ನವದೆಹಲಿ:ಭಾರತ ಕಂಡ ಅಪರೂಪದ ರಾಜಕಾರಣಿ, ಅತಾಜಶತ್ರು ಎಂದೇ ಪ್ರಸಿದ್ಧಿ ಪಡೆದಿದ್ದ ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿಯವರ 3 ನೇ ವರ್ಷದ ಪುಣ್ಯತಿಥಿ ಇಂದು. ಇದರ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಉಪಾ ರಾಷ್ಟ್ರಪತಿ ಜಗದೀಪ್ ಧಂಖರ್, ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ದೆಹಲಿಯಲ್ಲಿರುವ ‘ಸದೈವ್ ಅಟಲ್’ ಗೆ ಭೇಟಿ ನೀಡಿ ಗೌರವ ಸಲ್ಲಿಸಿದರು.
ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ, ರಾಜ್ಯಸಭೆಯ ಸಭಾನಾಯಕ ಪಿಯೂಷ್ ಗೋಯಲ್ ಅವರೂ ವಾಜಪೇಯಿ ಅವರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ವಾಜಪೇಯಿಯವರು ಆಗಸ್ಟ್ 16, 2018 ರಂದು ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ಇವರ ಸ್ಮರಣಾರ್ಥ ಸದೈವ್ ಅಟಲ್ ಸ್ಮಾರಕವನ್ನು ನಿರ್ಮಿಸಲಾಗಿದೆ. 1998 ರಿಂದ 2004ರ ಅವಧಿಯಲ್ಲಿ ಆರು ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಮಹಾನಾಯಕ ವಾಜಪೇಯಿ 2015 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ನೀಡಿ ಗೌರವಿಸಲಾಗಿದೆ.
ಬಿಜೆಪಿ ವಾಜಪೇಯಿ ಅವರು 1996ರಲ್ಲಿ ಕೇವಲ 13 ದಿನ ದೇಶದ ಪ್ರಧಾನಿಯಾಗಿದ್ದರು. 1998 ರಿಂದ 1999ರ ಅವಧಿಯಲ್ಲಿ 13 ತಿಂಗಳು ಪ್ರಧಾನಿ ಆಗಿದ್ದರು. ನಂತರ 1999 ರಿಂದ 2004ರ ಅವಧಿಯಲ್ಲಿ ಪೂರ್ಣ ಪ್ರಮಾಣದ ಪ್ರಧಾನಿಯಾಗಿ ಮತ್ತೊಮ್ಮೆ ಆಯ್ಕೆಯಾಗಿದ್ದರು. ಇವರು ಕೇವಲ ರಾಜಕೀಯ ನಾಯಕ ಮಾತ್ರವಲ್ಲ, ಶ್ರೇಷ್ಠ ಕವಿ ಹಾಗೂ ವಾಗ್ಮಿ ಕೂಡ. 1924ರ ಡಿಸೆಂಬರ್ 25 ರಂದು ಇವರ ಹುಟ್ಟುಹಬ್ಬವಾಗಿದ್ದು, ಪ್ರತಿ ವರ್ಷ ಈ ದಿನವನ್ನು ಕೇಂದ್ರ ಸರ್ಕಾರ ಗುಡ್‌ ಗವರ್ನೆನ್ಸ್‌ ಡೇ ಎಂದು ಆಚರಿಸಲಾಗುತ್ತಿದೆ.
ಇಂಥ ಅಪಾರ ಗುಣಗಳುಳ್ಳ ವಾಜಪೇಯಿಯವರ ಪುಣ್ಯತಿಥಿ ಹಾಗೂ ನಮ್ಮ ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಅವರ ಹಳೆಯ ವಿಡಿಯೋ ಇದೀಗ ವೈರಲ್​ ಆಗುತ್ತಿದೆ. ಅದೇನೆಂದರೆ:ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಎಷ್ಟೋ ಕನಸು ನನಸಾಗುವುದು ಇಂದಿಗೂ ಬಾಕಿ ಇದೆ. ಸ್ವಾತಂತ್ರ್ಯಕ್ಕಾಗಿ ಅದೆಷ್ಟೋ ಮಂದಿ ಪ್ರಾಣ ತ್ಯಾಗ ಮಾಡಿದರೂ, ಇಂದಿಗೂ ಹಲವು ಕಡೆಗಳಲ್ಲಿ ಸ್ವಾತಂತ್ರ್ಯವೇ ಸಿಗಲಿಲ್ಲ. ಹೀಗಿರುವಾಗ ನಾನು ಸ್ವಾತಂತ್ರವನ್ನು ಹೇಗೆ ಸಂಭ್ರಮಿಸಲಿ ಎಂದು ಕವಿತೆಯ ಮೂಲಕ ಪ್ರಶ್ನಿಸಿದ್ದ ವಾಜಪೇಯಿ ಅವರು ಕಂಡ ಕನಸು ಒಂದೇ ಅದು ಅಖಂಡ ಭಾರತ.
