ನವದೆಹಲಿ:ಸ್ವದೇಶಿ ವಸ್ತುಗಳ ಮೇಲೆ ಅವಲಂಬನೆ ಹೆಚ್ಚಿಸಿ ವಿದೇಶಿ ವಸ್ತುಗಳಿಗೆ ಗುಡ್​ಬೈ ಹೇಳಿ ಎನ್ನುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಶುರುಮಾಡಿರುವ “ಆತ್ಮನಿರ್ಭರ್​ ಭಾರತ್”​ ಇದೀಗ ಬಹು ಬಳಕೆಯಲ್ಲಿರುವ ಪದ. ಸ್ವಾವಲಂಬನೆ ಎಂದು ಅರ್ಥಕೊಡುವ ಈ ಶಬ್ದವೀಗ 2020ನೇ ಸಾಲಿನ ‘ಹಿಂದಿ ಪದ’ ಎಂಬುದಾಗಿ ‘ಆಕ್ಸ್‌ಫರ್ಡ್‌ ಘೋಷಿಸಿದೆ.’
ಕೋವಿಡ್‌ ಪಿಡುಗಿನ ವಿರುದ್ಧ ಕೋಟ್ಯಂತರ ಭಾರತೀಯರು ನಿತ್ಯವೂ ಹೋರಾಡಿ, ಜಯ ಸಾಧಿಸಿ, ಈ ಶಬ್ದವನ್ನು ಜನಮಾನಸದಲ್ಲಿ ಕಾಯಂ ಆಗುವಂತೆ ಮಾಡಿದ್ದಾರೆ ಎಂದು ‘ಆಕ್ಸ್‌ಫರ್ಡ್‌ ಲ್ಯಾಂಗ್ವೇಜಸ್‌’ ಹೇಳಿದೆ. ಆದ್ದರಿಂದ ಹಿಂದಿ ನಿಘಂಟಿನಲ್ಲಿ ಈ ಪದವನ್ನು ವರ್ಷದ ಪದ ಎಂದು ಆಯ್ಕೆ ಮಾಡಲಾಗಿದೆ.
ಆತ್ಮನಿರ್ಭರತಾಕ್ಕೆ ಇಂಗ್ಲೀಷಿನಲ್ಲಿ Self-Reliant, Self-Sufficient ಎಂಬ ಅರ್ಥವಿದೆ. ಕನ್ನಡದಲ್ಲಿ ಹೇಳುವುದಾದರೆ ಸ್ವಾಭಿಮಾನ, ಸ್ವಾವಲಂಬನೆ. ಈ ಶಬ್ದದ ಆಳಕ್ಕೆ ಹೋದರೆ ‘ನಮ್ಮ ಅಧೀನದಲ್ಲಿದ್ದರೆ ಸುಖ ಮತ್ತು ಪರರ ಅಧೀನದಲ್ಲಿದ್ದರೆ ದುಃಖ’ ಎಂಬ ಅರ್ಥವೂ ಇದೆ. ಅಷ್ಟೇ ಅಲ್ಲ, ‘ನನ್ನ ಆತ್ಮಕ್ಕೂ ಹೊರೆ ಎನಿಸದಂತೆ’ ಮತ್ತು ‘ನಮಗೇ ನಾವು ಹೊರೆ ಆಗದಂತೆ’ ಎಂಬ ಅರ್ಥವೂ ಇದೆ ಎಂದು ವ್ಯಾಖ್ಯಾನಿಸಲಾಗಿದೆ.
ಪ್ರಧಾನಮಂತ್ರಿಯವರ ಭಾಷಣವನ್ನು ಅನುಸರಿಸಿ ‘ಆತ್ಮನಿರ್ಭರತಾ’ ಬಳಕೆಯಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ. ಆದ್ದರಿಂದ ಈ ಪದವನ್ನು ಭಾರತದ ಸಾರ್ವಜನಿಕ ನಿಘಂಟಿನಲ್ಲಿ ಒಂದು ನುಡಿಗಟ್ಟು ಮತ್ತು ಪರಿಕಲ್ಪನೆಯಾಗಿ ಬಳಸುವ ಮೂಲಕ ಈ ಪದದ ಪ್ರಾಮುಖ್ಯವನ್ನು ಇನ್ನಷ್ಟು ಎತ್ತಿಹಿಡಿಯಲಾಗುವುದು ಎಂದು ಅದು ಹೇಳಿದೆ.
‘ಆಕ್ಸ್‌ಫರ್ಡ್‌ ಲ್ಯಾಂಗ್ವೇಜಸ್‌’ ವಿಶ್ವದ ವಿವಿಧ ಭಾಷೆಗಳ ಕುರಿತ ಮಾಹಿತಿಯನ್ನು ಸಂಗ್ರಹಿಸಿ, ಪ್ರಚುರಪಡಿಸುವ ಸಂಸ್ಥೆ. ಭಾಷಾತಜ್ಞರಾದ ಕೃತ್ತಿಕಾ ಅಗರ್‌ವಾಲ್‌, ಪೂನಂ ನಿಗಮ್‌ ಸಹಾಯ್‌ ಹಾಗೂ ಇಮೋಜೆನ್‌ ಫಾಕ್ಸ್‌ವೆಲ್‌ ಅವರನ್ನೊಳಗೊಂಡ ಸಲಹಾ ಸಮಿತಿ ಈ ಪದವನ್ನು ಆಯ್ಕೆ ಮಾಡಿದೆ.
ಈ ಹಿಂದಿನ ವರ್ಷಗಳಲ್ಲಿ ಆಧಾರ್‌ (2017), ನಾರಿಶಕ್ತಿ (2018) ಹಾಗೂ ಸಂವಿಧಾನ (2019) ಪದಗಳನ್ನು ಈ ಸಂಸ್ಥೆ ವರ್ಷದ ಹಿಂದಿ ಪದಗಳು ಎಂದು ಗುರುತಿಸಿತ್ತು.
ಹೊಟ್ಟೆತುಂಬಾ ಉಂಡು ಕೂಲ್​ ಕೂಲ್​ ಆಗ್ರಪ್ಪಾ… ಸಿಎಂ ಮನೆಯಲ್ಲಿ ಕುತೂಹಲ ತಂದ ಡಿನ್ನರ್​ ಪಾರ್ಟಿ

https://www.vijayavani.net/s-nyayadevate-nanna-sahi-illade/
ರಿಮೋಟ್​ ಕಂಟ್ರೋಲ್​​ ಸಹಾಯದಿಂದ ನಿದ್ರಿಸುತ್ತಾಳೀಕೆ! 14 ವರ್ಷ ನಿದ್ದೆಗೆಟ್ಟವಳ ವಿಚಿತ್ರ ಕೇಸಿದು…

ಮದುವೆಯಾಗಿ ಮೂರು ವರ್ಷಕ್ಕೇ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕಳೆದುಕೊಂಡಿರುವೆ- ಪರಿಹಾರ ಹೇಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 9 =
Remember me
