ಮುಂಬೈ:ಡ್ರಗ್ಸ್‌ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಕುರಿತಂತೆ ಜೈಲಿನ ಅಧಿಕಾರಿಗಳಿಗೆ ಹೊಸ ತಲೆಬಿಸಿ ಶುರುವಾಗಿದೆ. ದಿನವೊಂದಕ್ಕೆ ಲಕ್ಷ ಲಕ್ಷಗಟ್ಟಲೆ ಖರ್ಚು ಮಾಡಿ ಐಷಾರಾಮಿ ಜೀವನ ಸಾಗಿಸುತ್ತಾ ಕಾಲಿಗೊಂದು, ಕೈಗೊಂದು ಆಳು ಇಟ್ಟುಕೊಂಡು ಬೆಳೆದಿದ್ದ ಆರ್ಯನ್‌ ಖಾನ್‌ಗೆ ಇದೀಗ ಜೈಲಿನಲ್ಲಿ ಎಷ್ಟೇ ಸೌಲಭ್ಯ ನೀಡಿದ್ದರೂ ಸಹಜವಾಗಿ ಅದು ಸಹಿಸಲು ಸಾಧ್ಯವಾಗುತ್ತಿಲ್ಲ.
ಪ್ರತ್ಯೇಕ ಐಷಾರಾಮಿ ಶೌಚಗೃಹ, ಸ್ನಾನದ ಕೊಠಡಿ, ಸ್ವಿಚ್‌ ಒತ್ತಿದರೆ ಸಾಕು ತನ್ನಿಂದ ತಾನೇ ಸ್ನಾನ ಮಾಡಿಸುವ ಯಂತ್ರಗಳು… ಇಂಥದ್ದೆಲ್ಲಾ ಸೌಲಭ್ಯವನ್ನು ಹುಟ್ಟಿನಿಂದಲೇ ಕಂಡಿರುವ ಈ ಸ್ಟಾರ್‌ ಪುತ್ರನಿಗೆ ಈಗ ಜೈಲಿನಲ್ಲಿರುವ ಸ್ನಾನಗೃಹ ಹಾಗೂ ಶೌಚಗೃಹವನ್ನು ಬಳಸುವುದು ಅಸಾಧ್ಯವಾಗಿಬಿಟ್ಟಿದೆ. ಆದ್ದರಿಂದ ದಿನವೂ ಆರ್ಯನ್‌ ಸ್ನಾನವೇ ಮಾಡುತ್ತಿಲ್ಲ, ಇದರಿಂದ ಸಮಸ್ಯೆ ತಲೆದೋರಬಹುದು ಎಂದು ಜೈಲಧಿಕಾರಿಗಳು ಹೇಳುತ್ತಿದ್ದಾರೆ.
ಮಾತ್ರವಲ್ಲದೇ ಎಲ್ಲರೂ ಬಳಸುವ ಶೌಚಗೃಹವನ್ನು ಬಳಸುವುದು ಕೂಡ ಆರ್ಯನ್‌ ಕಷ್ಟವಾಗಿದೆ. ಈ ಕಾರಣದಿಂದ ಆಹಾರ ಸೇವನೆಯನ್ನೇ ತ್ಯಜಿಸಿದ್ದಾನಂತೆ! ನೀರು ಮತ್ತು ಆಹಾರ ತಿಂದರೆ ಶೌಚಕ್ಕೆ ಹೋಗಬೇಕಾಗುತ್ತದೆ ಎನ್ನುವ ಕಾರಣಕ್ಕೆ ಏನನ್ನೂ ತಿನ್ನುತ್ತಿಲ್ಲ, ಸ್ನಾನವನ್ನೂ ಮಾಡುತ್ತಿಲ್ಲ, ಹೀಗೆ ಆದರೆ ತುಂಬಾ ಕಷ್ಟವಾಗಲಿದೆ ಪರಿಸ್ಥಿತಿ ಎಂದು ತಲೆಬಿಸಿಯಲ್ಲಿ ಅಧಿಕಾರಿಗಳು ಇದ್ದಾರೆ ಎನ್ನಲಾಗಿದೆ.
