ಅಸ್ಸಾಂ:ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಭಾವಿ ಪತಿಯನ್ನು ಅರೆಸ್ಟ್ ಮಾಡಿ ಜೈಲಿಗೆ ಅಟ್ಟಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.
ಹಣೆಮಣೆಗೆ ಏರಲು ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ ತಮ್ಮ ಪತಿ ಭಾವಿ ಪತಿ ರಾಣಾ ಪೊಗಾಗ್ ಮಹಾ ವಂಚಕ ಎಂದು ತಿಳಿದುಬಂದಿದ್ದರಿಂದ ಪೊಲೀಸ್‌ ವಧು ಇಂಥದ್ದೊಂದು ದಿಟ್ಟ ಹೆಜ್ಜೆಯನ್ನು ಇಟ್ಟಿದ್ದು, ಎಲ್ಲರ ಶಹಬ್ಬಾಸ್‌ಗಿರಿ ಪಡೆದುಕೊಂಡಿದ್ದಾರೆ.
ಅಸ್ಸಾಂನ ನಾಗೋನ್ ಸದರ್ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ ಜೋನ್ಮಣಿ ರಾಭಾ ಇದೀಗ ಭಾರಿ ಸುದ್ದಿಯಲ್ಲಿದ್ದು, ದಕ್ಷತೆ, ಪ್ರಾಮಾಣಿಕರು ಎಂಬ ಹೆಸರು ಗಳಿಸುತ್ತಿದ್ದಾರೆ.
ಇವರಿಬ್ಬರ ಎಂಗೇಜ್‌ಮೆಂಟ್‌ ಆಗಿತ್ತು. ತಾನು ತೈಲ ಮತ್ತು ಅನಿಲ ಆಯೋಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ ಈತ ಜೋನ್ಮಣಿಯವರ ಸಲಿಗೆ ಬೆಳೆಸಿ, ವಿವಾಹವಾಗುವ ಪ್ರಸ್ತಾಪ ಇಟ್ಟಿದ್ದ. ಪೊಲೀಸ್ ಅಧಿಕಾರಿಯನ್ನು ಮದುವೆಯಾದರೆ ಮುಂದೆ ತನಗೆ ಯಾವುದೇ ತೊಂದರೆ ಬರುವುದಿಲ್ಲ ಎನ್ನುವುದು ಆತನ ಉದ್ದೇಶದಂತಿತ್ತು.
ಮದುವೆಯ ಸಮಯದಲ್ಲಿ ಈ ಪೊಲೀಸ್ ಅಧಿಕಾರಿಗೆ ತಮ್ಮ ಪತಿಯಾಗುವವ ಮಹಾ ಖದೀಮ ಎನ್ನುವುದು ತಿಳಿದಿರಲಿಲ್ಲ. ಆಮೇಲೆ ಈತ ಒಬ್ಬ ಹೈಪ್ರೊಫೈಲ್ ವಂಚಕ. ಈತ ಹಲವರನ್ನು ವಂಚಿಸಿದ್ದ. ಉನ್ನತ ಇಲಾಖೆಯಲ್ಲಿ ಉದ್ಯೋಗ ಕೊಡಿಸುವ ಆಮಿಷ ಒಡ್ಡಿ, ಅವರಿಂದ ಹಣ ಪಡೆಯುತ್ತಿದ್ದ. ಬಳಿಕ ಅವರಿಗೆ ಕೆಲಸ ಕೊಡಿಸದೇ ವಂಚಿಸುತ್ತಿದ್ದ. ಹಣ ವಾಪಸ್ ಕೇಳಿದರೆ ಜೀವ ಬೆದರಿಕೆ ಒಡ್ಡುತ್ತಿದ್ದ ಎನ್ನುವುದು ತಿಳಿದುಬಂತು. ಮಾತ್ರವಲ್ಲದೇ ಹನಿ ಟ್ರ್ಯಾಪ್‌ನಲ್ಲೂ ಈತ ಆರೋಪಿಯಾಗಿದ್ದ.
ಇಷ್ಟು ತಿಳಿಯುತ್ತಲೇ ಮದುವೆ ಕ್ಯಾನ್ಸಲ್‌ ಮಾಡಿದ ಅವರು, ಭಾವಿ ಪತಿ ವಿರುದ್ಧ ವಂಚನೆ ಕೇಸ್‌ ದಾಖಲಿಸಿ ಜೈಲಿಗಟ್ಟಿದ್ದಾರೆ. ಈತನಿಂದ ಇದಾಗಲೇ ಹಲವಾರು ನಕಲಿ ಸೀಲ್‌ ಸೇರಿದಂತೆ ಮಹತ್ವದ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಆತನ ವಿರುದ್ಧ ಎಫ್ಐಆರ್ ದಾಖಲಿಸಿ, ತನಿಖೆ ಮುಂದುವರೆಸಿದ್ದಾರೆ.
ಕಾಂಡೋಮ್‌ನಲ್ಲಿ ರಂಧ್ರ ಮಾಡಿದ ಮಹಿಳೆ ವಿರುದ್ಧ ಕ್ರಿಮಿನಲ್‌ ಕೇಸ್‌: ಆರು ತಿಂಗಳು ಶಿಕ್ಷೆ ವಿಧಿಸಿದ ಕೋರ್ಟ್‌!

ಮನುಕುಲವೇ ತಲೆತಗ್ಗಿಸುವ ಘನಘೋರ ಕೃತ್ಯ: ಬಾಲಕಿಯ ಶವವನ್ನು ಹೊರಕ್ಕೆ ತೆಗೆದು 17 ಮಂದಿ ಗ್ಯಾಂಗ್‌ ರೇಪ್‌!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
