ಹನುಮಾನ್‌ಗಢ (ರಾಜಸ್ಥಾನ):ವಸ್ತುಗಳನ್ನು, ಅಂಗಡಿಗಳನ್ನು ಹರಾಜು ಮಾಡುವುದು ದೊಡ್ಡ ವಿಷಯವೇನಲ್ಲ. ಕೆಲವೊಮ್ಮೆ ಅಚ್ಚರಿ ಎನ್ನುವಂಥ ದರದಲ್ಲಿ ಅವುಗಳು ಹರಾಜು ಆಗುವುದೂ ಇದೆ. ಅದರಲ್ಲಿಯೂ ದೇವರ ಸನ್ನಿಧಿಯಲ್ಲಿ ಇಟ್ಟಿರುವ ವಸ್ತುಗಳು 2-3 ಪಟ್ಟೆ ಹೆಚ್ಚಿಗೆ ಹಣಕ್ಕೆ ಹರಾಜಾಗುವುದು ಹೊಸ ವಿಷಯವೆನಲ್ಲ.ಆದರೆ ಅಚ್ಚರಿಯೆಂದರೆ, ಇಲ್ಲೊಂದು ಮದ್ಯದಂಗಡಿ ಮಾಲೀಕರೇ ಶಾಕ್​ ಆಗುವಷ್ಟು ಹೆಚ್ಚುವರಿ ದರದಲ್ಲಿ ಹರಾಜು ಆಗಿದೆ.
ಅಂಥದ್ದೊಂದು ಅಚ್ಚರಿ ನಡೆದಿರುವುದು ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ನೋಹಾರ್​ ಎಂಬ ಗ್ರಾಮದ ಮದ್ಯದ ಅಂಗಡಿಯೊಂದು 510 ಕೋಟಿ ರೂ. ಗೆ ಹರಾಜಾಗಿದೆ ಎಂದರೆ ನಂಬುವಿರಾ? ನಂಬಲೇಬೇಕು. ಅಷ್ಟೇ ಏಕೆ? ಇದರ ಹರಾಜು ಆಗುತ್ತಿದೆ ಎಂದು ತಿಳಿದಾಗ ನಸುಕಿನಿಂದಲೇ ಬಿಡ್​ ಶುರುವಾಗಿ ಮುಗಿದದ್ದು ಮಾರನೆಯ ದಿನವಂತೆ!
ಈ ಅಂಗಡಿಯ ಮೂಲ ಬೆಲೆ 72 ಲಕ್ಷ ರೂಪಾಯಿ ಇದ್ದು, 510 ಕೋಟಿ ರೂಪಾಯಿಗೆ ಮಾರಾಟವಾಗಿದೆ.
ಅಷ್ಟಕ್ಕೂ ಅದೇನಪ್ಪ ಇದರ ವಿಶೇಷತೆ ಎಂದರೆ ಎಲ್ಲರೂ ಹೇಳುತ್ತಾರೆ ಏನೂ ಇಲ್ಲ. ಆದರೆ ಈ ಗ್ರಾಮದಲ್ಲಿ ಇರುವ ಅತ್ಯಂತ ಫೇಮಸ್​ ಮದ್ಯದಂಗಡಿ ಇದು. ಇಲ್ಲಿ ಎಲ್ಲಾ ವೆರೈಟಿಯ ಮದ್ಯಗಳು ಸಿಗುತ್ತವೆ ಎನ್ನುವುದು ಅವರ ಮಾತು.
ಬೆಳಗ್ಗೆ 72 ಲಕ್ಷ ರೂ.ಗಳಿಂದ ಪ್ರಾರಂಭವಾದ ಬಿಡ್ಡಿಂಗ್ ಮುಂದುವರಿಯುತ್ತಲೇ ಇತ್ತು. ಬಿಡ್‌ದಾರರು ಆ ಲಿಕ್ಕರ್‌ ಶಾಪ್‌ಗೆ ಹೆಚ್ಚು ಬೆಲೆಯನ್ನು ಉಲ್ಲೇಖಿಸುತ್ತಲೇ ಇದ್ದರು. ಇಡೀ ದಿನ ಮುಂದುವರಿದ ಬಿಡ್ಡಿಂಗ್, ಮಧ್ಯರಾತ್ರಿಯೂ ನಡೆದು ಮುಂಜಾನೆ 2 ಗಂಟೆಗೆ ಅಂತ್ಯಗೊಂಡಿದೆ.
