ಬೆಂಗಳೂರು:ಸೇನಾ ಮುಖಂಡ ಬಿಪಿನ್‌ ರಾವತ್‌, ಅವರ ಪತ್ನಿ ಹಾಗೂ 11 ಮಂದಿ ಯೋಧರು ಭೀಕರ ಅಪಘಾತದಲ್ಲಿ ಮೃತಪಟ್ಟ ಬೆನ್ನಲ್ಲೇ ಇವರ ಸಾವಿನ ಬಗ್ಗೆ ಜ್ಯೋತಿಷಿಯೊಬ್ಬರು ಮೊದಲೇ ಮುನ್ಸೂಚನೆ ಕೊಟ್ಟಿರುವುದು ಇದೀಗ ಸುದ್ದಿಯಾಗಿದೆ.
ಅಗ್ರಣಿ ಪಬ್ಲಿಕೇಷನ್ಸ್​ನಿಂದ ಹೊರ ಬರುವ ’ಮಾಡರ್ನ್ ಅಸ್ಟ್ರಾಲಜಿ’ ಎಂಬ ಪ್ರಸಿದ್ಧ ಜ್ಯೋತಿಷ ಮಾಸಪತ್ರಿಕೆಯಲ್ಲಿ ಇದರ ಬಗ್ಗೆ ಪ್ರಕಟವಾಗಿರುವುದು ಕಂಡುಬಂದಿದೆ. ಕಳೆದ ನವೆಂಬರ್‌ ತಿಂಗಳಿನಲ್ಲಿ ಈ ಬಗ್ಗೆ ಮುನ್ಸೂಚನೆ ಕೊಟ್ಟು ಮಾಹಿತಿ ನೀಡಲಾಗಿತ್ತು. ಈ ಪತ್ರಿಕೆಯು ಕಳೆದ ಜನವರಿಯಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದೆ.
ಇದರಲ್ಲಿ ಉಲ್ಲೇಖವಾಗಿರುವ ಅಂಶಗಳಿಗೂ ಇದೇ ಬುಧವಾರ (ಡಿ.8) ಉಂಟಾಗಿರುವ ಭೀಕರ ಅಪಘಾತಕ್ಕೂ ತಾಳೆ ಹಾಕಿದಾಗ, ನಿಜಕ್ಕೂ ಆ ಮಾಹಿತಿ ರಾವತ್‌ ಅವರ ಸಾವಿನ ಬಗ್ಗೆಯಾ ಎಂದು ತಿಳಿಸುವಂತಿದೆ.ಜ್ಯೋತಿಷಿಯಾಗಿರುವ ಗಾಯತ್ರಿ ದೇವಿ ವಾಸುದೇವ್ ಈ ಪತ್ರಿಕೆಯ ಸಂಪಾದಕರು.
ಅವರು ಹೇಳಿದ್ದೇನೆಂದರೆ, ದೇಶದಲ್ಲಿ ಅಪರಾಧ ಪ್ರಕರಣಗಳು ಮತ್ತು ಹಿಂಸೆಗಳು ಹೆಚ್ಚುತ್ತಲೇ ಸಾಗುತ್ತವೆ. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸಂಪುಟದಲ್ಲಿ ಹೈಪ್ರೊಫೈಲ್ ಸಚಿವರ ಭದ್ರತೆ ಹೆಚ್ಚಿಸುವ ಅನಿವಾರ್ಯತೆ ಉಂಟಾಗುತ್ತದೆ. ದೇಶದ ಕನಿಷ್ಠ ಇಬ್ಬರು ಅತಿ ಉಚ್ಚ ನಾಯಕರ ಮೇಲೆ (ಅವರು ಸೇನಾ ಮುಖ್ಯಸ್ಥರೂ ಆಗಿರಬಹುದು) ಹಿಂಸಾ ಪ್ರಯತ್ನ ನಡೆಯುತ್ತದೆ ಎಂದು ಬರೆಯಲಾಗಿದೆ.
