ಬರಾನ್​ (ರಾಜಸ್ಥಾನ):ದಯವಿಟ್ಟು ನನಗೇ ಮತ ಹಾಕಿ, ನಿಮ್ಮ ಬಂಧು ನಾನು, ನಿಮ್ಮ ಸೇವಕ ನಾನು, ನಿಮ್ಮನ್ನು ಉದ್ಧಾರ ಮಾಡುವೆ, ನಿಮ್ಮ ಏರಿಯಾಕ್ಕೆ ಸಕಲ ಸೌಲಭ್ಯ ಒದಗಿಸುವೆ…. ಈ ಮಾತುಗಳು ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕೇಳುವುದು ಮಾಮೂಲು. ಮತ ಯಾಚನೆ ಮಾಡಲು ಬಂದ ರಾಜಕಾರಣಿಗಳು ನಾಚಿಕೆಯನ್ನೂ ಬಿಟ್ಟು ಪರಿಪರಿಯಾಗಿ ಮತಕ್ಕಾಗಿ ಅಂಗಲಾಚುವುದು, ಕೊನೆಗೆ ಗೆದ್ದ ಮೇಲೆ ಹಲವು ಮುಖಂಡರು ಅತ್ತ ಸುಳಿಯದೇ ಇರುವುದು ಹೊಸ ವಿಷಯವೇನಲ್ಲ.
ಆದರೆ ಇಲ್ಲಿ ಹೇಳುತ್ತಿರುವುದು ಸಾರ್ವತ್ರಿಕ ಚುನಾವಣೆಯ ವಿಷಯವಲ್ಲ. ಯುವಕ, ಯುವತಿಯನ್ನು ಅಡ್ಡಗಟ್ಟಿ ಅವರ ಕಾಲಿಗೆ ಬೀಳುತ್ತಿರುವ ಯುವಕರನ್ನು ಒಮ್ಮೆ ಈ ಕೆಳಗಿರುವ ವಿಡಿಯೋದಲ್ಲಿ ನೋಡಿ. ಛೇ ಹೀಗೆಲ್ಲಾ ಮಾಡಬೇಡಿ ಎಂದು ಯುವತಿಯರು ನಾಚಿ ನೀರಾದರೂ ಬಿಡದ ಯುವಕರು ಅವರ ಕಾಲಿಗೆ ಬಿದ್ದು ನಮಗೇ ವೋಟು ಕೊಡಿ ಎಂದು ಕೇಳುತ್ತಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ.
ಅಂದ ಹಾಗೆ, ಈ ವಿಡಿಯೋ ರಾಜಸ್ಥಾನದ ಬರಾನ್​ದು. ಹೀಗೆ ಕಾಲೇಜಿನ ಯುವಕ, ಯುವತಿಯನ್ನು ಅಡ್ಡಗಟ್ಟಿ ಅವರ ಕಾಲಿಗೆ ಬಿದ್ದು ಅಂಗಲಾಚುತ್ತಿರುವವರು ವಿದ್ಯಾರ್ಥಿ ಸಂಘದ ಯುವಕರು! ವಿದ್ಯಾರ್ಥಿ ಸಂಘದ ಚುನಾವಣೆಗಾಗಿ ಈ ರೀತಿಯ ಪರಿಪರಿ ವೇಷ! ಸಂಘದ ಮುಖಂಡರು ವಿದ್ಯಾರ್ಥಿಗಳ ಕಾಲಿಗೆ ಬಿದ್ದು ತಮ್ಮ ಪರವಾಗಿ ಮತ ಚಲಾಯಿಸುವಂತೆ ಮನವಿ ಮಾಡಿಕೊಳ್ಳುತ್ತಿರುವ ವಿಡಿಯೋ ಇದಾಗಿದೆ.
ಅಂದಹಾಗೆ ಸಂಘದ ಚುನಾವಣೆ ನಿನ್ನೆ (ಶುಕ್ರವಾರ) ನಡೆದಿದೆ. ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾಗಿತ್ತು. ಇಂದು (ಶನಿವಾರ) ಮತ ಎಣಿಕೆ ನಡೆಯುತ್ತಿದ್ದು, ಸಂಜೆಯ ವೇಳೆ ಫಲಿತಾಂಶ ಹೊರಬೀಳಲಿದೆ. ಈ ನಡುವೆ ಮತ ಚಲಾಯಿಸಲು ಯುವಕರು ಪರಿಪರಿಯಾಗಿ ಬೇಡಿಕೊಳ್ಳುತ್ತಿರುವ ವಿಡಿಯೋ ವೈರಲ್​ ಆಗಿದೆ(ಏಜೆನ್ಸೀಸ್​)
ಇಲ್ಲಿದೆ ನೋಡಿ ವಿಡಿಯೋ:
राजस्थान विश्वविद्यालय छात्र संघ चुनाव के दौरान प्रत्याशियों ने सड़क पर लेटकर पैर पकड़कर माँगे वोट.pic.twitter.com/rmvlgCFXgJ
— UnSeen India (@USIndia_)August 26, 2022

ಶಿವಮೊಗ್ಗದಲ್ಲಿ ಚಾಕು ಇರಿದ ಆರೋಪಿಗಳಿಗೆ ಬಿಗ್​ ಶಾಕ್​! ಯುಎಪಿಎ ಅಡಿ ಕೇಸ್​ ದಾಖಲು- ಏನಿದು ಕಾಯ್ದೆ?

ದೇವರ ಸನ್ನಿಧಿಯಲ್ಲಿಯೇ ಚಿತ್ರಹಿಂಸೆ ಅನುಭವಿಸಿದ ಸುಂದರ್​ ಇನ್ನಿಲ್ಲ: ಈತನ ಕರಾಳ ಬದುಕಿನ ಕಣ್ಣೀರ ಕಥೆಯಿದು…

ಬಾಗಲಕೋಟೆ ಬಿಜೆಪಿಯಲ್ಲಿ ಕೋಲಾಹಲ: ಶಾಸಕನ ತಮ್ಮ ಪಕ್ಷದಿಂದ ಔಟ್​- ‘ಸಹೋದರರ ಸವಾಲ್​’ ಎಂದು ಕಾಂಗ್ರೆಸ್​ ವ್ಯಂಗ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 12 =
Remember me
