ನನ್ನ ಮಗನಿಗೆ ಈಗ ಎಂಟು ವರ್ಷ. ಸರಿಯಾಗಿ ಮಾತನಾಡಲು ಬರುವುದಿಲ್ಲ. ಆಟಿಸಂ ಸಮಸ್ಯೆ ಇದೆ. ಕೂತ ಕಡೆ ಕೂರುವುದಿಲ್ಲ. ಕಂಡಕಂಡ ವಸ್ತುಗಳನ್ನು ಎತ್ತಿ ಬಿಸಾಡುತ್ತಾನೆ. ಸಣ್ಣವನಿದ್ದಾಗ ಒಂದು ಶಾಲೆಯಲ್ಲಿ ಸೇರಿಸಿಕೊಂಡಿದ್ದರು. ಈಗ ಅವರು ಅವನನ್ನು ಒಳಗೆ ಬರಲು ಬಿಡುತ್ತಿಲ್ಲ. “ಬೇರೆ ಮಕ್ಕಳು ಹೆದರಿ ಕೊಳ್ಳುತ್ತಾರೆ. ನೀವು ಬೇರೆ ಕಡೆ ಸೇರಿಸಿ” ಎನ್ನುತ್ತಾರೆ. ನಮಗೆ ಅವನನ್ನು ದಿನ ಪೂರ್ತಿ ನೋಡಿಕೊಳ್ಳಲು ಆಗುವುದಿಲ್ಲ. ಇಂತಹ ಮಕ್ಕಳನ್ನೂ ಎಲ್ಲ ಮಕ್ಕಳ ಜೊತೆಗೇ ಓದಿಸಬೇಕು ಎಂದು ಕಾನೂನು ಇದೆಯಲ್ಲವೇ? ಈಗ ನಾನು ಶಾಲೆಯವರ ವಿರುದ್ಧ ಕೇಸು ಹಾಕಬಹುದೇ?
ಉತ್ತರ;ನಿಮ್ಮ ಪರಿಸ್ಥಿತಿ ಕೇಳಿ ಅನುಕಂಪ ಆಗುತ್ತಿದೆ. ಆದರೆ, ಆಟಿಸಂ ಇರುವ ಮಕ್ಕಳನ್ನು ಬೇರೆ ಸಾಮಾನ್ಯ ಮಕ್ಕಳ ಜೊತೆಗೆ ಓದಿಸಲು ನೀವು ಕೇಸು ಹಾಕಿ ಆದೇಶ ಪಡೆಯಲಾಗುವುದಿಲ್ಲ. ಆಟಿಸಂ ಯಾವ ಹಂತದಲ್ಲಿ ಇದೆ ಎನ್ನುವುದೂ ನೋಡಲಾಗುತ್ತದೆ.
ಮೇಲಾಗಿ ನೀವು ಹೇಳಿರುವಂತಹ ಪರಿಸ್ಥಿತಿಯಲ್ಲಿ , ನಿಮ್ಮ ಮಗನನ್ನು ನಿಭಾಯಿಸಲು ಅವರಿಗೂ ಕಷ್ಟವಾಗುತ್ತದೆ. ಆಟಿಸಂ ಮಕ್ಕಳಿಗಾಗೇ ಪ್ರತ್ಯೇಕ ಶಾಲೆ ಇರುತ್ತದೆ. ಅಲ್ಲಿ ಸೇರಿಸುವುದರಿಂದ ನಿಮ್ಮ ಮಗನಿಗೂ ಒಳ್ಳೆಯದಾಗುತ್ತದೆ. ಅಲ್ಲಿ ಅವರನ್ನು ನೋಡಿಕೊಳ್ಳಲು ಪರಿಣತ ಶಿಕ್ಷಕರು ಇರುತ್ತಾರೆ.
ದಯವಿಟ್ಟು ನೀವು ಆ ಪ್ರಯತ್ನವನ್ನು ಮಾಡಿ. ಹೆಚ್ಚಿನ ವಿವರಗಳಿಗೆ ನಿಮ್ಮ ತಾಲ್ಲೂಕಿನ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿಯನ್ನು ಸಂಪರ್ಕಿಸಿ.
ತನಗೆ ಬಂದಿರುವ ಮೃತ ಗಂಡನ ಆಸ್ತಿಯನ್ನು ಮಹಿಳೆ ಹೇಗೆ ಪಾಲು ಮಾಡಬಹುದು? ಕಾನೂನು ಏನು ಹೇಳಿದೆ ನೋಡಿ…

ಆಸ್ತಿ ಸ್ವಯಾರ್ಜಿತವಾಗಿದ್ದರೆ ಮೊಮ್ಮಕ್ಕಳಿಗೆ ಅದರಲ್ಲಿ ಯಾವುದೇ ಪಾಲು ಇಲ್ಲ- ಕಾನೂನಲ್ಲಿ ಉಲ್ಲೇಖವಾಗಿದ್ದು ಹೀಗಿದೆ ನೋಡಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
