ಬಿಹಾರ:ಪತ್ರಕರ್ತರು ಕೆಲವೊಂದು ಘಟನೆಗಳ ವರದಿ ಮಾಡಲು ಹೋದ ಸಂದರ್ಭದಲ್ಲಿ ಅವರ ಮೇಲೆ ದುಷ್ಕರ್ಮಿಗಳು ದಾಳಿ ಮಾಡುವುದು ಹೊಸ ವಿಷಯವಲ್ಲ.
ಇದಾಗಲೇ ಹಲವಾರು ಇಂಥ ಘಟನೆಗಳು ನಡೆದಿವೆ. ಅದರಲ್ಲಿಯೂ ಪ್ರತಿಭಟನೆ, ದಾಂಧಲೆ ಇಂಥ ಸಂದರ್ಭಗಳಲ್ಲಿ ಸುದ್ದಿಯನ್ನು ಕವರ್​ ಮಾಡಲು ಹೋಗುವ ಮಾಧ್ಯಮದವರ ಮೇಲೆ ಇದಾಗಲೇ ಹಲವಾರು ಬಾರಿ ದಾಳಿ ನಡೆದಿವೆ, ಹಲ್ಲೆಯಾಗಿವೆ, ಕ್ಯಾಮೆರಾಗಳನ್ನು ಪುಡಿಪುಡಿ ಮಾಡಿರುವ ಘಟನೆಗಳೂ ನಡೆದಿವೆ.
पत्रकारिता मर रही है , पत्रकार मारे जा रहे हैं।न्यूज़ चैनलों में रिपोर्टर/कैमरामैन के नाम पर गुंडे भरे जा रहे हैं।#FirstBiharके रिपोर्टर#AbhishekMishraका आरोप है कि पटना के JDU दफ़्तर में#TimesNowके कैमरामैन ने इन्हें बहुत मारा।pic.twitter.com/Hs0GzJH0P0
— Vinod Kapri (@vinodkapri)September 27, 2020

ಆದರೆ ಬಿಹಾರದಲ್ಲಿ ನಡೆದಿರುವ ಈ ಘಟನೆ ಆಘಾತವನ್ನುಂಟುಮಾಡಿದೆ. ಅದೇನೆಂದರೆ ಇಂಗ್ಲಿಷ್​ ಚಾನೆಲ್​ ಒಂದರ ಕ್ಯಾಮೆರಾಮನ್​ ಬಿಹಾರದ ಸ್ಥಳೀಯ ಚಾನೆಲ್​ ‘ಫಸ್ಟ್​ ಬಿಹಾರ್​ ಚಾನೆಲ್​’ ಪತ್ರಕರ್ತನ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಭಾರಿ ನೋವು, ಆಘಾತ, ದುಃಖದಿಂದ ಟ್ವಿಟರ್​ನಲ್ಲಿ ಈ ಮಾಹಿತಿಯನ್ನು ವಿನೋದ್​ ಕಪ್ರಿ ಎನ್ನುವ ಪತ್ರಕರ್ತ ತೋಡಿಕೊಂಡಿದ್ದಾರೆ. ಜೋರಾಗಿ ಕಣ್ಣೀರು ಹಾಕಿರುವ ಈ ಪತ್ರಕರ್ತ ತನಗಾಗಿರುವ ಅನ್ಯಾಯವನ್ನು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯೊಂದರಲ್ಲಿ ತಾವು ಪಾಲ್ಗೊಂಡಿದ್ದ ಸಂದರ್ಭದಲ್ಲಿ ಈ ಕ್ಯಾಮೆರಾಮನ್​ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ. ಕಾಲಿನಿಂದ ನನಗೆ ಒದ್ದಿದ್ದಾನೆ, ತಲೆಯ ಮೇಲೆ, ಹೊಟ್ಟೆಯ ಮೇಲೆ, ಮುಖದ ಮೇಲೆ ಒದ್ದಿದ್ದಾನೆ ಎಂದು ದುಃಖ ತೋಡಿಕೊಂಡಿದ್ದಾರೆ.
ಕೆಲವು ನ್ಯೂಸ್​ ಚಾನೆಲ್​ಗಳು ಪತ್ರಕರ್ತರನ್ನು ಬಿಟ್ಟು ಗೂಂಡಾಗಳನ್ನು ನೇಮಕ ಮಾಡಿಕೊಳ್ಳುತ್ತಿವೆಯೇ ಎಂದು ಪ್ರಶ್ನಿಸಿರುವ ಇವರು, ಇಂಥ ಪರಿಸ್ಥಿತಿಯಲ್ಲಿ ನಾನು ಬದುಕಲು ಸಾಧ್ಯವಿಲ್ಲ. ಇಂಥ ಗೂಂಡಾಗಳ ನಡುವೆ ನನಗೆ ಕೆಲಸ ನನ್ನ ಹುದ್ದೆಗೆ ರಾಜೀನಾಮೆ ಕೊಡುತ್ತಿದ್ದೇನೆ ಎಂದು ನೋವು ತೋಡಿಕೊಂಡಿದ್ದಾರೆ.
ಅರೆ ಇದೆಂಥ ಆಘಾತ! ಕರ್ನಾಟಕಕ್ಕೂ ಕಾಲಿಟ್ಟುಬಿಟ್ಟಿದೆ ಹೊಸ ಚೀನಿ ವೈರಸ್​- ಇಬ್ಬರಲ್ಲಿ ಪತ್ತೆ!

ಮಂಗಳ ಗ್ರಹದಲ್ಲಿಯೂ ಕಟ್ಟಬಹುದು ಮನೆ! ಪತ್ತೆಯಾಗಿವೆ ಮೂರು ಸರೋವರ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:18 − 17 =
Remember me