ಮುಂಬೈನ ಆರ್ಥರ್​ ರೋಡ್​ ಜೈಲಿನಲ್ಲಿ ಇರುವ ಆರ್ಯನ್‌ಗೆ ಜಾಮೀನು ಕೊಡಿಸಲು ಶಾರುಖ್‌ ಮತ್ತು ಗೌರಿ ಓಡಾಟ ನಡೆಸುತ್ತಿದ್ದರೂ ಸದ್ಯ ಜಾಮೀನು ಸಿಕ್ಕಿಲ್ಲ. ಆದರೆ ಇತ್ತ ಜೈಲಿನಲ್ಲಿ ಹೊಂದಿಕೊಳ್ಳಲಾಗದೇ ಆರ್ಯನ್‌ ಒದ್ದಾಡುತ್ತಿರುವುದು ಅಧಿಕಾರಿಗಳಿಗೆ ನುಂಗಲಾರದ ತುತ್ತಾಗಿದೆ. ಇದಕ್ಕೆ ಕಾರಣ, ಹೀಗೆ ಸ್ನಾನ, ಊಟ- ಆಹಾರ ಬಿಟ್ಟು ಕೂತರೆ ಆರೋಗ್ಯ ಸಮಸ್ಯೆ ಉಂಟಾಗಲಿದೆ. ಹೀಗಾದರೆ ವಿಚಾರಣೆ ನಡೆಸುವುದು ಕಷ್ಟವಾಗುತ್ತದೆ ಎನ್ನುವುದು ಅವರ ಮಾತು.
ಹೀಗೆ ಮಾಡಿ ಅನಾರೋಗ್ಯಪೀಡಿತನಾದರೆ ಕೊನೆಯ ಪಕ್ಷ ಜೈಲಿನಿಂದ ಬಿಡುಗಡೆ ಹೊಂದಿ ಆಸ್ಪತ್ರೆ ಸೇರುವ ಹುನ್ನಾರವೂ ಇದಾಗಿರಬಹುದು, ಹೀಗಾದರೆ ಅಲ್ಲಿ ಸಕಲ ಸೌಲಭ್ಯ ಪಡೆಯಲು ಅನುಕೂಲ ಆಗುತ್ತದೆ ಎಂಬ ಸುದ್ದಿಗಳೂ ಹರಿದಾಡುತ್ತಿವೆ!
ಈ ನಡುವೆಯೇ ಆರ್ಯನ್‌ ಖಾನ್‌ನನ್ನು ಬೇರೊಂದು ಸೆಲ್​ಗೆ ಶಿಫ್ಟ್‌ ಮಾಡಲಾಗಿದ್ದು, ಇಂದು ಶಾರುಖ್‌ ಖಾನ್‌ ಅವರನ್ನು ಭೇಟಿಯಾಗಲು ಅವಕಾಶ ಕಲ್ಪಿಸಲಾಗಿದೆ. ಇಲ್ಲಿಯವರೆಗೆ ಕೇವಲ ವಿಡಿಯೋ ಕಾಲ್​ ಮೂಲಕ ಮಾತನಾಡಲು ಅವಕಾಶ ನೀಡಲಾಗಿತ್ತು ಎನ್ನಲಾಗಿದೆ.
ನಿರ್ದೇಶಕನ ಜತೆ ಡೇಟಿಂಗ್‌ನಲ್ಲಿರೋ ನಟಿ ನಯನತಾರಾ ಮದ್ವೆ ಮರದ ಜತೆ ಫಿಕ್ಸ್‌!

ನಾನೂ ಗಾಂಜಾ ಸೇವಿಸಿದ್ದೆ, ತಪ್ಪೇನಿದೆ? ನ್ಯಾಯಾಂಗ ವ್ಯವಸ್ಥೆಯೇ ಸರಿಯಿಲ್ಲ ಎಂದ ಸಲ್ಲು ಮಾಜಿ ಲವರ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
