ನವದೆಹಲಿ:ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಭಾರಿ ಮುಖಭಂಗ ಆಗುವಂಥ ಘಟನೆಯೊಂದು ನಡೆದಿದೆ. ಅದೇನೆಂದರೆ, “ನಾನು ನಿಮ್ಮ ಅಭಿಮಾನಿ” ಎಂದು ಹೇಳಿಕೊಂಡ ಆಟೋ ಡ್ರೈವರ್​ ಒಬ್ಬರು ಕೇಜ್ರಿವಾಲ್​ ಅವರನ್ನು ಮನೆಗೆ ಊಟಕ್ಕೆ ಕರೆದಿದ್ದರು. ಈ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದ ಕೇಜ್ರಿವಾಲ್​ ಅವರು ಮನೆಗೆ ಹೋಗಿ ಊಟಕ್ಕೆ ಹೋಗಿ ಫೋಟೋಗೆ ಪೋಸ್​ ಕೊಟ್ಟು ಅದನ್ನು ಶೇರ್​ ಕೂಡ ಮಾಡಿಕೊಂಡಿದ್ದರು.
ಆದರೆ ಮಾರನೆಯ ದಿನವೇ ಈ ಆಟೋ ಡ್ರೈವರ್​ ಉಲ್ಟಾ ಹೊಡೆದಿದ್ದಾರೆ. ‘ನಾನು ಚಿಕ್ಕಂದಿನಿಂದಲೂ ನರೇಂದ್ರ ಮೋದಿಯವರ ಭಕ್ತ. ಯಾವಾಗಲೂ ಬಿಜೆಪಿಗೇ ವೋಟ್​ ಹಾಕಿದ್ದೇನೆ. ನಾನು ಇರುವವರೆಗೂ ಮೋದಿಯವರಿಗೇ ವೋಟ್​ ಹಾಕುವುದು. ಕೇಜ್ರಿವಾಲ್​ ಅವರನ್ನು ಸುಮ್ಮನೇ ಊಟಕ್ಕೆ ಕರೆದಿದ್ದೆ’ ಎಂದಿದ್ದಾರೆ. ಅವರು ಹೇಳಿರುವ ಈ ಮಾತು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದ್ದು, ಕೇಜ್ರಿವಾಲ್​ ಮುಖಭಂಗ ಅನುಭವಿಸುವಂತಾಗಿದೆ.
ಮುಂಬರುವ ವಿಧಾನಸಭಾ ಚುನಾವಣೆಯ ಆಮ್ ಆದ್ಮಿ ಪಕ್ಷದ ಪ್ರಚಾರದ ಭಾಗವಾಗಿ ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿದ್ದ ಅರವಿಂದ್ ಕೇಜ್ರಿವಾಲ್ ಅಹಮದಾಬಾದ್‌ನಲ್ಲಿ ಆಟೋ ರಿಕ್ಷಾ ಚಾಲಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು. ಆ ಸಮಯದಲ್ಲಿ ಆಟೋ ಚಾಲಕ ವಿಕ್ರಮ್ ದಾತಾನಿ ತಾವು ಕೇಜ್ರಿವಾಲ್​ ಅವರ ಅಭಿಮಾನಿ ಎಂದು ಹೇಳಿಕೊಂಡು ಅವರನ್ನು ಮನೆಗೆ ಊಟಕ್ಕೆ ಕರೆದಿದ್ದರು. ಈ ಬಗ್ಗೆ ಹೆಮ್ಮೆಯಿಂದ ಬೀಗಿದ್ದ ಕೇಜ್ರಿವಾಲ್​ ಆಹ್ವಾನ ಸ್ವೀಕರಿಸಿ ಫೋಟೋ ಸೆಷನ್​ ಮಾಡಿಸಿಕೊಂಡಿದ್ದರು.
