೈಲಿನಲ್ಲಿಯೇ ಕಳೆಯಬೇಕಿದೆ.
ನಿನ್ನೆ ಆರ್ಯನ್‌ಗೆ ಬಾಂಬೆ ಹೈಕೋರ್ಟ್ 14 ಷರತ್ತುಗಳನ್ನು ವಿಧಿಸಿ ಜಾಮೀನು. ಇದರಲ್ಲಿ ಒಂದು ಒಂದು ಲಕ್ಷ ರೂಪಾಯಿಗಳ ಶ್ಯೂರಿಟಿ (ಭದ್ರತೆ) ಹಾಕಬೇಕು ಎನ್ನುವುದು. ಅದಕ್ಕಾಗಿ ಯಾರಾದರೂ ಪರಿಚಿತರು ಭದ್ರತೆ ನೀಡಬೇಕಿರುವುದು ಕಾನೂನು.
ಈ ಹಿನ್ನೆಲೆಯಲ್ಲಿ ನಟಿ ಜೂಹಿ ಚಾವ್ಲಾ ಒಂದು ಲಕ್ಷ ರೂಪಾಯಿ ಬಾಂಡ್‌ನ್ನು ಹಿಡಿದು ಜೈಲಿಗೆ ಆಗಮಿಸಿ, ಬಾಂಡ್‌ಗೆ ಸಹಿ ಹಾಕಿದ್ದಾರೆ. ಈ ಕುರಿತು ಆರ್ಯನ್ ಖಾನ್ ಅವರ ವಕೀಲ ಸತೀಶ್ ಮನೇಶಿಂಡೆ ಮಾಹಿತಿ ನೀಡಿದ್ದಾರೆ.
‘ಬಾಂಬೆ ಹೈಕೋರ್ಟ್‌ನ ಆದೇಶದ ಪ್ರತಿ ಸಿಕ್ಕಿದೆ. ಶ್ಯೂರಿಟಿ ಸೇರಿದಂತೆ ಕೆಲವು ವಿಧಿವಿಧಾನಗಳನ್ನು ನೆರವೇರಿಸಬೇಕಿದೆ. ಈ ನಿಟ್ಟಿನಲ್ಲಿ ಕಾನೂನು ತಂಡವು ಕೆಲಸ ಮಾಡುತ್ತಿದೆ. ಆರ್ಯನ್‌ ಇಂದೇ ಬಿಡುಗಡೆಯಾಗಲು ಪ್ರಯತ್ನಿಸುತ್ತಿದ್ದೇವೆ, ಆದರೆ ಅದು ಸಾಧ್ಯವಿಲ್ಲ ಎನಿಸುತ್ತದೆ. ಇಲ್ಲದಿದ್ದರೆ ನಾಳೆ ಬೆಳಗ್ಗೆ ಜೈಲಿನಿಂದ ಆರ್ಯನ್‌ ಬಿಡುಗಡೆಯಾಗಲಿದ್ದಾರೆ ಎಂದರು.
ಶ್ಯೂರಿಟಿ ನೀಡಲು ಬಂದ ಜೂಹಿ ಚಾವ್ಲಾ ಅವರ ದಾಖಲೆಗಳನ್ನು ಪರಿಶೀಲಿಸಿದ ನಂತರ, ಅದನ್ನು ಮಾನ್ಯ ಮಾಡಲಾಗಿದೆ. ಅನುಮತಿಯಿಲ್ಲದೆ ದೇಶವನ್ನು ತೊರೆಯಬಾರದು. ಇದೇ ರೀತಿಯ ಚಟುವಟಿಕೆಗಳಲ್ಲಿ ತೊಡಗಬಾರದು, ಮಾಧ್ಯಮಗಳ ಜತೆ ಮಾತನಾಡಬಾರದು ಸೇರಿದಂತೆ 14 ಷರತ್ತುಗಳನ್ನು ಕೋರ್ಟ್‌ ವಿಧಿಸಿದೆ.
ಇದ್ದಕ್ಕಿದ್ದಂತೆಯೇ ತಲೆತಿರುಗಿಬಿದ್ದ ನಟ ರಜನಿಕಾಂತ್‌: ಹೃದಯದ ಸರ್ಜರಿ, ಆಸ್ಪತ್ರೆ ಎದುರು ಅಭಿಮಾನಿಗಳ ದಂಡು

ಅತಿಯಾದ ವರ್ಕ್‌ಔಟ್‌ ಪ್ರೀತಿ ಪುನೀತ್‌ ಪ್ರಾಣ ಕಸಿದುಕೊಂಡಿತಾ? ಹಿಂದೆಯೂ ನಡೆದಿತ್ತು ಇಂಥ ಘಟನೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:8 − 2 =
Remember me
