ಮುಂಬೈ:ಬಾಲಿವುಡ್​ ನಟ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಕೊನೆಗೂ ಬಚಾವ್​ ಆಗಿದ್ದಾನೆ. ಕಳೆದ ಅಕ್ಟೋಬರ್​ 30ರಂದು ಹಡಗಿನಲ್ಲಿ ಪಾರ್ಟಿ ಮಾಡುವ ಸಮಯದಲ್ಲಿ ಸಿಕ್ಕಿಬಿದ್ದು ಒದ್ದಾಡುತ್ತಿದ್ದ ಆರ್ಯನ್​ಗೆ ವಿಶೇಷ ತನಿಖಾಧಿಕಾರಿಗಳು ಕ್ಲೀನ್​​ಚಿಟ್​​ ನೀಡಿದ್ದು, ಈ ಸಮಯದಲ್ಲಿ ಆರ್ಯನ್​ ಖಾನ್​ ಬಳಿ ಡ್ರಗ್ಸ್​ ಇರುವುದಕ್ಕೆ ಸಾಕ್ಷ್ಯಾಧಾರ ಸಿಕ್ಕಿಲ್ಲ ಎಂದಿದ್ದಾರೆ. ಆರ್ಯನ್ ಖಾನ್ ಬಗ್ಗೆ ಯಾವುದೇ ಪುರಾವೆಗಳಿಲ್ಲ ಮತ್ತು ರಿಕವರಿ ಮಾಡಲಾದ ವಸ್ತುಗಳಲ್ಲಿ ಡ್ರಗ್ಸ್ ಕಂಡು ಬಂದಿಲ್ಲ ಎಂದು ಚಾರ್ಜ್​ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. 22 ದಿನ ಜೈಲು ಶಿಕ್ಷೆಯನ್ನು ಅನುಭವಿಸಿದ್ದ ಆರ್ಯನ್​ ಖಾನ್​ ಕೊನೆಗೂ ನೆಮ್ಮದಿಯಿಂದ ಉಸಿರುಬಿಡುವಂತಾಗಿದೆ.
ಈ ಮಧ್ಯೆಯೇ, ವಿಚಾರಣೆ ವೇಳೆ ಆರ್ಯನ್​ ಖಾನ್​, ತಾನು ಡ್ರಗ್ಸ್​ ಸೇವನೆ ಮಾಡುತ್ತಿದ್ದುದು ನಿಜ ಎಂದು ಒಪ್ಪಿಕೊಂಡಿದ್ದಾನೆ. ಅಮೆರಿಕದಲ್ಲಿ ಪದವಿ ಕಲಿಯುತ್ತಿದ್ದ ವೇಳೆ ತಾನು ಗಾಂಜಾ ಸೇವಿಸುತ್ತಿದ್ದೆ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮುಂದೆ ಹೇಳಿಕೆ ನೀಡಿದ್ದಾರೆ. ತನಗೆ ಆ ಸಮಯದಲ್ಲಿ ನಿದ್ದೆ ಬರುತ್ತಿರಲಿಲ್ಲ. ಇಂಟರ್​ನೆಟ್​ನಲ್ಲಿ ಈ ಬಗ್ಗೆ ಹುಡುಕಿದಾಗ ಗಾಂಜಾ ಸೇವನೆ ಮಾಡಬೇಕು ಎಂಬ ಮಾಹಿತಿ ಸಿಕ್ಕಿತು. ಅದಕ್ಕಾಗಿ ನಾನು ಸೇವಿಸುತ್ತಿದ್ದೆ ಎಂದು ಹೇಳಿದ್ದಾನೆ.
ಆರ್ಯನ್ ಖಾನ್​ ತನ್ನ ಸ್ನೇಹಿತೆ ಅನನ್ಯ ಪಾಂಡೆಯ ಜತೆ ಪಾರ್ಟಿಗೂ ಮೊದಲು ಕೊಕೇನ್ ಪ್ಲ್ಯಾನ್​ ಮಾಡಿದ್ದ ವಾಟ್ಸ್ಆ್ಯಪ್​ ಸಂದೇಶ ಸಿಕ್ಕಿತ್ತು. ಇದರ ಜತೆಗೆ ಗಾಂಜಾ ಬಗ್ಗೆಯೂ ಅದರಲ್ಲಿ ಉಲ್ಲೇಖ ಮಾಡಲಾಗಿತ್ತು. ಇದಕ್ಕೆ ಉತ್ತರಿಸಿರುವ ಆರ್ಯನ್​, ಈ ಮೆಸೇಜ್​ ಮಾಡಿದ್ದು ನಾನೇ. ಆದರೆ ಅವೆಲ್ಲಾ ತಮಾಷೆಗೆ ಮಾಡಿರುವ ಮೆಸೇಜ್​ಗಳಷ್ಟೇ. ನಾವೇನೂ ಪಾರ್ಟಿಯಲ್ಲಿ ಡ್ರಗ್ಸ್​ ಸೇವನೆ ಮಾಡುತ್ತಿರಲಿಲ್ಲ ಎಂದಿದ್ದಾನೆ.
ಮುಂಬೈನಿಂದ ಒಬ್ಬ ಡೀಲರ್​ ಡ್ರಗ್ಸ್​ ಪೂರೈಕೆ ಮಾಡುತ್ತಿದ್ದ ಬಗ್ಗೆ ಈ ಹಿಂದೆ ಆರ್ಯನ್​ ಬಾಯಿಬಿಟ್ಟಿದ್ದ. ಡ್ರಗ್ಸ್​ ಪೂರೈಕೆ ಮಾಡುತ್ತಿದ್ದುದು ನಿಜ. ಆದರೆ ಆತನ ಹೆಸರು ಹಾಗೂ ಮಾಹಿತಿ ಗೊತ್ತಿಲ್ಲ ಎಂದು ತಿಳಿಸಿದ್ದಾನೆ. ಅದೇನೇ ಆದರೂ ಅಧಿಕಾರಿಗಳು ಇದೀಗ ಕ್ಲೀನ್​ಚಿಟ್​ ಕೊಟ್ಟಿದ್ದರಿಂದ ಶಾರುಖ್​ ಪುತ್ರ ನೆಮ್ಮದಿಯಿಂದ ಇದ್ದಾನೆ.
ಸಿಕ್ಕಾಪಟ್ಟೆ ಫೇಮಸ್​ ಆಗ್ತಿದೆಯಂತೆ ಈ ಬಿಯರ್​! ಆಹಾಹಾ ಎನ್ನೋ ಮೊದ್ಲು ಇದ್ರ ಬಗ್ಗೆ ತಿಳಿದುಕೊಂಡ್​ಬಿಡಿ….

ಕಾಂಗ್ರೆಸ್​ನ ‘ನಪುಂಸಕ’ ಟ್ವೀಟ್​ಗೆ ಹೀಗೆಲ್ಲಾ ಪ್ರತಿಕ್ರಿಯೆ:​ ​ ದೇಶಪ್ರೇಮಿಗಳೇ ರಾಹುಲ್​ರಿಂದ ರಾಷ್ಟ್ರಗೀತೆ ಹಾಡಿಸ್ತೀರಾ?

7 ಶತಕೋಟಿ ಒಡತಿ ನಟಿ ಐಶ್ವರ್ಯ ರೈ ಪಡೆದ ಮೊದಲ ಸಂಬಳ ಇಷ್ಟೇನಾ… ಮಾಡೆಲಿಂಗ್​ ಅಗ್ರಿಮೆಂಟ್​ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + fifteen =
Remember me
