ನವದೆಹಲಿ:ಭಾರತದ ಸಾಂಪ್ರದಾಯಿಕ ಔಷಧೀಯ ಪದ್ಧತಿಯಾಗಿರುವ ಆಯುರ್ವೇದ ಮತ್ತು ಹೋಮಿಯೋಪಥಿಯಿಂದ ಕರೊನಾ ಸೋಂಕಿತರನ್ನು ಗುಣಪಡಿಸಿರುವ ಉದಾಹರಣೆಗಳು ಸಾಕಷ್ಟಿವೆ. ಯಾವುದೇ ಅಡ್ಡ ಪರಿಣಾಮವೂ ಇಲ್ಲದೇ ಲಕ್ಷಾಂತರ ಮಂದಿಯನ್ನು ಈ ಮಹಾಮಾರಿಯಿಂದ ಮುಕ್ತಿಗೊಳಿಸಿರುವ ವರದಿಗಳು ಜಗತ್ತಿನ ಮೂಲೆ ಮೂಲೆಗಳಿಂದಲೂ ಬರುತ್ತಲೇ ಇವೆ.
ಆಯುರ್ವೇದ ಔಷಧ ಪದ್ಧತಿಯನ್ನು ಅಳವಡಿಸಿಕೊಂಡಿರುವ ವೈದ್ಯರು ಕರೊನಾಕ್ಕೆ ಬಳಸುವ ಹಲವು ಬೇರು, ತೊಗಟೆಗಳಲ್ಲಿ ಒಂದು ಅಶ್ವಗಂಧ. ಕರೊನಾ ಮಾತ್ರವಲ್ಲದೇ ಹಲವಾರು ಸೋಂಕುಗಳನ್ನು, ಕಾಯಿಲೆಗಳನ್ನು ಗುಣಪಡಿಸುವ ಅದ್ಭುತ ಶಕ್ತಿ ಈ ಅಶ್ವಗಂಧಕ್ಕಿದೆ ಎಂದು ಎಷ್ಟೋ ನೂರು ವರ್ಷಗಳ ಹಿಂದೆಯೇ ಋಷಿಮುನಿಗಳು, ಆಯುರ್ವೇದ ತಜ್ಞರು ಹೇಳಿದ್ದಾರೆ, ಇದನ್ನು ಔಷಧ ರೂಪವಾಗಿ ಬಳಸುತ್ತಾ ಬಂದಿದ್ದಾರೆ ಕೂಡ.
ಒಂದೆಡೆ ಇತರ ಆಯುರ್ವೇದ ಔಷಧಗಳ ಜತೆಯಲ್ಲಿಯೇ ಅಶ್ವಗಂಧವನ್ನೂ ಸೇರಿಸಿ ಕರೊನಾ ಸೋಂಕಿಗೆ ಹಾಗೂ ರೋಗ ನಿರೋಧಕ ಶಕ್ತಿ ವೃದ್ಧಿಗೆ ನಮ್ಮ ವೈದ್ಯರು ಸದ್ದಿಲ್ಲದೇ ಚಿಕಿತ್ಸೆ ನೀಡುತ್ತಿದ್ದರೆ, ಇದರಲ್ಲಿ ಅದ್ಯಾವ ಶಕ್ತಿ ಇದೆ ಎಂದು ಈಗ ಲಂಡನ್‌ನ ಪ್ರಯೋಗಾಲದಯಲ್ಲಿ ಅಶ್ವಗಂಧವನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಭಾರತೀಯ ಆಯುಷ್ ಸಚಿವಾಲಯವು ‘ಲಂಡನ್ ಸ್ಕೂಲ್ ಆಫ್ ಹೈಜಿನ್ ಆಂಡ್ ಟ್ರೊಪಿಕಲ್ ಮೆಡಿಸನ್‘ ಸಹಭಾಗಿತ್ವದಲ್ಲಿ ಅಶ್ವಗಂಧವನ್ನು ಬಳಸಿಕೊಂಡು ಕರೊನಾ ಸೋಂಕನ್ನು ತಡೆಗಟ್ಟಬಹುದೆ ಎಂದು ಪ್ರಯೋಗ ಮಾಡುತ್ತಿದೆ. ಲಂಡನ್‌ನಲ್ಲಿರುವ ನಗರಗಳಾದ ಲಿಸೆಸ್ಟರ್, ಬರ್ಮಿಂಗ್ ಹ್ಯಾಮ್‌ಗಳಲ್ಲಿ ಇದಾಗಲೇ ಎರಡು ಸಾವಿರಕ್ಕೂ ಅಧಿಕ ಮಂದಿಯ ಮೇಲೆ ಅಶ್ವಗಂಧದ ಪ್ರಯೋಗ ಮಾಡಲಾಗಿದೆ ಎಂದು ಆಯುಷ್ ಸಚಿವಾಲಯ ತಿಳಿಸಿದೆ.
ಭಾರತದ ಸಾಂಪ್ರದಾಯಿಕ ಔಷಧದ ಬಗ್ಗೆ ಇದಾಗಲೇ ಸಾಕಷ್ಟು ಅಧ್ಯಯನ ನಡೆದಿದ್ದು, ಅಶ್ವಗಂಧದ ಉಪಯೋಗಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಮತ್ತಷ್ಟು ಅಧ್ಯಯನಗಳನ್ನು ನಡೆಯುತ್ತಿದೆ. ಇದೇ ಮೊದ ಬಾರಿಗೆ ಜಾಗತಿಕ ಸಂಸ್ಥೆಯೊಂದರ ಜತೆಗೆ ಕರೊನಾ ವೈರಸ್‌ ವಿರುದ್ಧ ಅಶ್ವಗಂಧ ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂಬುದನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ವೈದ್ಯಕೀಯ ಪ್ರಯೋಗ ನಡೆಸಲಾಗುತ್ತಿದೆ ಎಂದು ಸಚಿವಾಲಯ ಹೇಳಿದೆ. ಲಂಡನ್‌ ಪ್ರಯೋಗಾಲವು ಭಾರತದ ಈ ಗಿಡಮೂಲಿಕೆ ಬಗ್ಗೆ ಏನು ಹೇಳುತ್ತದೆಯೋ ಅದರ ಆಧಾರದ ಮೇಲೆ ತಜ್ಞರು ಮುಂದಿನ ಕ್ರಮ ತೆಗೆದುಕೊಳ್ಳಲಿದ್ದಾರೆ.
Breaking: ಹಾಕಿಯಲ್ಲಿ ದಾಖಲೆ ಬರೆದ ಭಾರತದ ವನಿತೆಯರು: 41 ವರ್ಷಗಳ ಬಳಿಕ ಐತಿಹಾಸಿಕ ಸಾಧನೆ

ಮರಳಲ್ಲಿ ಮೂಡಿ ಬಂದ ‘ಕಂಚಿನ ರಾಣಿ’: ಬ್ಯಾಂಡಿಂಟನ್‌ ತಾರೆ ಸಿಂಧು ಕಲಾಕೃತಿ ರಚಿಸಿದ ಕಲಾವಿದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
