ಲಖನೌ:ಪಕ್ಕದ ಮನೆಯ ಮಹಿಳೆಯ ಗಂಡ ಊರಿನಲ್ಲಿ ಇಲ್ಲದ ವೇಳೆ ಆಕೆಯ ಮನೆಗೆ ನುಗ್ಗಿದ ಕಿರಾತಕನೊಬ್ಬ ಆ್ಯಸಿಡ್‌ ಎರೆಚಿ, ಚಾಕುವಿನಿಂದ ಇರಿದು ವಿಕೃತಿ ಮೆರೆದಿರುವ ಆತಂಕಕಾರಿ ಘಟನೆ ಉತ್ತರ ಪ್ರದೇಶದ ಸಕ್ರಿ ಗ್ರಾಮದಲ್ಲಿ ನಡೆದಿದೆ.
ಸತೇಂದರ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಪಕ್ಕದ ಮನೆಗೆ ಹೋಗಿರುವ ಈತ ಅಲ್ಲಿ ಮೂರು ಮಕ್ಕಳ ತಾಯಿಯಾಗಿರುವ ಸಂತ್ರಸ್ತೆ ಒಂಟಿಯಾಗಿ ಇರುವುದನ್ನು ನೋಡಿದ್ದಾನೆ. ಆಕೆಗೆ ಲೈಂಗಿಕ ಕ್ರಿಯೆ ಬರುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ಮಹಿಳೆ ಪ್ರತಿರೋಧ ಒಡ್ಡಿದಾಗ ಆ್ಯಸಿಡ್‌ ಸುರಿದು ಹಲ್ಲೆ ಮಾಡಿದ್ದಾನೆ. ಇಷ್ಟು ಸಾಲದು ಎಂಬಂತೆ ಮಹಿಳೆ ಚೀರಾಡುತ್ತಿದ್ದಾಗಲೇ ಚಾಕು ಹಾಕಿ ಇರಿದಿದ್ದಾನೆ.
ಮಹಿಳೆ ಜೋರಾಗಿ ಕಿರುಚಿಕೊಂಡಾಗ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದಾಗ ಆ್ಯಸಿಡ್‌ ಹಾಗೂ ರಕ್ತದಿಂದಾಗಿ ಮಹಿಳೆ ಸಾವುಬದುಕಿನ ನಡುವೆ ಹೋರಾಟ ಮಾಡುತ್ತಿದ್ದರು. ಕೂಡಲೇ ಅವರನ್ನು ಆಸ್ಪತ್ರೆ ದಾಖಲು ಮಾಡಲಾಗಿದೆ.
ಮಹಿಳೆ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಅವರ ಗಂಡ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಹಿಳೆ ಮಕ್ಕಳ ಜತೆ ಒಂಟಿಯಾಗಿ ವಾಸವಿದ್ದಾರೆ. ಇದನ್ನು ನೋಡಿ ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂದಿರುವ ಪೊಲೀಸರು ಆತನ್ನು ಬಂಧಿಸಿದ್ದಾರೆ.
ಪತ್ನಿ, ಪ್ರೇಮಿ ಹಾಗೂ ಶವ…! ಪತಿಯ ಮೃತದೇಹದೊಂದಿಗೆ ಆ ಹತ್ತು ದಿನಗಳು…

ಮಂಡ್ಯದಲ್ಲೊಂದು ಅಚ್ಚರಿ: 5 ವರ್ಷ ಕಗ್ಗಂಟಾಗಿದ್ದ ಸಮಸ್ಯೆಗೆ ತಾಸಿನಲ್ಲೇ ಪರಿಹಾರ ನೀಡಿದ ಬಸವಣ್ಣ

ತಾಯಿಯನ್ನು ಕೊಂದು ಒಲೆಯಲ್ಲೇ ಸುಟ್ಟು ಚಿಕನ್‌ ರೋಸ್ಟ್‌ ಮಾಡಿ ತಿಂದ ಯುವಕ!

ಅಜ್ಜನ ಆಸ್ತಿ ನನಗೆ ಸಿಕ್ಕಿದೆ, ತಂಗಿಯಂದಿರಿಗೂ ಇದರಲ್ಲಿ ಪಾಲು ಇದೆಯೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
