ನವದೆಹಲಿ:ನವದೆಹಲಿ: ಪತಂಜಲಿ ಆಯುರ್ವೇದ ಚಿಕಿತ್ಸಾಲಯ ಸ್ಥಾಪನೆ ಮಾಡುವ ಮೂಲಕ ಇಡೀ ಜಗತ್ತಿನ ಕಣ್ಣು ಭಾರತದ ಚಿಕಿತ್ಸಾ ಪದ್ಧತಿಯತ್ತ ನೋಡುವಂತೆ ಮಾಡಿದ ಬಾಬಾ ರಾಮ್‌ದೇವ್‌ ಅವರ ಸಾಧನೆ ಅದ್ಭುತವಾದದ್ದು. ನಮ್ಮ ಪ್ರಾಚೀನ ಔಷಧೀಯ ಪದ್ಧತಿಯಾದ ಗಿಡಮೂಲಿಕೆಗಳನ್ನು ಹೀಗಳೆಯುತ್ತಿರುವವರ ಬುಡವನ್ನೇ ಅಲುಗಾಡುವಂತೆ ಮಾಡಿರುವ ಬಾಬಾ ರಾಮ್‌ದೇವ್‌ ಅವರ ಸಾಧನೆ ಇಲ್ಲಿಗೇ ಮುಗಿಯುವುದಿಲ್ಲ.
ಒಂದು ಕಾಲಘಟ್ಟದಲ್ಲಿ ಪಾರ್ಶ್ವವಾಯು ಹೊಡೆದಾಗ ಇಡೀ ವೈದ್ಯಕೀಯ ರಂಗವೇ ಕೈಚೆಲ್ಲಿ ನಿಂತ ಸಂದರ್ಭದಲ್ಲಿ, ಯೋಗ ಮತ್ತು ಆಯುರ್ವೇದದ ಮೂಲಕ ತಮ್ಮ ಸಮಸ್ಯೆಯನ್ನು ತಾವೇ ಹೋಗಲಾಡಿಸುವ ಮೂಲಕ ಇಡೀ ವೈದ್ಯಕೀಯ ರಂಗವೇ ನಿಬ್ಬೆರಗಾಗುವಂತೆ ಮಾಡಿದವರು ರಾಮದೇವ್‌. ಅಲ್ಲಿಂದಲೇ ಶುರುವಾಗಿದ್ದು ಅವರ ಪತಂಜಲಿ ಆಯುರ್ವೇದ ಶಾಲೆ. ಯೋಗ, ಧ್ಯಾನ ಹಾಗೂ ಆಯುರ್ವೇದ ಚಿಕಿತ್ಸೆ ಮೂಲಕ ಹಲವಾರು ಸಮಸ್ಯೆಗಳನ್ನು ಪರಿಹರಿಸಿದೆ ಪತಂಜಲಿ.
ಇವರ ಜನಪ್ರಿಯತೆ ಹೆಚ್ಚುತ್ತಾ ಹೋದಂತೆ, ಕಾಲೆಳೆಯುವವರು, ಅಪಹಾಸ್ಯ ಮಾಡುವವರು, ಬೆದರಿಕೆ ಹಾಕುವವರೂ ಹೆಚ್ಚುತ್ತಲೇ ಹೋದರು. ಯಾವುದಕ್ಕೂ ಬೆದರದೇ, ಜಗ್ಗದೇ ಇಂದು ಪತಂಜಲಿಯತ್ತ ವಿಶ್ವದ ಕಣ್ಣು ನೆಡುವಂತೆ ಮಾಡಿದ್ದರೂ, ಇವರನ್ನು ಬೇರೆ ಬೇರೆ ಕಾರಣಗಳಿಂದ ವೇದಿಕೆಗಳ ಮೇಲೆ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಅಪಹಾಸ್ಯ ಮಾಡುವುದು ನಡೆದೇ ಇದೆ. ಕೆಲ ತಿಂಗಳ ಹಿಂದೆ ಆನೆಯ ಮೇಲಿನಿಂದ ಬಿದ್ದಾಗಲೂ ಇವರನ್ನು ಟ್ರೋಲ್‌ ಮಾಡಿದವರೇ ಹೆಚ್ಚು.
ಅದೇನೇ ಇದ್ದರೂ, ಎಲ್ಲವನ್ನೂ ತಿಳಿಯುತ್ತಲೇ ತಮ್ಮ ಸಾಧನೆಯ ಮೂಲಕ ನಗುನಗುತ್ತಲೇ ದಿಟ್ಟ ಉತ್ತರ ಕೊಡುವಲ್ಲಿ, ತಮ್ಮನ್ನು ಹೀಯಾಳಿಸುವವರನ್ನು ಅದೇ ನಗುಮುಖದಿಂದ ಬಾಯಿಮುಚ್ಚುವಂತೆ ಮಾಡುವಲ್ಲಿ ಬಾಬಾ ರಾಮ್‌ದೇವ್‌ ನಿಸ್ಸೀಮರು. ಅದಕ್ಕೇ ಇನ್ನೊಂದು ತಾಜಾ ಉದಾಹರಣೆ ಇದು.
ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಬಾಬಾ ರಾಮ್‌ದೇವ್‌ ಅವರನ್ನು ನಟ ರಣವೀರ್‌ ಸಿಂಗ್‌ ನೃತ್ಯಕ್ಕೆ ಆಹ್ವಾನಿಸಿದ್ದಾರೆ. ನನಗೆ ನೃತ್ಯವೆಲ್ಲಾ ಬರಲ್ಲ ಎಂದು ರಾಮ್​ದೇವ್​ ಹೇಳಿದ್ದಾರೆ. ಅದಕ್ಕೆ ನಟ, ಪರವಾಗಿಲ್ಲ, ಒಂದೆರಡು ಸ್ಟೆಪ್​ ಹಾಕಿ ಸಾಕು ಎಂದಿದ್ದಾರೆ. ಯೋಗ, ಧ್ಯಾನ, ಪ್ರಾಣಾಯಾಮ ಇವುಗಳ ಹೊರತಾಗಿಯೂ ಬಾಬಾ ರಾಮ್‌ದೇವ್‌ ನೃತ್ಯವೇನು ಮಾಡುತ್ತಾರೆ ಎಂದು ಎಲ್ಲರೂ ಅಂದುಕೊಂಡಿರಲಿಕ್ಕೆ ಸಾಕು. ನಾನು ಮಾಡಿದಂತೆ ನೀವು ಮಾಡಬೇಕು ಎಂದು ರಾಮ್‌ದೇವ್‌ ಹೇಳಿದಾಗ, ಒಹೊ ಖಂಡಿತವಾಗಿಯೂ ಮಾಡಬಲ್ಲೆ ಎಂದು ರಣವೀರ್‌ ಉತ್ತರಿಸಿದ್ದಾರೆ.
ಹಿಂದೆ ಮುಂದೆ ನೋಡದ ಬಾಬಾ ರಾಮ್‌ದೇವ್‌, ತಮ್ಮ ಮಾಲೂಲಿ ಶೈಲಿನಲ್ಲಿ ಪಂಚೆಯನ್ನು ಎತ್ತಿಕಟ್ಟಿ ಅಲ್ಲಿ ಹಾಕಿದ ಬಾಲಿವುಡ್‌ ಗೀತೆಗೆ ಯೋಗದ ಮೂಲಕವೇ ನೃತ್ಯ ಮಾಡಿಸಿಯೇ ತೋರಿಸಿದರು. ಇವರು ಮಾಡಿದ ಒಂದೇ ಒಂದು ಆಸನ ಮಾಡಲಾಗದ ನಟ ರಣವೀರ್‌ ಸುಸ್ತಾಗಿ ಹೋದರು. ನಂತರ ಸೋಲನ್ನೊಪ್ಪಿ ಉದ್ದಂಡ ನಮಸ್ಕಾರ ಹಾಕಿಬಿಟ್ಟಿದ್ದಾರೆ.
ಕೆಲ ವರ್ಷಗಳ ಹಿಂದಿನ ಈ ವಿಡಿಯೋ ಇದೀಗ ಮತ್ತು ಭಾರಿ ವೈರಲ್‌ ಆಗುತ್ತಿದ್ದು, ನೀವೂ ನೋಡಿ… (ಕೃಪೆ: ಆಜ್​ತಕ್​)

ಬೇರೆ ಹೆಣ್ಣಿನತ್ತ ಕಣ್ಣೆತ್ತಿಯೂ ನೋಡಲ್ಲ, ಆದರೂ ಪತ್ನಿ ಒದೀತಾಳೆ, ಹೊಡೀತಾಳೆ… ಏನು ಮಾಡಲಿ?

ಅನಾರೋಗ್ಯದಿಂದ ಬಳಲುತ್ತಿರುವವರು ವಿಲ್‌ ಬರೆದರೆ ಅದು ಮಾನ್ಯವಾಗುತ್ತಾ?

ಭೂಲೋಕದ ಸ್ವರ್ಗದ ದರ್ಶನ ಮಾಡಿರುವಿರಾ? ಇಲ್ಲಿದೆ ನೋಡಿ ಕಣ್ಮನ ಸೆಳೆಯುವ ವಿಡಿಯೋ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:six − 5 =
Remember me
