ಮುಂಬೈ:ಡ್ರಗ್ಸ್‌ ಕೇಸ್‌ನಲ್ಲಿ ಸಿಕ್ಕಿಬಿದ್ದು ಹಲವಾರು ದಿನಗಳವರೆಗೆ ಜೈಲಿನಲ್ಲಿ ಕೈದಿಯಾಗಿದ್ದು, ಅಂತೂ ಜಾಮೀನಿನ ಮೇಲೆ ಹೊರಕ್ಕೆ ಬಂದಿರುವ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಹೊರಕ್ಕೆ ಬರುತ್ತಿದ್ದಂತೆಯೇ ವರಸೆ ಬದಲಿಸಿದ್ದಾರೆ.ಜಾಮೀನು ನೀಡುವ ಸಂದರ್ಭದಲ್ಲಿ ವಿಧಿಸಲಾಗಿದ್ದ ಷರತ್ತುಗಳ ಪೈಕಿ ಒಂದು ಎಂದರೆ, ತನಿಖಾಧಿಕಾರಿಗಳು ತನಿಖೆಗೆ ಕರೆದಾಗ ಬರಬೇಕು, ಇದರಿಂದ ತಪ್ಪಿಸಿಕೊಳ್ಳಬಾರದು ಎಂದು. ಆ ಹೂಂಗುಟ್ಟಿದ್ದ ಆರ್ಯನ್‌ ಈಗ ಹೊರಕ್ಕೆ ಬರುತ್ತಿದ್ದಂತೆಯೇ ವಿಚಾರಣೆಗೆ ಹಾಜರು ಆಗಲೇ ಇಲ್ಲ!
ನಿನ್ನೆ ಆರ್ಯನ್‌ ವಿಚಾರಣೆಗೆ ಹಾಜರಾಗಬೇಕಿತ್ತು. ಈ ಹಿನ್ನೆಲೆಯಲ್ಲಿ ಆತನಿಗೆ ನೋಟಿಸ್‌ ಜಾರಿಯಾಗಿತ್ತು. ಡಿಡಿಜಿ ಎನ್‍ಸಿಬಿ ಸಂಜಯ್ ಸಿಂಗ್ ಅವರು ಆರ್ಯನ್‍ ಖಾನ್‍ಗೆ ಬುಲಾವ್ ನೀಡಿದ್ದರು. ಆದರೆ ಹಾಜರು ಆಗದೇ ಅದಕ್ಕೊಂದು ಕಾರಣವನ್ನೂ ನೀಡಲಾಗಿದೆ. ಅದೇನೆಂದರೆ ಈತನಿಗೆ ಕರೊನಾ ಲಕ್ಷಣಗಳು ಕಾಣಿಸಿಕೊಂಡಿವೆಯಂತೆ! ಹೀಗೆಂದು ಅವರ ಪರ ವಕೀಲರು ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
.ಕರೊನಾ ಎಂದ ಮೇಲೆ ಸಹಜವಾಗಿ ವಿಚಾರಣೆಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗುತ್ತದೆ. ಇದೇ ಕಾರಣದಿಂದ ಆರ್ಯನ್‌ನ ಈ ಕರೊನಾ ಕಾರಣವನ್ನೂ ಅಧಿಕಾರಿಗಳು ಮಾನ್ಯ ಮಾಡಿದ್ದಾರೆ. ವಿಚಾರಣೆಗೆ ಬೇರೊಂದು ದಿನಾಂಕ ನೀಡುವಂತೆ ವಕೀಲರು ಕೋರಿದ್ದ ಹಿನ್ನೆಲೆಯಲ್ಲಿ ಇದಕ್ಕೆ ಅಧಿಕಾರಿಗಳು ಸಮ್ಮಿತಿಸಿದ್ದಾರೆ. ಮುಂದಿನ ವಿಚಾರಣೆ ವೇಳೆ ಕರೊನಾ ಲಕ್ಷಣದಿಂದ ಆರ್ಯನ್‌ ಗುಣಮುಖರಾಗುತ್ತಾರೋ ಎಂದು ಕಾದುನೋಡಬೇಕಿದೆ!
VIDEO: ಅಪ್ಪುವಿನ ಆತ್ಮದ ಜತೆಗೆ ಮಾತನಾಡಿದ ಅಮೆರಿಕದ ತಜ್ಞ? ವಿಡಿಯೋ ಇಲ್ಲಿದೆ ನೋಡಿ…

ನೋವಿನಲ್ಲಿಯೂ ದೊಡ್ಡತನ ಮರೆದ ಅಪ್ಪು ಪತ್ನಿ: ಪೊಲೀಸರಿಗೆ ಪತ್ರ ಬರೆದು ಧನ್ಯವಾದ ಸಲ್ಲಿಸಿದ ಅಶ್ವಿನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + ten =
Remember me