ಜಮ್ಮು-ಕಾಶ್ಮೀರದ ಕುರಿತು ಈ ಕವನದಲ್ಲಿ ಪ್ರಸ್ತಾಪಿಸಿದ್ದ ವಾಜಪೇಯಿ ಅವರು, ಭಾರತ ಇನ್ನೂ ಒಂದಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಆದರೆ ಅವರು ಈ ಕವಿತೆಯಲ್ಲಿ ನುಡಿದಿದ್ದ ಭವಿಷ್ಯ ಎಂದರೆ, ಆ ದಿನ ದೂರವೇ ಇಲ್ಲ, ಖಂಡತುಂಡವಾಗಿರುವ ಈ ಭಾರತ ಶೀಘ್ರದಲ್ಲಿಯೇ ಅಖಂಡವಾಗಲಿದೆ, ಅಲ್ಲಿಯೂ ಭಾರತದ ಧ್ವಜ ಹಾರಲಿದೆ ಎಂದಿದ್ದರು. ಇಂದು ಜಮ್ಮು ಮತ್ತು ಕಾಶ್ಮೀರವೂ ಭಾರತಕ್ಕೆ ಸೇರಿ ಅಲ್ಲಿಯೂ ರಾಷ್ಟ್ರಧ್ವಜ ಹಾರಾಟ ಮಾಡಿದೆ. ಅಲ್ಲಿನ ಯುವಸಮುದಾಯವು ಉಗ್ರರ ಬೆದರಿಕೆಯ ನಡುವೆಯೇ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ. ಆದ್ದರಿಂದ ವಾಜಪೇಯಿ ಅವರ ಕನಸು ನನಸಾಗಿದೆ ಎನ್ನುವ ಮೂಲಕ ಈ ವಿಡಿಯೋ ವೈರಲ್​ ಆಗುತ್ತಿದೆ.
ನೀವೂ ಕೇಳಿ ಈ ವಿಡಿಯೋ (ಕೃಪೆ ಜೆಕೆ ನೌ)
ಭಾರತ ಕಂಡ ಅಪರೂಪದ ರಾಜಕಾರಣಿ, ಅತಾಜಶತ್ರು ಎಂದೇ ಪ್ರಸಿದ್ಧಿ ಪಡೆದಿದ್ದ ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿಯವರ ಪುಣ್ಯತಿಥಿ ಇಂದು. ಅಖಂಡ ಭಾರತದ ಕುರಿತು ಅವರು ಕಂಡ ಕನಸಿನ ಕವಿತೆಯ ವಿಡಿಯೋ ವೈರಲ್pic.twitter.com/hL1Pru8aGi
— Vijayavani (@VVani4U)August 16, 2022

VIDEO: ತ್ರಿವರ್ಣ ಧ್ವಜ ಹಾರಿಸಿದರೆ ಸಾಯಿಸುವುದಾಗಿ ಘೋಷಿಸಿದ್ದ ಶ್ರೀನಗರದ ಲಾಲ್ ಚೌಕ್‌ನಲ್ಲಿ ಮೊಳಗಿತು ವಂದೇ ಮಾತರಂ…

ಪಾಕ್​ನಲ್ಲಿ ಭಾರತದ ಜೈಜೈಕಾರ: ಮೋದಿಯನ್ನು ಹಾಡಿ ಹೊಗಳಿದ ಮಾಜಿ ಪಿಎಂ ಇಮ್ರಾನ್​, ಖ್ಯಾತ ಪತ್ರಕರ್ತ!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:5 × two =
Remember me
