ಫ್ರಾನ್ಸ್​:ಫ್ರಾನ್ಸ್​ನ ನೈಸ್​ನಲ್ಲಿರುವ ಚರ್ಚ್​ನಲ್ಲಿ ಇಂದು ದುಷ್ಕರ್ಮಿಗಳು ದಾಳಿ ನಡೆಸಿ, ಮೂವರನ್ನು ಹತ್ಯೆ ಮಾಡಿದ್ದಾರೆ. ಅವರಲ್ಲಿ ಒಬ್ಬ ಮಹಿಳೆಯ ತಲೆಯನ್ನು ಕತ್ತರಿಸಿದ್ದಾರೆ.
ನಗರದ ನೊಟ್ರೆ ಡೇಮ್ ಚರ್ಚ್​ನಲ್ಲಿ ಈ ಘಟನೆ ನಡೆದಿದೆ. ಇದು ಜನರಲ್ಲಿ ಭೀತಿ ಹುಟ್ಟಿಸಲು ಭಯೋತ್ಪಾದಕರು ನಡೆಸಿರುವ ಕೃತ್ಯ ಎಂದು ಮೇಯರ್​ ಕ್ರಿಸ್ಟಿಯನ್ ಎಸ್ಟ್ರೋಸಿ ಹೇಳಿದ್ದಾರೆ. ಇಂದು ಬೆಳಗ್ಗೆ ಚರ್ಚ್​ಗೆ ನುಗ್ಗಿದ ಗುಂಪೊಂದು ದಾಳಿ ನಡೆಸಿತ್ತು. ಅವರಲ್ಲಿ ಒಬ್ಬ ಚಾಕುವಿನಿಂದ ಮಹಿಳೆಯ ತಲೆ ಕತ್ತರಿಸಿದ್ದ. ಬಳಿಕ ಚರ್ಚ್​ನ ಇನ್ನಿಬ್ಬರನ್ನು ಕೂಡ ಕೊಲೆ ಮಾಡಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಉಗ್ರರು ಈ ಕೃತ್ಯ ಎಸಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಡ್ರಗ್ಸ್​ ಕೇಸ್​: ಮಾಜಿ ಗೃಹ ಸಚಿವ ಬಾಲಕೃಷ್ಣನ್​ ಪುತ್ರ ಅರೆಸ್ಟ್​
ದಾಳಿ ಕುರಿತು ತನಿಖೆ ನಡೆಸುವಂತೆ ಫ್ರಾನ್ಸ್ ಭಯೋತ್ಪಾದಕ ನಿಗ್ರಹ ಪ್ರಾಸಿಕ್ಯೂಟರ್ ಡಿಪಾರ್ಟ್ ಮೆಂಟ್ ತಿಳಿಸಿದೆ. ಚರ್ಚ್ ಸುತ್ತಮುತ್ತ ಅತ್ಯಾಧುನಿಕ ಶಸ್ತ್ರಸಜ್ಜಿತ ಪೊಲೀಸರನ್ನು ನಿಯೋಜಿಸಲಾಗಿದೆ.
ಚರ್ಚ್​ನಲ್ಲಿ ದಾಳಿ ಮಾಡಿದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದಿಲ್ಲ. ಹಲವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಮೇಯರ್ ಕ್ರಿಸ್ಟಿಯನ್ ಎಸ್ಟ್ರೋಸಿ ಹೇಳಿದ್ದಾರೆ.
ಇದೇ ತಿಂಗಳ ಆರಂಭದಲ್ಲಿ ಶಾಲಾ ಶಿಕ್ಷಕಿಯೊಬ್ಬರ ತಲೆಯನ್ನು ತುಂಡರಿಸಿ ಇಲ್ಲಿಯೇ ಹತ್ಯೆ ಮಾಡಲಾಗಿತ್ತು.. ಆ ಆಘಾತವನ್ನು ಮರೆಯುವ ಮೊದಲೇ ಮತ್ತೋರ್ವ ಮಹಿಳೆಯ ತಲೆ ಕತ್ತರಿಸಿ, ಕೊಲೆ ಮಾಡಲಾಗಿದೆ.
ಕೆ.ಕಲ್ಯಾಣ್​ ಕುಟುಂಬದಲ್ಲಿ ಹುಳಿ ಹಿಂಡಿದ್ದ ಗಂಗಾ ಕುಲಕರ್ಣಿ ಡೆತ್​ನೋಟ್​ ಪತ್ತೆ

ಪರವಾನಗಿ ಇಲ್ಲದೇ ಮನೆಯಲ್ಲಿ ತಯಾರಿಸಿದ ಆಹಾರ ಮಾರಿದರೆ 5 ಲಕ್ಷ ದಂಡ, ಶಿಕ್ಷೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:15 + eight =
Remember me