ಆದರೆ ಇದೀಗ ಅವತ್ತಿನ ಗುಟ್ಟು ಬಿಚ್ಚಿಟ್ಟಿದ್ದಾರೆ ಆಟೋ ಚಾಲಕ ವಿಕ್ರಮ್ ದಾತಾನಿ. ಬಿಜೆಪಿ ಟೋಪಿ ಧರಿಸಿ ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿಗೆ ಆಗಮಿಸಿದ್ದ ಅವರು, ತಾವು ಕೇಜ್ರಿವಾಲ್​ ಅವರನ್ನು ಏಕೆ ಮನೆಗೆ ಕರೆದೆ ಎಂಬ ಬಗೆಗಿನ ರಹಸ್ಯ ಬಿಚ್ಚಿಟ್ಟಿದ್ದಾರೆ. “ನಾನು ಬಾಲ್ಯದಿಂದಲೂ ಮೋದಿ ಅವರ ಅಭಿಮಾನಿಯೇ. ಆದರೆ ನಮ್ಮ ಆಟೊ ಒಕ್ಕೂಟದವರು ಹೇಳಿದ್ದ ಕಾರಣ, ಸುಮ್ಮನೇ ಅರವಿಂದ್ ಕೇಜ್ರಿವಾಲ್ ಅವರನ್ನು ನನ್ನ ಮನೆಗೆ ಆಹ್ವಾನಿಸಿದ್ದೇ ಅಷ್ಟೇ. ಹಾಗೆಂದು ನಾನು ಯಾವತ್ತೂ ಆಮ್​ ಆದ್ಮಿ ಪಕ್ಷಕ್ಕೆ ವೋಟ್​ ಹಾಕುವವನಲ್ಲ’ ಎಂದಿದ್ದಾರೆ! ಆಟೋ ಸಂಘದವರು ಚಾಲೆಂಜ್​ ಮಾಡಿದ್ದರಿಂದ ಕೇಜ್ರಿವಾಲ್​ ಅವರನ್ನು ಮನೆಗೆ ದಾತಾನಿ ಊಟಕ್ಕೆ ಕರೆದಿದ್ದರು ಎನ್ನಲಾಗಿದೆ. ಇದನ್ನು ಬಿಜೆಪಿ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದು, ಥಹರೇವಾರಿ ಕಮೆಂಟ್​ ಬರುತ್ತಿವೆ(ಏಜೆನ್ಸೀಸ್​)
ವರ್ಕೌಟ್​ಗೆ ಇನ್ನೊಂದು ಬಲಿ: ಚಿತ್ರರಂಗಕ್ಕೆ ಶಾಕ್​- ಜ್ಯೂನಿಯರ್​ ಸಲ್ಮಾನ್​ ಖಾನ್​ ಖ್ಯಾತಿಯ ನಟ ಇನ್ನಿಲ್ಲ

ಅವರಿಗೆ ಜೀವಾವಧಿ ಶಿಕ್ಷೆ ಆಗುವವರೆಗೂ ನನ್ನ ಅಂತಿಮ ವಿಧಿವಿಧಾನ ಮಾಡ್ಬೇಡಿ: ಗ್ರಾಪಂ ಸದಸ್ಯನ ಪತ್ನಿ ಸಾವಿಗೆ ಪೊಲೀಸರು ಕಾರಣವೆ?

ಕುಮಾರಸ್ವಾಮಿ v/s ಯೋಗೇಶ್ವರ್​: ಗುದ್ದಲಿಪೂಜೆ ನಡುವೆ ಬಂದ ಮೊಟ್ಟೆ- ಚನ್ನಪಟ್ಟಣ ಧಗಧಗ…

Training to be organized: ನಿಷೇಧಿತ ಪಿಎಫ್‌ಐ ಮುಖಂಡರ ಡೈರಿಯ ರಹಸ್ಯ ಬಯಲು- ಸ್ಫೋಟಕ ಮಾಹಿತಿ ಬಹಿರಂಗ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:four × 3 =
Remember me