ದೇಶದ ಕನಿಷ್ಠ ಇಬ್ಬರು ಅತಿ ಉಚ್ಚ ನಾಯಕರ ಮೇಲೆ (ಅವರು ಸೇನಾ ಮುಖ್ಯಸ್ಥರೂ ಆಗಿರಬಹುದು) ಎಂದು ಬರೆದಿರುವುದು ಈಗ ಭಾರಿ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. ಗಾಯತ್ರಿ ದೇವಿಯವರು ಬರೆದಿರುವ ಪ್ರಕಾರ ಜುಲೈ 25, 2021ರಲ್ಲಿ ಅನುರಾಧ ನಕ್ಷತ್ರದಲ್ಲಿ ಕೇತು ಪ್ರವೇಶ ಮಾಡುತ್ತದೆ. ಅದಾದ ಮೇಲೆ ಸೂರ್ಯ ಗ್ರಹಣ ನಡೆಯುತ್ತದೆ. ಇದಾದ ಕೆಲವೇ ದಿನಗಳಲ್ಲಿ ಡಿಸೆಂಬರ್‌ 14ರ ಆಸುಪಾಸು ಈ ಘಟನೆ ಸಂಭವಿಸುತ್ತದೆ. ಇದನ್ನು ಹೊರತುಪಡಿಸಿದರೆ ಮೇ 26, 2021 ಹಾಗೂ ಡಿಸೆಂಬರ್ 4, 2021ರ ಸಮಯ ಕೂಡ ಬಹಳ ಸೂಕ್ಷ್ಮವಾದದ್ದು ಎಂದಿದ್ದಾರೆ.
ಯಾರು ಈ ಗಾಯತ್ರಿದೇವಿ?ದೇಶ- ವಿದೇಶಗಳಲ್ಲಿ ಭಾರಿ ಪ್ರಖ್ಯಾತರಾಗಿರುವ ಜ್ಯೋತಿಷಿ ಬಿ.ವಿ. ರಾಮನ್ ಅವರ ಪುತ್ರಿ ಗಾಯತ್ರಿ ವಾಸುದೇವ್. ಇವರ ತಂದೆ ಮೂರು ದಶಕಗಳು ಜ್ಯೋತಿಷ ಅಧ್ಯಯನ ಮಾಡಿದ್ದು, ಅದರ ಪ್ರಭಾವದಿಂದ ಗಾಯತ್ರಿ ಅವರೂ ಜ್ಯೋತಿಷದ ಕುರಿತು ತಮ್ಮ ಪತ್ರಿಕೆಯಲ್ಲಿ ಬರೆಯುತ್ತಾರೆ. ತಾವು ಜ್ಯೋತಿಷಿ ಆಗಿದ್ದರೂ ಯಾರಿಗೂ ಭವಿಷ್ಯ ಹೇಳುವುದಿಲ್ಲ, ಬದಲಿಗೆ ಪತ್ರಿಕೆ ನಡೆಸುತ್ತಿದ್ದೇನೆ ಅಷ್ಟೇ ಎಂದಿದ್ದಾರೆ ಗಾಯತ್ರಿ. ಅಂದಹಾಗೆ ಈ ಪತ್ರಿಕೆ ಕೂಡ ಹೊರಬರುತ್ತಿರುವುದು ಬೆಂಗಳೂರಿನಿಂದಲೇ.

ನೀರು ಬೇಕು ಎಂದರು… ಕೊಡಲು ಆಗ್ಲೇ ಇಲ್ಲ ಸರ್‌.. ಇಷ್ಟು ದೊಡ್ಡ ವ್ಯಕ್ತಿ ಎಂದು ಆಮೇಲೆ ಗೊತ್ತಾಯ್ತು… ಪ್ರತ್ಯಕ್ಷದರ್ಶಿಯ ಕಣ್ಣೀರು

ರಾವತ್‌ ಜೀವಕ್ಕೆ ಕುತ್ತಾಗೋಯ್ತಾ ಕೊನೆಕ್ಷಣದ ಆ ನಿರ್ಧಾರ? ರಸ್ತೆ ಮಾರ್ಗಕ್ಕೆ ವ್ಯವಸ್ಥೆಯಾಗಿದ್ದಾಗ ಹೆಲಿಕಾಪ್ಟರ್‌ ಏರಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + twenty =
Remember me
