ಖೂಂಟಿ (ಛತ್ತೀಸಗಢ):ಚಿಕ್ಕಮ್ಮನ ಜತೆಗೇ ಅನೈತಿಕ ಸಂಬಂಧ ಹೊಂದಿ, ನಂತರ ಮದುವೆಯಾದರೂ ಈ ಸಂಬಂಧ ಮುಂದುವರೆಸಲು ಹೋದ ಯುವಕನೊಬ್ಬ ನಂತರ ಕೊಲೆಯಾಗಿರುವ ವಿಚಿತ್ರ ಘಟನೆ ಛತ್ತೀಸಗಢದ ಜಸ್ಪುರ ಜಿಲ್ಲೆಯ ಖೂಂಟಿಯಲ್ಲಿ ನಡೆದಿದೆ.
ಕೊಲೆಯಾದ ಯುವಕ ಸ್ಥಳೀಯ ಪತ್ರಕರ್ತರೊಬ್ಬರ ಮಗ. 28 ವರ್ಷದ ಸಂಕೇತ್‌ ಮಿಶ್ರಾ ಎಂಬ ಈ ಯುವಕ ತನ್ನ ಆಂಟಿಯ ಜತೆ ಅನೈತಿಕ ಸಂಬಂಧ ಹೊಂದಿದ್ದ. ಹಲವು ವರ್ಷ ಇವರ ಈ ಸಂಬಂಧ ಹೀಗೆಯೇ ಮುಂದುವರೆದಿತ್ತು. ನಂತರ ಯುವಕನ ಮದುವೆ ಬೇರೊಬ್ಬಳ ಜತೆ ನೆರವೇರಿತು. ತನ್ನ ಮದುವೆಯಾಗುತ್ತಿದ್ದಂತೆಯೇ ಆಂಟಿಯ ಜತೆ ದೂರವಾದ ಸಂಕೇತ್‌.
ಯುವಕ ದೂರವಾಗುತ್ತಿದ್ದಂತೆಯೇ, ಈ ಆಂಟಿ ತನ್ನ ಚಾಲಕ ಬಿರ್ಸಾ ಮುಂಡಾ ಎಂಬಾತನ ಜತೆ ಸಂಪರ್ಕ ಸಾಧಿಸಿದಳು. ಚಾಲಕನ ಜತೆ ಈಕೆಯ ಅನೈತಿಕ ಸಂಬಂಧ ಮುಂದುವರೆಯಿತು.
ಮದುವೆಯಾಗಿ ಹೆಂಡತಿಯ ಜತೆ ಸಂಸಾರ ಮಾಡುತ್ತಿದ್ದ ಸಂಕೇತ್‌ಗೆ ಇದು ಸಹಿಸಲು ಅಗಲಿಲ್ಲ. ಆಂಟಿ ಹಾಗೂ ಚಾಲಕನ ಮೇಲೆ ಕೋಪ ಉಕ್ಕಿತು. ಸೀದಾ ಆಂಟಿಯ ಮನೆಗೆ ಹೋಗಿ ಕಾಲುಗೆದರಿ ಜಗಳಕ್ಕೆ ನಿಂತಿದ್ದಾನೆ. ಸಾಲದು ಎಂಬುದಕ್ಕೆ ನಾನು ಇರುವಾಗ ನೀನು ಬೇರೊಬ್ಬನ ಜತೆ ಹೇಗೆ ಇರುತ್ತಿ ಎಂದು ನೋಡುವೆ ಎಂದು ಅವಳ ಮನೆಯಲ್ಲಿಯೇ ಉಳಿದಿದ್ದಾನೆ.
ಆಂಟಿ ಈಗ ಪೇಚಿಗೆ ಸಿಲುಕಿದಳು. ಇವಬ್ಬರನ್ನು ನೋಡಿದ ಚಾಲಕನಿಗೆ ಅತ್ತ ರೋಷ ಉಕ್ಕತೊಡಗಿತು. ಅದೊಂದು ದಿನ ಮೂವರೂ ಹೊರಗಡೆ ಹೋಗಿದ್ದಾರೆ. ಆ ಸಮಯದಲ್ಲಿ ಸಂಕೇತ್‌ ಮತ್ತು ಚಾಲಕ ಬಿರ್ಸಾ ನಡುವೆ ಭಾರಿ ಜಗಳವಾಗಿದೆ. ಅದೇ ಸಿಟ್ಟಿನಲ್ಲಿ ಬಿರ್ಸಾ ಅಲ್ಲಿಯೇ ಇದ್ದ ಮೇವು ಕತ್ತರಿಸುವ ಚಾಕುವಿನಿಂದ ಸಂಕೇತ್‌ನ ಕೊಲೆ ಮಾಡಿದ್ದಾನೆ.
ನಂತರ ಅದು ಯಾರಿಗೂ ಗೊತ್ತಾಗಬಾರದು ಎಂದು ಶವದ ಜತೆ ತಾನು ತಂದಿದ್ದ ಬೈಕ್‌ ಮತ್ತು ಜಾಕೆಟ್‌ ಸುಟ್ಟುಹಾಕಿದ್ದಾನೆ.ಈ ನಡುವೆ ಅರ್ಧಂಬರ್ಧ ಸುಟ್ಟ ಶವದ ಬಗ್ಗೆ ಪೊಲೀಸರಿಗೆ ವಿಷಯ ಹೋಗಿದೆ. ನಂತರ ಮೊಬೈಲ್‌ ಫೋನ್‌ ಕರೆಗಳನ್ನು ಪರಿಶೀಲನೆ ಮಾಡಿದಾಗ ಆಂಟಿಯ ಜತೆ ಮಾತನಾಡಿರುವ ವಿಷಯ ತಿಳಿದಿದೆ. ಆಕೆಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಹೊರಬಂದಿದೆ. ಸದ್ಯ ಆಂಟಿ ಮತ್ತು ಚಾಲಕನನ್ನು ಬಂಧಿಸಲಾಗಿದೆ.
ಮೊದಲ ರಾತ್ರಿಯೇ ನೀವು ನನಗೆ ಬೇಡ ಎಂದುಬಿಟ್ಟಳು- ನರಕವಾಗಿರುವ ಬದುಕನ್ನು ಹೇಗೆ ಸಹಿಸಲಿ?

ಮಕ್ಕಳು ಪಾಲಕರನ್ನು ಕಡೆಗಣಿಸುತ್ತಿದ್ದರೆ, ಅವರಿಗೆ ಆಸ್ತಿ ಕೊಡದೇ ಮಾರಲು ಅವಕಾಶವಿದೆಯಾ?

ಒಂಟಿಯಾಗಿ ಕಾರಿನಲ್ಲಿ ಪ್ರಯಾಣಿಸುವಾಗ ಮಾಸ್ಕ್‌ ಕಡ್ಡಾಯ ಮಾಡಿಲ್ಲ: ಹೈಕೋರ್ಟ್‌ಗೆ ಕೇಂದ್ರದ ಹೇಳಿಕೆ

ಯಾರ ಮೇಲಾದರೂ ಕೋಪಬಂದು ಬಾರಿಸಬೇಕು ಎನ್ನಿಸಿದರೆ, ರಸ್ತೆಗೆ ಓಡಿಹೋಗ್ತಾರೆ ಇಲ್ಲಿಯ ಮಂದಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × 1 =
Remember me