ರಾಜಸ್ಥಾನದಲ್ಲಿ ಮದ್ಯದಂಗಡಿಗಳ ಹರಾಜು ಹೊಸ ಪರಿಕಲ್ಪನೆಯಲ್ಲ. ಇತ್ತೀಚೆಗೆ, ರಾಜ್ಯದಲ್ಲಿ ಇ-ಹರಾಜನ್ನು ಪುನಾರಂಭಿಸಲಾಗಿದೆ. ಅಂತಹ 7,000 ಕ್ಕೂ ಹೆಚ್ಚು ಅಂಗಡಿಗಳನ್ನು ಇದೇ ರೀತಿ ಹರಾಜು ಹಾಕಲಾಗುತ್ತದೆ. ವಸುಂಧರಾ ರಾಜೆ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ವ್ಯವಸ್ಥೆಯನ್ನು ರದ್ದುಗೊಳಿಸಿದ್ದರು. ನಂತರ ಅಶೋಕ್‌ ಗೆಹ್ಲೋಟ್‌ ಮುಖ್ಯಮಂತ್ರಿಯಾದ ನಂತರ ಬಿಡ್ಡಿಂಗ್ ಪುನಃ ಪ್ರಾರಂಭವಾಗಿದೆ. ಕಿರಣ್ ಕನ್ವರ್ ಎನ್ನುವವರು 510 ಕೋಟಿ ಕೊಟ್ಟು ಖರೀದಿ ಮಾಡಿದ್ದಾರೆ.ಇದಕ್ಕೆ ಮಾಲೀಕರು ಮಾತ್ರವಲ್ಲದೇ ಅಬಕಾರಿ ಇಲಾಖೆಯ ಅಧಿಕಾರಿಗಳೇ ಅಚ್ಚರಿಪಟ್ಟರಂತೆ.
ಸಮುದ್ರದಲ್ಲಿ ತೇಲಿ ಬಂತು ಫುಲ್​ ಬಾಟಲ್​- ವಿದೇಶಿ ಮದ್ಯ ಎಂದು ಕುಡಿದ ಮೀನುಗಾರರು- ಮುಂದಾದದ್ದು ದುರಂತ!

ಪತಿ ಒಳ್ಳೆಯವರು, ಆದ್ರೆ ಸೆಕ್ಸ್‌ನಲ್ಲಿ ಇಂಟರೆಸ್ಟೇ ಇಲ್ಲ, ಕೌನ್ಸೆಲಿಂಗ್‌ಗೂ ಬರಲ್ಲ- ಡಿವೋರ್ಸ್‌ ಪಡೀಬಹುದಾ?

VIDEO: ನನ್ನನ್ನು ಕೊಂದುಬಿಡಿ… ಪ್ಲೀಸ್​ ಮಕ್ಕಳನ್ನು ಬಿಟ್ಟುಬಿಡಿ- ಮಂಡಿಯೂರಿ ಕುಳಿತ ಸಿಸ್ಟರ್​!

ಕ್ರೀಡಾ ಪ್ರಾಧಿಕಾರದಲ್ಲಿ ಕನ್ಸಲ್ಟಂಟ್ ಹುದ್ದೆ- ₹1 ಲಕ್ಷದವರೆಗೆ ವೇತನ- 55 ವರ್ಷದವರೆಗೂ ಆದ್ಯತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − three =
Remember me
