ಮುಂಬೈ:ಬಾಲಿವುಡ್‌ ನಟ ಶಾರುಖ್‌ ಖಾನ್ ಪುತ್ರ ಆರ್ಯನ್‌ ಖಾನ್‌ ಡ್ರಗ್ಸ್‌ ಪ್ರಕರಣದಲ್ಲಿ ಕೇಳಿಬರುತ್ತಿರುವ ಕೆಲವು ಆರೋಪಿಗಳ ಹೆಸರುಗಳ ಪೈಕಿ ಕಿರಣ್‌ ಗೋಸಾವಿ ಕೂಡ ಒಬ್ಬ. ಆರ್ಯನ್‌ ಖಾನ್‌ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ಗೋಸಾವಿಯನ್ನು ಅರೆಸ್ಟ್‌ ಮಾಡಲು ಪೊಲೀಸರು ಮುಂದಾದಾಗ ಅದಕ್ಕೆ ವಿರೋಧ ವ್ಯಕ್ತಪಡಿಸಿದವರೇ ಹೆಚ್ಚು.
ಆದರೆ ಗೋಸಾವಿ ಎಸ್ಕೇಪ್‌ ಆಗಿ ಪೊಲೀಸರ ಗುಮಾನಿಯನ್ನು ಇನ್ನಷ್ಟು ಹೆಚ್ಚುಮಾಡಿದ್ದ. ನಂತರ ಈತನ ‘ಜಾತಕ’ ಕೆದಕಿದಾಗ ಹಲವಾರು ಕ್ರಿಮಿನಲ್‌ ಕೇಸ್‌ಗಳನ್ನು ಪೊಲೀಸರು ಪತ್ತೆಮಾಡಿದ್ದರು. ಈ ಹಿನ್ನೆಲೆಯಲ್ಲಿ ಆತನ ಜಾಡು ಹಿಡಿದು ಹೋಗಿರುವ ಪೊಲೀರಿಗೆ ಕೊನೆಗೂ ಆತ ಸಿಕ್ಕಿಬಿದ್ದಿದ್ದಾನೆ. ಪುಣೆ ಪೊಲೀಸರು ಗೋಸಾವಿಯನ್ನು ಅರೆಸ್ಟ್​ ಮಾಡಿದ್ದಾರೆ.
ಈತ ಒಬ್ಬ ಖಾಸಗಿ ಡಿಟೆಕ್ಟಿವ್‌ ಎನ್ನಲಾಗಿದೆ. ಈತನ ಹಿನ್ನೆಲೆ ಕೆದಕಿದಾಗ ಅನೇಕ ಮಂದಿ ಇವನ ಬಗ್ಗೆ ದೂರು ದಾಖಲು ಮಾಡಿರುವುದು ತಿಳಿದಿದೆ. 2018ರ ಮೇ 19ರಂದು ಈತನ ವಿರುದ್ಧ ಪುಣೆಯ ಫರಸ್ಕನ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಮಲೇಷಿಯಾದಲ್ಲಿ ಉದ್ಯೋಗ ಕೊಡಿಸುವುದಾಗಿ ವ್ಯಕ್ತಿಯೊಬ್ಬನಿಗೆ ಆಮಿಷವೊಡ್ಡಿ ಹಣ ವಸೂಲಿ ಮಾಡಿದುದಾಗಿ ದೂರು ದಾಖಲಾಗಿತ್ತು. ಈ ಕೇಸಿನ್ನೂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ. ಇದರ ನಂತರ 2020ರ ಅಕ್ಟೋಬರ್ 18ರಂದು ಕೆಲ್ವ ಪೊಲೀಸ್ ಠಾಣೆಯಲ್ಲಿ ಇನ್ನೊಂದು ವಂಚನೆ ಕೇಸ್‌ ದಾಖಲಾಗಿತ್ತು. ಇದು ಕೂಡ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಲಕ್ಷಗಟ್ಟಲೆ ಹಣ ವಂಚಿಸಿರುವ ಪ್ರಕರಣ.
ಇವೆಲ್ಲ ಕೇಸ್‌ಗಳಲ್ಲಿ ಬೇಕಾಗಿದ್ದ ವ್ಯಕ್ತಿ ಅಂತೂ ಈಗ ಆರ್ಯನ್‌ ಕೇಸ್‌ನಲ್ಲಿ ಸಿಲುಕಿಬಿದ್ದಿದ್ದಾನೆ. ಪೊಲೀಸರು ಬಂಧಿಸುತ್ತಿರುವ ಸುದ್ದಿ ತಿಳಿಯುತ್ತಲೇ ಟ್ವೀಟ್‌ ಮಾಡಿರುವ ಗೋಸಾವಿ, ನಾನು ಮರಾಠಿಗ, ದಯವಿಟ್ಟು ಸರ್ಕಾರದವರು, ಸಚಿವರು ಇಲ್ಲವೇ ಕೊನೆಗೆ ವಿರೋಧ ಪಕ್ಷದವರಾದರೂ ನನಗೆ ಸಹಾಯ ಮಾಡಿ. ಮರಾಠಿಗನನ್ನು ರಕ್ಷಿಸಿ ಎಂದು ಕೇಳಿಕೊಂಡಿದ್ದಾನೆ.
Before his detention by Pune police, KP Gosavi, witness in Aryan Khan case released his video saying he is Marathi so people should stand with him. He also said either minister in govt or Opposition should support him. He refuted all charges of Prabhakar Sail.@NewIndianXpress
— Sudhir Suryawanshi (@ss_suryawanshi)October 28, 2021

ಶಾರುಖ್‌ ಪುತ್ರನ ಡ್ರಗ್ಸ್‌ ಕೇಸ್‌ಗೆ ಭಾರಿ ಟ್ವಿಸ್ಟ್‌: ಆರ್ಯನ್‌ ಮೆಸೇಜ್‌ ಅಳಿಸಿಹಾಕಲು ಹ್ಯಾಕರ್‌ಗೆ ಲಂಚ!

ಕೋಟ್ಯಧಿಪತಿ ಗಂಡನ ದುಡ್ಡು ದೋಚಿ ಆಟೋ ಡ್ರೈವರ್‌ ಯುವಕನ ಜತೆ ಆಂಟಿ ಎಸ್ಕೇಪ್‌: ಪತಿಯಿಂದ ದೂರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
