ಪುರಿ (ಒಡಿಶಾ):ಜ.24 ಅನ್ನು ರಾಷ್ಟ್ರೀಯ ಹೆಣ್ಣುಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವ ನಿಟ್ಟಿನಲ್ಲಿ ಈ ಒಂದು ದಿನವನ್ನು ಆಚರಿಸಲಾಗುತ್ತಿದೆ. ಆದರೆ ಅತ್ಯಂತ ಘೋರ ಕೃತ್ಯವೊಂದು ಇದೇ ದಿನ ನಡೆದಿದೆ. ಅದೇನೆಂದರೆ ಐದು ವರ್ಷದ ಬಾಲಕಿಯ ಮೇಲೆ ಒಡಿಶಾದ ಪುರಿಯಲ್ಲಿ ಅತ್ಯಾಚಾರವಾಗಿದ್ದು, ಈ ಕಂದಮ್ಮ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದೆ.
ಪುರಿಯಲ್ಲಿ ಈ ಬಾಲಕಿ ಅಪ್ಪ-ಅಮ್ಮನ ಜತೆ ನೆಲೆಸಿದ್ದಳು. ಪಕ್ಕದ ಮನೆಗೆ ಬಂದಿದ್ದ ಮಹೇಶ್ ಮೊಹಂತಿ (35) ಎಂಬ ದುರುಳನ ಕಣ್ಣು ಈ ಪುಟ್ಟ ಬಾಲೆಯ ಮೇಲೆ ಹೋಗಿದೆ. ಈತನ ಮನೆಯ ನವೀಕರಣ ಕಾರ್ಯಗಳು ನಡೆಯುತ್ತಿರುವುದರಿಂದ ಬಾಲಕಿಯ ಮನೆಯ ಪಕ್ಕದಲ್ಲಿ ಈತ ಬಾಡಿಗೆ ಪಡೆದುಕೊಂಡಿದ್ದ.
ಆಗ ಬಾಲಕಿಯ ಅಪ್ಪ, ಅಮ್ಮನ ಜತೆ ಒಡನಾಟ ಬೆಳೆಸಿದ್ದ. ನಂತರ ತನ್ನ ಸ್ವಂತ ಮನೆಗೆ ವಾಪಸ್‌ ಹೋದ ಮೇಲೆ ಬಾಲಕಿಯ ಮೇಲೆ ಕೆಟ್ಟ ಕಣ್ಣು ಹಾಕಿದ್ದ ಈತ ಅವರ ಮನೆಗೆ ಆಗಾಗ ಭೇಟಿ ಕೊಡುತ್ತಿದ್ದ. ಬಾಲಕಿ ಕೂಡ ಆತನನ್ನು ಅಂಕಲ್‌ ಅಂಕಲ್‌ ಎಂದು ಮಾತನಾಡಿಸುತ್ತಿದ್ದಳು.
ಇಂದು ಮನೆಗೆ ಮಹೇಶ್‌ ಬಂದಾಗ ಮನೆಯ ಹೊರಗೆ ಬಾಲಕಿ ಆಡುತ್ತಿದ್ದಳು. ಆಕೆಯನ್ನು ಮನೆಯ ಚಾವಣಿ ಮೇಲೆ ಕರೆದುಕೊಂಡು ಹೋಗಿ ಈ ಕಾಮುಕ ಅತ್ಯಾಚಾರ ಎಸಗಿದ್ದಾನೆ. ನಂತರ ಅಲ್ಲಿಂದ ಓಡಿಹೋಗಿದ್ದಾನೆ. ಬಾಲಕಿ ಜೋರಾಗಿ ಅಳಲು ಶುರು ಮಾಡಿದಾಗ ಅಕ್ಕಪಕ್ಕದ ಮನೆಯವರು ನೋಡಿದ್ದಾರೆ. ಈತ ಅಲ್ಲಿಂದ ಓಡಿಹೋಗಿದ್ದನ್ನು ಕಂಡಿದ್ದಾರೆ.
ಕೂಡಲೇ ಬಾಲಕಿಯ ಅಮ್ಮ ಹಾಗೂ ಅಕ್ಕಪಕ್ಕದ ಮನೆಯವರು ಚಾವಣಿ ಮೇಲೆ ಹೋದಾಗ ಬಾಲಕಿಯ ಸ್ಥಿತಿ ಚಿಂತಾಜನಕವಾಗಿತ್ತು. ತಕ್ಷಣವೇ ಬಾಲಕಿಯನ್ನು ಪುರಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಅದಾಗಲೇ ಅವಳ ಖಾಸಗಿ ಅಂಗಕ್ಕೆ ಭಾರಿ ಗಾಯವಾಗಿದ್ದರಿಂದ ಸ್ಥಿತಿ ಚಿಂತಾಜನಕವಾಗಿರುವುದಾಗಿ ವೈದ್ಯರು ಹೇಳಿದ್ದಾರೆ. ಸದ್ಯ ಬಾಲಕಿಯನ್ನು ಕಟಕ್‌ನಲ್ಲಿರುವ ಎಸ್​ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿದೆ. ಪ್ರಕರಣದ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ.
VIDEO: ರಾಷ್ಟ್ರಗೀತೆಗೆ ಅವಮಾನ ಮಾಡಿದ ವಿರಾಟ್‌ ಕೊಹ್ಲಿ- ಜಾಲತಾಣದಲ್ಲಿ ಭಾರಿ ಆಕ್ರೋಶ

ಪತ್ನಿಗೆ ಬುದ್ಧಿ ಕಲಿಸಲು ಹೋಗಿ ಕೋರ್ಟ್‌ನಿಂದ ಭಾರಿ ದಂಡ ಹಾಕಿಸ್ಕೊಂಡ ಪತಿ! ಕಂ, ಕಿಂ ಎಂದರೆ ಆಸ್ತಿ ಜಪ್ತಿ ಮಾಡಲು ಆದೇಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − one =
Remember me
