ಆಗ್ರಾ (ಉತ್ತರ ಪ್ರದೇಶ): ಈ ಚಿತ್ರದಲ್ಲಿ ಕಾಣುವ ನಾಲ್ವರು ಮುದ್ದಾದ ಕಂದಮ್ಮಗಳು ಹುಟ್ಟಿರುವುದು ಆಗ್ರಾದ ನುನಿಹಾಯ್​ ಗ್ರಾಮದ ಮನೋಜ್ ಮತ್ತು ಖುಷ್ಬೂ ದಂಪತಿಗೆ. ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಮನೋಜ್​ ಈ ನಾಲ್ವರು ಮಕ್ಕಳ ಜನನದ ನಂತರ ಏಳು ಮಕ್ಕಳ ಅಪ್ಪ ಆದಂತಾಗಿದೆ. ಏಕೆಂದರೆ ಈ ದಂಪತಿಗೆ ಇದಾಗಲೇ ಮೂವರು ಮಕ್ಕಳಿದ್ದಾರೆ.
ಮೊದಲ ಮೂವರು ಮಕ್ಕಳು ಕೂಡ ಹೆಣ್ಣುಮಕ್ಕಳೆಂದು, ಗಂಡು ಮಗುವಿಗಾಗಿ ಮತ್ತೆ ಗರ್ಭ ಧರಿಸಲಾಗಿತ್ತು. ಸ್ಕ್ಯಾನಿಂಗ್​ ಮಾಡಿಸಿದ್ದಾಗ ಅವಳಿ-ಜವಳಿ ಎಂದು ತಿಳಿದುಬಂದಿತ್ತು. ನಂತರ ಡೆಲಿವರಿ ಆದಾಗಲೇ ತಿಳಿದುಬಂದದ್ದು ಹೊಟ್ಟೆಯಲ್ಲಿ ಇದ್ದುದು ನಾಲ್ವರು ಮಕ್ಕಳೆಂದು.
ಈ ನಾಲ್ವರು ಮಕ್ಕಳ ಪೈಕಿ ಮೂವರು ಹೆಣ್ಣುಮಕ್ಕಳಾದರೆ, ಒಬ್ಬ ಮಾತ್ರ ಗಂಡುಮಗು. ತಾಯಿ ಮತ್ತು ನಾಲ್ವರು ಮಕ್ಕಳು ಆರೋಗ್ಯದಿಂದ ಇರುವುದಾಗಿ ವೈದ್ಯರು ಹೇಳಿದ್ದಾರೆ.
ಆಸ್ಪತ್ರೆಯ ನಿರ್ವಾಹಕ ಮಹೇಶ್ ಚೌಧರಿ ಮಾತನಾಡಿ, “ಹಲವು ವರ್ಷಗಳಿಂದ ಆಸ್ಪತ್ರೆಯನ್ನು ನಿರ್ವಹಿಸುತ್ತಿದ್ದೇನೆ. ಆದರೆ, ಇಂತಹ ಪವಾಡ ನೋಡಿಲ್ಲ” ಎಂದು ಅಚ್ಚರಿ ವ್ಯಕ್ತಪಡಿಸಿದರು. ಇದೇ ವೇಳೆ, “ಕುಟುಂಬಕ್ಕೆ ಆರ್ಥಿಕ ಸಹಾಯದ ಅಗತ್ಯವಿದ್ದರೆ ನೀಡಲು ನಾವು ಸಿದ್ಧರಿದ್ದೇವೆ. ವಿದ್ಯಾಭ್ಯಾಸಕ್ಕೂ ವ್ಯವಸ್ಥೆ ಮಾಡುತ್ತೇವೆ” ಎಂದು ಭರವಸೆ ಕೊಟ್ಟರು.
VIDEO: ಮಹಿಳೆ ಜೀವಕ್ಕೆ ಆಪತ್ತು ತರಲೆಂದೇ ಕಾಯುತ್ತಿತ್ತು ತೆಂಗಿನಕಾಯಿ! ಅಬ್ಬಬ್ಬಾ ಎನ್ನುವ ವಿಡಿಯೋ ವೈರಲ್​

ಪೆಟ್ರೋಲ್​, ಗ್ಯಾಸ್​ ನಂತ್ರ ಈಗ ರಾಜ್ಯದ ಜನತೆಗೆ ಕರೆಂಟ್​ ಶಾಕ್​: ಜುಲೈ 1ರಿಂದ ದರ ಏರಿಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − seven =
Remember me
